‘ನಾನು ಜೀವನದಲ್ಲಿ ಬಾಸ್ ಎಂದು ಕರೆಯೋದು ಇಬ್ಬರಿಗೆ ಮಾತ್ರ’; ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರು ಚಿತ್ರರಂಗದಲ್ಲಿ ಇದ್ದು 3 ದಶಕಗಳು ಪೂರ್ಣಗೊಳ್ಳುತ್ತಾ ಬಂದಿದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಜೀವನದಲ್ಲಿ ಬಾಸ್ ಎಂದು ಕರೆದಿದ್ದು ಇಬ್ಬರಿಗೆ ಮಾತ್ರವಂತೆ. ಈ ಬಗ್ಗೆ ಸಂದರ್ಶನ ಒಂದರಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ನಾನು ಜೀವನದಲ್ಲಿ ಬಾಸ್ ಎಂದು ಕರೆಯೋದು ಇಬ್ಬರಿಗೆ ಮಾತ್ರ’; ಕಿಚ್ಚ ಸುದೀಪ್
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Jul 08, 2024 | 2:56 PM

ಕಿಚ್ಚ ಸುದೀಪ್ ಅವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಅನೇಕರಿಗೆ ಮಾದರಿ. ಅನೇಕ ಹೀರೋಗಳಿಗೆ ಸುದೀಪ್ ಅವರೇ ಫೇವರಿಟ್. ಅನೇಕ ಯುವ ನಟರಿಗೆ ಸುದೀಪ್ ಅವರು ಸ್ಫೂರ್ತಿ. ಹಾಗಾದರೆ ಸುದೀಪ್ ಅವರಿಗೆ ಯಾರು ಸ್ಫೂರ್ತಿ, ಅವರ ನೆಚ್ಚಿನ ಹೀರೋ ಯಾರು? ಈ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ.

‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸುದೀಪ್ ಅವರು ಮಾತನಾಡಿದ್ದಾರೆ. ‘ಗೌರಿ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರು ಸುದೀಪ್ ಅವರನ್ನು ಸಂದರ್ಶನ ಮಾಡಿದ್ದಾರೆ. ಇದರಲ್ಲಿ ಹಲವು ರೀತಿಯ ಪ್ರಶ್ನೆಗಳನ್ನು ಅವರು ಸುದೀಪ್​ಗೆ ಕೇಳಿದ್ದಾರೆ.

ಇದನ್ನೂ ಓದಿ: ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್

‘ನನ್ನ ನೆಚ್ಚಿನ ಕಲಾವಿದರು ನೀವು, ನಿಮ್ಮ ನೆಚ್ಚಿನ ಕಲಾವಿದರು ಯಾರು?’ ಎಂದು ಕೇಳಿದರು ಸಮರ್ಜಿತ್ ಲಂಕೇಶ್. ಇದಕ್ಕೆ ಸುದೀಪ್ ಅವರು ಉತ್ತರ ನೀಡಿದ್ದಾರೆ. ‘ನನ್ನ ಫೇವರಿಟ್ ಹೀರೋ ವಿಷ್ಣು ಸರ್. ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಜೀವನದಲ್ಲಿ ನಾನು ಇಬ್ಬರಿಗೆ ಮಾತ್ರ ಬಾಸ್ ಎಂದು ಕರೆದಿದ್ದು. ನಮ್ಮ ತಂದೆಗೆ, ಅದನ್ನು ಇವತ್ತಿಗೂ ಕರೆಯುತ್ತೇನೆ. ಹಾಗೂ ವಿಷ್ಣು ಸರ್​ಗೆ. ವಿಷ್ಣು ಅವರ ಪರ್ಸನಾಲಿಟಿ ಸಖತ್ ಇಷ್ಟ. ಅವರ ಗತ್ತು, ಇರೋ ರೀತಿ ಸಖತ್ ಇಷ್ಟ. ಅವರು ಯಾವಾಗಲೂ ನನ್ನ ಫೇವರಿಟ್’ ಎಂದಿದ್ದಾರೆ ಸುದೀಪ್.

ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಶೀಘ್ರವೇ ಈ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಮಾಹಿತಿ ನೀಡುವುದಾಗಿ ನಿರ್ಮಾಣ ಸಂಸ್ಥೆಯಿಂದ ಅಪ್​ಡೇಟ್ ಸಿಕ್ಕಿದೆ. ಈ ಚಿತ್ರದಲ್ಲಿ ಸುದೀಪ್ ಅವರು ಪೊಲೀಸ್ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್