AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಐಪಿ’ ಸಿನಿಮಾದ ತಾಯಿ-ಮಗನ ಬಾಂಧವ್ಯದ ಹಾಡಿಗೆ ಧ್ವನಿ ನೀಡಿದ ಕೆ.ಎಸ್. ಚಿತ್ರಾ

ಬಹುದಿನಗಳ ಬಳಿಕ ಹಿರಿಯ ಗಾಯಕಿ ಕೆ.ಎಸ್​. ಚಿತ್ರಾ ಅವರು ಕನ್ನಡದ ಸಿನಿಮಾಗೆ ಹಾಡಿದ್ದಾರೆ. ವಸಿಷ್ಠ ಸಿಂಹ ಅಭಿನಯದ ‘ವಿಐಪಿ’ ಸಿನಿಮಾದ ಮದರ್​ ಸೆಂಟ್​ಮೆಂಟ್​ ಹಾಡು ಕೆ.ಎಸ್​. ಚಿತ್ರಾ ಅವರ ಕಂಠದಲ್ಲಿ ಮೂಡಿಬಂದಿದೆ. ಇದು ಚಿತ್ರತಂಡದ ಬಲವನ್ನು ಹೆಚ್ಚಿಸಿದೆ. ಬ್ರಹ್ಮ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ಆರ್.ಎಸ್. ಮೋಹನ್ ಕುಮಾರ್ ಮತ್ತು ಆರ್. ಅಚ್ಯುತ್ ರಾವ್ ನಿರ್ಮಾಣ ಮಾಡುತ್ತಿದ್ದಾರೆ.

‘ವಿಐಪಿ’ ಸಿನಿಮಾದ ತಾಯಿ-ಮಗನ ಬಾಂಧವ್ಯದ ಹಾಡಿಗೆ ಧ್ವನಿ ನೀಡಿದ ಕೆ.ಎಸ್. ಚಿತ್ರಾ
ಕೆ.ಎಸ್​. ಚಿತ್ರಾ ಜೊತೆ ‘ವಿಐಪಿ’ ಚಿತ್ರತಂಡ
ಮದನ್​ ಕುಮಾರ್​
|

Updated on: Jul 07, 2024 | 11:24 PM

Share

ಗಾಯಕಿ ಕೆ.ಎಸ್​. ಚಿತ್ರಾ ಅವರು ಕನ್ನಡದಲ್ಲಿ ಹಲವಾರು ಸೂಪರ್​ ಹಿಟ್​ ಗೀತೆಗಳನ್ನು ಹಾಡಿದ್ದಾರೆ. ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಅವರು ಕನ್ನಡದಲ್ಲಿ ಯಾವುದೇ ಗೀತೆ ಹಾಡಿರಲಿಲ್ಲ. ಈಗ ಅವರು ಕನ್ನಡದಲ್ಲಿ ಹೊಸ ಸಾಂಗ್​ ಹಾಡಿದ್ದಾರೆ. ಕನ್ನಡದ ‘ವಿಐಪಿ’ ಸಿನಿಮಾಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದ ‘ಬಾರೋ ಕಂದ..’ ಎಂಬ ಹಾಡಿಗೆ ವಿ. ನಾಗೇಂದ್ರ ಪ್ರಸಾದ್​ ಅವರು ಸಾಹಿತ್ಯ ರಚಿಸಿದ್ದಾರೆ. ಇದೇ ಹಾಡು ಕೆ.ಎಸ್​. ಚಿತ್ರಾ ಅವರ ಕಂಠದಲ್ಲಿ ಮೂಡಿಬಂದಿದೆ. ಈ ಸಿನಿಮಾಗೆ ವಸಿಷ್ಠ ಸಿಂಹ ಹೀರೋ.

ವಸಿಷ್ಠ ಸಿಂಹ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ‘ವಿಐಪಿ’ ಸಿನಿಮಾದಲ್ಲಿನ ತಾಯಿ-ಮಗನ ಬಾಂಧವ್ಯ ಸಾರುವ ಹಾಡು ಇದು. ಕೆ.ಎಸ್. ಚಿತ್ರಾ ಅವರು ಈ ಗೀತೆ ಹಾಡಿದ್ದು, ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ಬಗ್ಗೆ ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ಮಾತನಾಡಿದ್ದಾರೆ. ‘ಅಂತಹ ಅದ್ಭುತ ಗಾಯಕಿ ನಮ್ಮ ಸಿನಿಮಾ ಗೀತೆಯನ್ನು ಹಾಡಿದ್ದು ತುಂಬಾ ಸಂತೋಷವಾಯಿತು. ಅವರು ಅದ್ಭುತವಾಗಿ ಹಾಡಿದ್ದಾರೆ.‌ ಹಾಡಿದ ಬಳಿಕ ತಾವು ಹಾಡಿರುವುದು ಇಷ್ಟವಾಯಿತಾ ಎಂದು ಮ್ಯೂಸಿಕ್​ ಡೈರೆಕ್ಟರ್​ ಹರ್ಷವರ್ಧನ್ ರಾಜ್ ಬಳಿ ಅವರು ಕೇಳುತ್ತಿದ್ದರು. ಇಷ್ಟ ಆಗದಿದ್ದರೆ ಮತ್ತೊಮ್ಮೆ ಹಾಡುತ್ತೇನೆ ಅಂದರು. ಅಂಥ ದೊಡ್ಡ ಗಾಯಕಿ ಆದರೂ ಅವರಲ್ಲಿನ ಸರಳತೆ ಎಲ್ಲರಿಗೂ ಮಾದರಿ’ ಎಂದು ಅಫ್ಜಲ್​ ಹೇಳಿದ್ದಾರೆ.

ಆರ್.ಎಸ್. ಮೋಹನ್ ಕುಮಾರ್ ಮತ್ತು ಆರ್. ಅಚ್ಯುತ್ ರಾವ್ ಅವರು ‘ಕಲಾ ಸೃಷ್ಟಿ ಪ್ರೊಡಕ್ಷನ್ಸ್’ ಮೂಲಕ ‘ವಿಐಪಿ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮೇಕಿಂಗ್ ಕಾರಣದಿಂದ ಈ ಸಿನಿಮಾ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ವಸಿಷ್ಠ ಸಿಂಹ ಅವರಿಗೆ ಜೋಡಿಯಾಗಿ ತೇಜಸ್ವಿನಿ ಶರ್ಮಾ ನಟಿಸುತ್ತಿದ್ದಾರೆ. ಬಲ ರಾಜವಾಡಿ, ಸುನೀಲ್ ಪುರಾಣಿಕ್, ಅಫ್ಜಲ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಹನುಮಂತೇಗೌಡ, ರಣವೀರ್, ರಾಮ್ ಕಶ್ಯಪ್, ಸನತ್, ಶ್ರೀದತ್ತ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಜೀವ್ ಗಣೇಸನ್ ಅವರು ಛಾಯಾಗ್ರಹಣ ಹಾಗೂ ಸತೀಶ್ ಚಂದ್ರಯ್ಯ ಅವರು ಸಂಕಲನ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಸೆರೆಮನೆಯಲಿ ವಾಸ, ನೋವಿನಲಿ ದಾಸ..’: ದರ್ಶನ್​ ಮೇಲಿನ ಅಭಿಮಾನಕ್ಕೆ ಹೊಸ ಹಾಡು

ಬೆಂಗಳೂರು ಸುತ್ತಮುತ್ತ ‘ವಿಐಪಿ’ ಸಿನಿಮಾಗೆ ಶೂಟಿಂಗ್​ ನಡೆಯುತ್ತಿದೆ. ಈಗಾಗಲೇ ವಸಿಷ್ಠ ಸಿಂಹ ಅವರ ಫಸ್ಟ್ ಲುಕ್ ಪೋಸ್ಟರ್​ನಿಂದ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಆ್ಯಕ್ಷನ್-ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳು ಇವೆ. ವಸಿಷ್ಠ ಸಿಂಹ ಅವರು ಈವರೆಗೆ ಮಾಡಿರದಂತಹ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡುತ್ತಿದ್ದಾರೆ ಎಂದಿದ್ದಾರೆ ನಿರ್ದೇಶಕ ಬ್ರಹ್ಮ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್