Kichcha Sudeep: ರಮ್ಯಾ ಅಥವಾ ರಕ್ಷಿತಾ? ಈ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ ಏನು?
ಕಿಚ್ಚ ಸುದೀಪ್ ಅವರು ಹಲವು ಹೀರೋಯಿನ್ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅವರ ಎಲ್ಲರ ಜೊತೆಯೂ ಒಳ್ಳೆಯ ಗೆಳೆತನ ಹೊಂದಿದ್ದಾರೆ. ಅದರಲ್ಲೂ ರಮ್ಯಾ ಅಥವಾ ರಕ್ಷಿತಾ ಮಧ್ಯೆ ಅವರಿಗೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಈಗ ಸುದೀಪ್ಗೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳೋ ಪರಿಸ್ಥಿತಿ ಎದುರಾಗಿದೆ.
ಕಿಚ್ಚ ಸುದೀಪ್ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 28 ವರ್ಷಗಳು ಕಳೆದಿವೆ. ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈಗ ಅವರನ್ನು ಸಮರ್ಜಿತ್ ಲಂಕೇಶ್ ಅವರು ಸಂದರ್ಶನ ಮಾಡಿದ್ದಾರೆ. ಈ ವೇಳೆ ಅವರಿಗೆ ಫೇವರಿಟ್ ಯಾವುದು ಎನ್ನುವುದನ್ನು ಹೇಳೋ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನ ಸುದೀಪ್ ಸಮರ್ಥವಾಗಿ ನಿಭಾಯಿಸಿದ್ದಾರೆ. ರಮ್ಯಾ ಹಾಗೂ ರಕ್ಷಿತಾ ಅವರ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಮೆಚ್ಚುಗೆ ಪಡೆದಿದೆ.
ಸಮರ್ಜಿತ್ ನಟನೆಯ ‘ಗೌರಿ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದಲ್ಲಿ ಸಮರ್ಜಿತ್ಗೆ ಸನ್ಯಾ ಅಯ್ಯರ್ ನಾಯಕಿ. ಈ ಚಿತ್ರವನ್ನು ಸ್ವತಃ ಸಮರ್ಜಿತ್ ತಂದೆ ಇಂದ್ರಜಿತ್ ಲಂಕೇಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ಸಮರ್ಜಿತ್ ಅವರು ಸುದೀಪ್ ಅವರನ್ನು ಸಂದರ್ಶಿಸಿದ್ದಾರೆ. ಈ ಸಂದರ್ಶನ ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಆಗಿದೆ. ಇದರಲ್ಲಿ ರ‍್ಯಾಪಿಡ್ ಫೈರ್ ರೀತಿಯ ಪ್ರಶ್ನೆ ಕೇಳಲಾಗಿದೆ.
ಯಾವುದು ಫೇವರಿಟ್ ಎಂಬುದನ್ನು ಹೇಳಬೇಕಿತ್ತು. ‘ಆಟೋಗ್ರಾಫ್ ಅಥವಾ ಜಸ್ಟ್ ಮಾತ್ ಮಾತಲ್ಲಿ’ ಎನ್ನುವ ಪ್ರಶ್ನೆಗೆ ಸುದೀಪ್ ಆಟೋಗ್ರಾಫ್ ಆಯ್ಕೆ ಮಾಡಿದ್ದಾರೆ. ‘ನಿರ್ದೇಶನ ಅಥವಾ ನಟನೆ’ ಎನ್ನುವ ಪ್ರಶ್ನೆಗೆ ನಿರ್ದೇಶನ ಎಂದಿದ್ದಾರೆ. ಫೈಟಿಂಗ್ ಅಥವಾ ಡ್ಯಾನ್ಸಿಂಗ್ ಚಾಯ್ಸ್ನಲ್ಲಿ ಫೈಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಅವರು. ಫೇವರಿಟ್ ಹೀರೋಯಿನ್ ರಮ್ಯಾ ಅಥವಾ ರಕ್ಷಿತಾ ಎಂದು ಕೇಳಲಾಗಿದೆ.
ಇದನ್ನೂ ಓದಿ: ‘ನಾನು ಜೀವನದಲ್ಲಿ ಬಾಸ್ ಎಂದು ಕರೆಯೋದು ಇಬ್ಬರಿಗೆ ಮಾತ್ರ’; ಕಿಚ್ಚ ಸುದೀಪ್
ಈ ಪ್ರಶ್ನೆಗೆ ಸುದೀಪ್ ಗೊಂದಲಕ್ಕೆ ಬಿದ್ದರು. ‘ಇಬ್ಬರ ಬಳಿಯೂ ಹೊಡೆಸಿಕೊಳ್ಳುತ್ತೇನೆ’ ಎಂದರು ಸುದೀಪ್. ‘ಅವರಿಬ್ಬರ ಫೇವರಿಟ್ ಹೀರೋ ನಾನು’ ಎಂದರು ಸುದೀಪ್. ಈ ಡೈಲಾಗ್ ಅನೇಕರಿಗೆ ಇಷ್ಟ ಆಗಿದೆ. ಸುದೀಪ್ ಅವರು ಪರಿಸ್ಥಿತಿಯನ್ನು ಮ್ಯಾನೇಜ್ ಮಾಡಿದ ರೀತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸುದೀಪ್ ಅವರಿಗೆ ರಮ್ಯಾ ಹಾಗೂ ರಕ್ಷಿತಾ ಜೊತೆ ಒಳ್ಳೆಯ ಫ್ರೆಂಡ್ಶಿಪ್ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.