ಬೆಂಗಳೂರು ಶಾಸಕರಕ ಸಭೆಯಲ್ಲಿ ಡಿಸಿಎಂ ಪಕ್ಷದ ಸಂಘಟನೆ ಮತ್ತು ಬಲವರ್ಧನೆಯನ್ನು ಚರ್ಚಿಸಿದರು: ರಿಜ್ವಾನ್ ಅರ್ಷದ್

Updated on: Aug 13, 2025 | 10:33 AM

ಪಾಲಿಕೆಗೆ ಶೀಘ್ರದಲ್ಲೇ ಚುನಾವಣೆಗಳು ನಡೆಯಲಿವೆ, ವಾರ್ಡ್​ ನೋಟಿಫಿಕೇಶ್​ಗಳಿಗಾಗಿ ಡಿಲಿಮಿಟೇಶನ್ ಕಮಿಟಿ ಕೆಲಸ ಮಾಡುತ್ತಿದೆ ಮತ್ತು ಸಮಿತಿಯ ಸದಸ್ಯರು ಸಾಧ್ಯವಾದಷ್ಟು ಬೇಗ ವಾರ್ಡ್​ಗಳ ಸೀಮೆಗಳನ್ನು ನಿಗದಿಗೊಳಿಸಲಿದ್ದಾರೆ, ಅದು ಮುಗಿದ ಬಳಿಕ ಮೀಸಲು ವಾರ್ಡ್​ಗಳ ಘೋಷಣೆಯಾಗಿ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಶಾಸಕ ಅರ್ಷದ್ ರಿಜ್ವಾನ್ ಹೇಳಿದರು.

ಬೆಂಗಳೂರು, ಆಗಸ್ಟ್ 13: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರು ನಗರದ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ರಿಜ್ವಾನ್ ಅರ್ಷದ್, ಸಿಎಲ್​ಪಿ ಸಭೆಯ ನಂತರ ಡಿಸಿಎಂ ಸಭೆ ನಡೆಸಿದರು, ಬಿಬಿಎಂಪಿ ಚುನಾವಣೆಗಳು ಹತ್ತಿರದಲ್ಲೇ ಇವೆ, ಅದಕ್ಕಾಗಿ ಪಕ್ಷದ ಸಂಘಟನೆ, ಬಲವರ್ಧನೆ ಬಗ್ಗೆ ಅವರು ಚರ್ಚಿಸಿದರು ಮತ್ತು ಶಾಸಕರ ಅಭಿಪ್ರಾಯಗಳನ್ನೂ ಕೇಳಿದರು ಎಂದು ಹೇಳಿದರು. ಅನುದಾನ ಬಿಡುಗಡೆಯ ಬಗ್ಗೆ ಶಿವಕುಮಾರ್ ಏನನ್ನೂ ಚರ್ಚಿಸಲಿಲ್ಲ ಎಂದು ರಿಜ್ವಾನ್ ಹೇಳಿದರು.

ಇದನ್ನೂ ಓದಿ:  ಕಾಂಗ್ರೆಸ್​ ಶಾಸಕಾಂಗ ಸಭೆ ಬಳಿಕ ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ