ಗಾಗಲ್ ಹಾಕಿ ಡಿಸಿಎಂ ಡಿಕೆ ಶಿವಕುಮಾರ್ ಜಾಲಿ ಬೋಟ್ ರೈಡ್!
ಡಿಸಿಎಂ ಡಿಕೆ ಶಿವಕುಮಾರ್ ರವರು ರಾಮನಗರದ ಕಣ್ವ ಜಲಾಶಯಕ್ಕೆ ಭೇಟಿ ನೀಡಿ, ದೋಣಿ ಸವಾರಿ ಮಾಡಿದರು. ಶಾಸಕ ಸಿ.ಪಿ.ಯೋಗೇಶ್ವರ್ ಮತ್ತು ಮಾಜಿ ಸಂಸದ ಡಿಕೆ ಸುರೇಶ್ ಅವರೊಂದಿಗೆ ಅವರು ಆನಂದಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಈ ಭೇಟಿ ನಡೆದಿದೆ ಎಂದು ತಿಳಿದುಬಂದಿದೆ.
ರಾಮನಗರ, ಫೆಬ್ರವರಿ 02: ಕೃತಜ್ಞತಾ ಸಮಾವೇಶದ ಬಳಿಕ ಚನ್ನಪಟ್ಟಣ ಕಣ್ವಜಲಾಶಯ ವೀಕ್ಷಣೆ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕಣ್ಣಿಗೆ ಗಾಗಲ್ ಹಾಕಿ, ಬೋಟ್ನಲ್ಲಿ ಫುಲ್ ಮಿಂಚಿದ್ದಾರೆ. ಡಿಕೆ ಶಿವಕುಮಾರ್ ಜತೆ ಶಾಸಕ ಸಿಪಿ ಯೋಗೇಶ್ವರ್ ಪಂಚೆಯಲ್ಲಿಯೇ ರೈಡ್ ಮಾಡಿದ್ದಾರೆ. ಮಾಜಿ ಸಂಸದ ಡಿಕೆ ಸುರೇಶ್ ಕೂಡ ಬೋಟ್ ರೈಡ್ ಮಾಡಿದ್ದಾರೆ. ಪ್ರವಾಸೋದ್ಯಮ ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಯೋಜನೆ ಜಾರಿ ಮಾಡಲಾಗುತ್ತಿದೆ. ಹೀಗಾಗಿ ಡ್ಯಾಂ ಪರಿಶೀಲನೆ ಮಾಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.