‘ಪ್ರಿಯಾ ಅವರಿಗೆ ಪ್ರಶಸ್ತಿ, ಪುರಸ್ಕಾರ ನೀಡಿದರೂ ತಪ್ಪಿಲ್ಲ’; ಸುದೀಪ್ ಹೀಗಂದಿದ್ಯಾಕೆ?

ಸಮರ್ಜಿತ್ ನಟನೆಯ ‘ಗೌರಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದಲ್ಲಿ ಸಮರ್ಜಿತ್​ಗೆ ಸನ್ಯಾ ಅಯ್ಯರ್ ನಾಯಕಿ. ಈ ಚಿತ್ರವನ್ನು ಸ್ವತಃ ಸಮರ್ಜಿತ್ ತಂದೆ ಇಂದ್ರಜಿತ್ ಲಂಕೇಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ಸಮರ್ಜಿತ್ ಅವರು ಸುದೀಪ್ ಅವರನ್ನು ಸಂದರ್ಶಿಸಿದ್ದಾರೆ.

‘ಪ್ರಿಯಾ ಅವರಿಗೆ ಪ್ರಶಸ್ತಿ, ಪುರಸ್ಕಾರ ನೀಡಿದರೂ ತಪ್ಪಿಲ್ಲ’; ಸುದೀಪ್ ಹೀಗಂದಿದ್ಯಾಕೆ?
ಪ್ರಿಯಾ-ಸುದೀಪ್
Follow us
| Updated By: ರಾಜೇಶ್ ದುಗ್ಗುಮನೆ

Updated on:Jul 09, 2024 | 8:20 AM

ಕಿಚ್ಚ ಸುದೀಪ್ ಹಾಗೂ ಪ್ರಿಯಾ ಅವರು 2001ರಲ್ಲಿ ವಿವಾಹ ಆದರು. ಇವರ ಮದುವೆ ಆಗಿ 23 ವರ್ಷಗಳು ಕಳೆದಿವೆ. ಸುದೀಪ್ ಅವರು ಚಿತ್ರರಂಗದಲ್ಲಿ ಆಗತಾನೇ ಮಿಂಚುತ್ತಿದ್ದರು. ಆಗಲೇ ಅವರು ವಿವಾಹ ಆದರು. ಸುದೀಪ್​-ಪ್ರಿಯಾ ದಂಪತಿಗೆ ಸಾನ್ವಿ ಹೆಸರಿನ ಮಗಳು ಇದ್ದಾರೆ. ಸುದೀಪ್ ಅವರ ವೃತ್ತಿ ಬದುಕಿಗೆ ಪ್ರಿಯಾ ಬೆಂಬಲವಾಗಿ ನಿಂತಿದ್ದಾರೆ. ಸುದೀಪ್ ಅವರು ಈಗ ಪತ್ನಿ ಬಗ್ಗೆ ಮಾತನಾಡಿದ್ದಾರೆ. ಅವರ ಪ್ರಬುದ್ಧತೆಯನ್ನು ಸುದೀಪ್ ಅವರು ಬಾಯ್ತುಂಬ ಹೊಗಳಿದ್ದಾರೆ.

ಸುದೀಪ್ ಅವರು ‘ಕಲಾ ಮಾಧ್ಯಮ’ಕ್ಕೆ ಸಂದರ್ಶನ ನೀಡಿದ್ದಾರೆ. ಇಲ್ಲಿ ಸಂದರ್ಶನ ಮಾಡಿದ್ದು ಸಮರ್ಜಿತ್ ಲಂಕೇಶ್ ಅವರು. ಅವರ ನಟನೆಯ ‘ಗೌರಿ’ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರದ ಭಾಗವಾಗಿ ಸುದೀಪ್ ಅವರನ್ನು ಸಂದರ್ಶನ ಮಾಡಲಾಗಿದೆ. ಈ ಭಿನ್ನ ಪ್ರಯೋಗ ಫ್ಯಾನ್ಸ್​ಗೆ ಇಷ್ಟವಾಗಿದೆ. ಸುದೀಪ್ ಅವರಿಗೆ ಹಲವು ಪ್ರಶ್ನೆಗಳನ್ನು ಸುದೀಪ್ ಅವರಿಗೆ ಕೇಳಲಾಗಿದೆ. ಇದಕ್ಕೆ ಸುದೀಪ್ ಅವರು ನೇರವಾಗಿ ಉತ್ತರ ನೀಡಿದ್ದಾರೆ.

ಪ್ರಿಯಾ ಬಗ್ಗೆ ಮಾತನಾಡಿ ಎಂದು ಸಮರ್ಜಿತ್ ಅವರು ಸುದೀಪ್​ಗೆ ಕೇಳಿದರು. ‘ಸದಾ ತಾಳ್ಮೆ, ಶಾಂತವಾಗಿರೋ ವ್ಯಕ್ತಿ ಅವರು. ಅವರು ಇಷ್ಟು ವರ್ಷ ನನ್ನನ್ನು ಹ್ಯಾಂಡಲ್ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಪ್ರಶಸ್ತಿ, ಪುರಸ್ಕಾರ ನೀಡಿದರೂ ತಪ್ಪಿಲ್ಲ. ಪ್ರಿಯಾ ಅವರಲ್ಲಿ ಪ್ರಬುದ್ಧತೆ ಇದೆ. ನನ್ನ ಕರಿಯರ್ ಆರಂಭದಲ್ಲಿ ತುಂಬಾ ಏರಿಳಿತ ಕಂಡೆ. ಹುಚ್ಚ ಸಿನಿಮಾ ಬಳಿಕವೂ ನಾನು ಕುಗ್ಗಿದ್ದೆ. ಖ್ಯಾತಿ ಇತ್ತು ಆದರೆ ದುಡ್ಡು ಇರ್ತಾ ಇರಲಿಲ್ಲ. ಆಗ ಅವರು ನನ್ನ ಪರವಾಗಿ ನಿಂತರು. ಎಲ್ಲಾ ಕ್ರೆಡಿಟ್ ಅವರಿಗೆ ಹೋಗಬೇಕು’ ಎಂದಿದ್ದಾರೆ ಸುದೀಪ್.

ಸಿನಿಮಾ ರಂಗಕ್ಕೆ ಬಂದಾಗ ಆರಂಭದಲ್ಲಿ ಕಾಡಿದ ಪ್ರಶ್ನೆಗಳ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಹಲವು ಸವಾಲುಗಳನ್ನು ಎದುರಿಸಿದೆ. ಜನರು ನನ್ನನ್ನು ಒಪ್ಪಿಕೊಳ್ಳುತ್ತಾರಾ ಅಥವಾ ಇಲ್ಲವ ಎನ್ನುವ ಪ್ರಶ್ನೆ ಕಾಡುತ್ತಿತ್ತು. ಯಾವುದೂ ಸುಲಭವಾಗಿ ಬರೋದಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿತ್ತು. ಒಂದು ಹಂತಕ್ಕೆ ಬಂದಮೇಲೆ ಸವಾಲುಗಳು ಎದುರಾಗುತ್ತವೆ. ನಾನು ಚಿತ್ರರಂಗಕ್ಕೆ ಬಂದಾಗ ಎಲ್ಲ ಹೀರೋಗಳಿಗೂ ಒಂದು ಸ್ಥಾನ ಇತ್ತು. ಆ ಸಂದರ್ಭದಲ್ಲಿ ನಾವು ಫಿಟ್ ಆಗುತ್ತೀನೋ ಅಥವಾ ಇಲ್ಲವೋ ಎನ್ನುವುದೇ ಪ್ರಶ್ನೆ ಕಾಡುತ್ತಿತ್ತು. ಹಲವು ವರ್ಷಗಳ ಬಳಿಕ ನನಗೆ ಜಾಗ ಸಿಕ್ತು. ಯಾರೋ ಬಿಟ್ಟು ಹೋದ ಜಾಗವನ್ನು ನೀವು ತುಂಬಲು ಸಾಧ್ಯವಿಲ್ಲ. ನೀವೇ ಜಾಗ ಮಾಡಿಕೊಳ್ಳಬೇಕು’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ‘ನಾನು ಜೀವನದಲ್ಲಿ ಬಾಸ್ ಎಂದು ಕರೆಯೋದು ಇಬ್ಬರಿಗೆ ಮಾತ್ರ’; ಕಿಚ್ಚ ಸುದೀಪ್

‘ನಾನು ಉದ್ಯಮಿ ಆಗುತ್ತೇನೆ ಎಂದು ತಂದೆಗೆ ಅನಿಸುತ್ತಿರಲಿಲ್ಲ. ಅವರ ಬಳಿ ಹೋಗಿ ನಾನು ಹೀರೋ ಆಗ್ತೀನಿ ಎಂದೆ. ಅವರು ಒಪ್ಪಿದರು. ಜನರ ಮಧ್ಯೆ ನಿಂತಾಗ ಬೀಳೋ ಸಿಳ್ಳೆ ಖುಷಿ ನೀಡುತ್ತದೆ. ಹೀಗಾಗಿ ನನಗೆ ನಟ ಆಗಬೇಕು ಎಂದು ಅನಿಸುತ್ತಿತ್ತು’ ಎಂದಿದ್ದಾರೆ ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:52 am, Tue, 9 July 24

ತಾಜಾ ಸುದ್ದಿ
ಕಣ್ಣಾಮುಚ್ಚಾಲೆ ಆಟದ ನಂತರ ಬೆಂಗಳೂರಿನ ನಾನಾ ಭಾಗಗಳಲ್ಲಿ ಧಾರಾಕಾರ ಮಳೆ!
ಕಣ್ಣಾಮುಚ್ಚಾಲೆ ಆಟದ ನಂತರ ಬೆಂಗಳೂರಿನ ನಾನಾ ಭಾಗಗಳಲ್ಲಿ ಧಾರಾಕಾರ ಮಳೆ!
ಹೋಟೆಲ್ ಮೆಟ್ಟಿಲು ಮೇಲೆ ಕೂತು ಶಾಲಾ ಮಕ್ಕಳಿಗೆ ಜಾಮೂನು ತಿನ್ನಿಸಿದ ಲಾಡ್
ಹೋಟೆಲ್ ಮೆಟ್ಟಿಲು ಮೇಲೆ ಕೂತು ಶಾಲಾ ಮಕ್ಕಳಿಗೆ ಜಾಮೂನು ತಿನ್ನಿಸಿದ ಲಾಡ್
ಮದುವೆ ದಿಬ್ಬಣದ ವೇಳೆ ಡೋಲು ವಾದ್ಯಕ್ಕೆ ಡ್ಯಾನ್ಸ್ ಮಾಡಿದ ನೀತಾ ಅಂಬಾನಿ
ಮದುವೆ ದಿಬ್ಬಣದ ವೇಳೆ ಡೋಲು ವಾದ್ಯಕ್ಕೆ ಡ್ಯಾನ್ಸ್ ಮಾಡಿದ ನೀತಾ ಅಂಬಾನಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಡಳಿತ ಕಛೇರಿ ಮುಂದೆ ಸತ್ತ ಹಾವು ಇಟ್ಟು ಧರಣಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಡಳಿತ ಕಛೇರಿ ಮುಂದೆ ಸತ್ತ ಹಾವು ಇಟ್ಟು ಧರಣಿ
ನೀರು ಬಿಡಲ್ಲ ಅಂತ ಸಿದ್ದರಾಮಯ್ಯ ಸರ್ಕಾರ ಖಚಿತ ನಿಲುವು ತೆಗೆದುಕೊಳ್ಳುತ್ತೋ?
ನೀರು ಬಿಡಲ್ಲ ಅಂತ ಸಿದ್ದರಾಮಯ್ಯ ಸರ್ಕಾರ ಖಚಿತ ನಿಲುವು ತೆಗೆದುಕೊಳ್ಳುತ್ತೋ?
ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಅಶೋಕ್ , ಅಶ್ವಥ್ ಅನುಸರಿಸಿದ ವಿಧಾನ ಇದು!
ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಅಶೋಕ್ , ಅಶ್ವಥ್ ಅನುಸರಿಸಿದ ವಿಧಾನ ಇದು!
ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವಿಸಿದ ಸಂತೋಷ ಲಾಡ್
ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವಿಸಿದ ಸಂತೋಷ ಲಾಡ್
ಯಡಿಯೂರಪ್ಪ, ವಿಜಯೇಂದ್ರ ಸತ್ಯ ಹರಿಶ್ಚಂದ್ರನ ವಂಶಸ್ಥರೇ? ಮೊಹಮ್ಮದ್ ನಲಪಾಡ್
ಯಡಿಯೂರಪ್ಪ, ವಿಜಯೇಂದ್ರ ಸತ್ಯ ಹರಿಶ್ಚಂದ್ರನ ವಂಶಸ್ಥರೇ? ಮೊಹಮ್ಮದ್ ನಲಪಾಡ್
ಮುಡಾ ಹಗರಣ ಬಿಜೆಪಿಯ ಸೃಷ್ಟಿ, ಅಧಿವೇಶನದಲ್ಲಿ ಉತ್ತರಿಸಲು ರೆಡಿ; ಶಿವಕುಮಾರ್
ಮುಡಾ ಹಗರಣ ಬಿಜೆಪಿಯ ಸೃಷ್ಟಿ, ಅಧಿವೇಶನದಲ್ಲಿ ಉತ್ತರಿಸಲು ರೆಡಿ; ಶಿವಕುಮಾರ್
ಲೇಟೆಸ್ಟ್​ ಗ್ಯಾಲಕ್ಸಿ ಫೋಲ್ಡ್​ ಫೋನ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಲೇಟೆಸ್ಟ್​ ಗ್ಯಾಲಕ್ಸಿ ಫೋಲ್ಡ್​ ಫೋನ್ ಲಾಂಚ್ ಮಾಡಿದ ಸ್ಯಾಮ್​ಸಂಗ್