ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ: ಐವರು ಪ್ರಾಣಾಪಾಯದಿಂದ ಪಾರು
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನಪಕುಂಟೆ ಬಳಿ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಒಕ್ಕಣೆ ಮಾಡಲು ಹಾಕಿದ್ದ ಹುರುಳಿ ಮೇಲೆ ಕಾರು ಚಲಿಸಿದಾಗ ಘಟನೆ ಸಂಭವಿಸಿದೆ. ಕಾರು ಸಂಪೂರ್ಣ ಭಸ್ಮವಾಯಿತಾದರೂ, ಕಾರಿನಲ್ಲಿದ್ದ ಐದು ಜನರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು. ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದಾರೆ.
ಕೋಲಾರ, ಫೆಬ್ರವರಿ 02: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ (fire) ಕಾಣಿಸಿಕೊಂಡಿದ್ದು, ಐವರು ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನಪಕುಂಟೆ ಬಳಿ ನಡೆದಿದೆ. ಒಕ್ಕಣೆ ಮಾಡಲು ಹಾಕಿದ್ದ ಹುರುಳಿ ಮೇಲೆ ಚಲಿಸುವಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಗಳೂರು ಮೂಲದ ಅರೋನ್‌ಗೆ ಸೇರಿದ ಕಾರು ಸಂಪೂರ್ಣ ಭಸ್ಮವಾಗಿದೆ. ಸದ್ಯ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 02, 2025 07:27 PM
Latest Videos