ರಾಣಾ ವಿವಾಹ: ಪ್ರೀತಿಯಿಂದ ಆಮಂತ್ರಣ ನೀಡಿದ ಸಹೋದರಿ ರಕ್ಷಿತಾ ಪ್ರೇಮ್

ರಾಣಾ ವಿವಾಹ: ಪ್ರೀತಿಯಿಂದ ಆಮಂತ್ರಣ ನೀಡಿದ ಸಹೋದರಿ ರಕ್ಷಿತಾ ಪ್ರೇಮ್

ಮದನ್​ ಕುಮಾರ್​
|

Updated on: Feb 02, 2025 | 5:07 PM

ನಟಿ ರಕ್ಷಿತಾ ಪ್ರೇಮ್​ ಅವರ ಮನೆಯಲ್ಲಿ ಶುಭ ಕಾರ್ಯಕ್ಕೆ ಸಕಲ ಸಿದ್ಧತೆ ನಡೆದಿದೆ. ರಕ್ಷಿತಾ ಅವರ ತಮ್ಮ ರಾಣಾ ಮದುವೆ ಆಗುತ್ತಿದ್ದಾರೆ. ‘ಏಕ್ ಲವ್ ಯಾ’ ಸಿನಿಮಾದಲ್ಲಿ ನಟಿಸಿ ಗುರುತಿಸಿಕೊಂಡಿರುವ ರಾಣಾ ಅವರ ಮದುವೆಗೆ ರಕ್ಷಿತಾ ಅವರು ಆಮಂತ್ರಣ ನೀಡಿದ್ದಾರೆ. ಆ ಕುರಿತು ಇಂದು (ಫೆ.2) ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.

ಸ್ಯಾಂಡಲ್​ವುಡ್​ನ ಖ್ಯಾತ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ, ‘ಏಕ್ ಲವ್ ಯಾ’ ಖ್ಯಾತಿಯ ನಟ ರಾಣಾ ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರಕ್ಷಿತಾ ಅವರು ಆಮಂತ್ರಣ ನೀಡಿದ್ದಾರೆ. ವಿಶೇಷ ಏನೆಂದರೆ, ರಾಣಾ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಕೂಡ ರಕ್ಷಿತಾ. ‘ತಮ್ಮನಿಗೆ ಎಲ್ಲರೂ ಅಭಿನಂದನೆ ಹೇಳೋಣ. ಇದು ನಮ್ಮ ಕುಟುಂಬದ ಪ್ರೀತಿಯ ಆಹ್ವಾನ’ ಎಂದು ಮಾಧ್ಯಮದ ಸ್ನೇಹಿತರನ್ನು ರಕ್ಷಿತಾ ಅವರು ಆಹ್ವಾನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.