ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಡಿಸೆಂಬರ್ 28) ಕರಾವಳಿ ಉತ್ಸವದಲ್ಲಿ ಭಾಗಿಯಾಗಿದ್ದು, ಈ ವೇಳೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಿಹಿ ಸುದ್ದಿ ನೀಡಿದ್ದಾರೆ. ಉತ್ಸವದಲ್ಲಿ ಮಾತನಾಡಿದ ಡಿಕೆಶಿ, ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತೀರ್ಮಾನ ಮಾಡಲಾಗಿದ್ದು, ಇದಕ್ಕೆ ಹೊಸ ಪ್ರವಾಸೋದ್ಯಮ ನೀತಿರೂಪಿಸಲು ನಿರ್ಧರಿಸಲಾಗಿದೆ. ಗೋವಾ, ಮುಂಬೈ, ಸೌದಿಗೆ ನಮ್ಮವರು ಹೋಗುತ್ತಾರೆ. ಹೀಗಾಗಿ ಕರಾವಳಿಯಲ್ಲಿ ಅಭಿವೃದ್ಧಿಗೆ ನಿರ್ಧರಿಸಿದ್ದು, ಯುವಕರ ಶಕ್ತಿ, ನೈಸರ್ಗಿಕ ಸಂಪತ್ತು ಬಳಸಲು ನಿರ್ಧಾರ ಮಾಡಲಾಗಿದೆ.
ಕಾರವಾರ, (ಡಿಸೆಂಬರ್ 28): ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಡಿಸೆಂಬರ್ 28) ಕರಾವಳಿ ಉತ್ಸವದಲ್ಲಿ ಭಾಗಿಯಾಗಿದ್ದು, ಈ ವೇಳೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಿಹಿ ಸುದ್ದಿ ನೀಡಿದ್ದಾರೆ. ಕಾರವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತೀರ್ಮಾನ ಮಾಡಲಾಗಿದ್ದು, ಇದಕ್ಕೆ ಹೊಸ ಪ್ರವಾಸೋದ್ಯಮ ನೀತಿರೂಪಿಸಲು ನಿರ್ಧರಿಸಲಾಗಿದೆ. ಗೋವಾ, ಮುಂಬೈ, ಸೌದಿಗೆ ನಮ್ಮವರು ಹೋಗುತ್ತಾರೆ. ಹೀಗಾಗಿ ಕರಾವಳಿಯಲ್ಲಿ ಅಭಿವೃದ್ಧಿಗೆ ನಿರ್ಧರಿಸಿದ್ದು, ಯುವಕರ ಶಕ್ತಿ, ನೈಸರ್ಗಿಕ ಸಂಪತ್ತು ಬಳಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಚರ್ಚಿಸಲು ಜನವರಿ 10ರಂದು ಕರಾವಳಿಯ ಮೂರು ಜಿಲ್ಲೆಗಳ ಡಿಸಿಗಳ ಸಭೆ ಕರೆಯಲಾಗಿದ್ದು, ದೇಶ ವಿದೇಶದ ಬಂಡವಾಳ ಹೂಡಿಕೆದಾರರಿಗೆ ಆಹ್ವಾನ ನೀಡಲಾಗಿದೆ. ಅವರ ಸಲಹೆ, ಮಾರ್ಗದರ್ಶನ ಪರಿಗಣಿಸಲಾಗುವುದು. ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ನೀತಿ ರೂಪಿಸುವ ಜವಾಬ್ದಾರಿ ನಾನೇ ಹೊತ್ತಿದ್ದೇನೆ, ನಾನೆ ಈ ಸಭೆ ಮಾಡ್ತೇನೆ ಎಂದರು. ಈ ಮೂಲಕ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಕೆಶಿ ಪಣತೊಟ್ಟಿದ್ದಾರೆ.
