ದರ್ಶನ್ರನ್ನು ನೋಡಲು ವಕೀಲನೊಂದಿಗೆ ಸೆಂಟ್ರಲ್ ಜೈಲಿಗೆ ಬಂದ ಖ್ಯಾತ ನಿರ್ಮಾಪಕ ಕೆ ಮಂಜು
ಜುಲೈ 3 ರಂದು ತಮ್ಮ ಕಚೇರಿಯಲ್ಲಿ ಕೆ ಮಂಜು ನಮ್ಮ ಸಿನಿಮಾ ವರದಿಗಾರನೊಂದಿಗೆ ಮಾತಾಡುವಾಗ ದರ್ಶನ್ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಸೆಟ್ ಗಳಲ್ಲಿ ದರ್ಶನ್ ಶಿಸ್ತು ಕಾಯ್ದುಕೊಳ್ಳುತ್ತಿದ್ದರು ಮತ್ತು ಸಂಭಾವನೆಯ ವಿಷಯದಲ್ಲಿ ಬಹಳ ಕಟುನಿಟ್ಟಾಗಿ ಮಾತಾಡುತ್ತಿದ್ದರು, ತಾವು ಕೇಳಿದಷ್ಟು ಸಂಭಾವನೆ ನಿರ್ಮಾಪಕನಿಗೆ ಕೊಡಲಾಗದಿದ್ದರೆ ವಿನಮ್ರರಾಗಿಯೇ ಆಫರ್ ನಿರಾಕರಿಸುತ್ತಿದ್ದರು ಎಂದು ಮಂಜು ಹೇಳಿದ್ದರು.
ಆನೇಕಲ್ (ಬೆಂಗಳೂರು): ನಗರದ ಕೇಂದ್ರ ಕಾರಾಗೃಹಕ್ಕೆ ಸೆಲಿಬ್ರಿಟಿಗಳು ಆರೋಪಿ ಇಲ್ಲವೇ ಅಪರಾಧಿಗಳಾಗಿ ಬಂದಾಗ ಯಾವುದಾದರೂ ಬೆಳವಣಿಗೆ ಪ್ರತಿದಿನ ನಡೆಯುತ್ತಿರುತ್ತದೆ ಅಂತ ನಾವು ಹೇಳುತ್ತಿರುತ್ತೇವೆ. ಅವರನ್ನು ಕಾಣಲು ಬೇರೆ ಸೆಲಿಬ್ರಿಟಿಗಳು ಬರುತ್ತಾರೆ, ಆಪ್ತರು, ಕುಟುಂಬವರು, ಗೆಳೆಯ-ಗೆಳತಿಯರು ಬರುತ್ತಲೇ ಇರುತ್ತಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿಯಾಗಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ರನ್ನು ನೋಡಲು ಮಾತಾಡಿಸಲು ಪ್ರತಿದಿ ಜನ ಬರುತ್ತಿದ್ದಾರೆ. ಖ್ಯಾತ ನಿರ್ಮಾಪಕ ಕೆ ಮಂಜು ಇವತ್ತು ವಕೀಲರೊಬ್ಬರೊಂದಿಗೆ ದರ್ಶನ್ ರನ್ನು ಭೇಟಿಯಾಗಲು ಆಗಮಿಸಿದರು. ಮೊನ್ನೆಯಷ್ಟೇ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ್ದ ಮಂಜು ಇವತ್ತು ಲಾಯರ್ ಜೊತೆ ಜೈಲಿಗೆ ಬಂದಿದ್ದು ವಿಶೇಷವೆನಿಸುತ್ತಿದೆ. ಅವರಿಗೆ ದರ್ಶನ್ ಜೊತೆ ಮತ್ತೊಂದು ಸಿನಿಮಾ ಮಾಡುವ ಇರಾದೆ ಇದೆಯಂತೆ. ದರ್ಶನ್ ಪರ ಜಾಮೀನು ಅರ್ಜಿಯನ್ನು ಸಲ್ಲಿಸುವ ಉದ್ದೇಶ ಮಂಜುಗಿರಬಹುದೇ? ಅಂಥ ಉದ್ದೇಶವಿರದಿದ್ದರೆ ಅವರು ವಕೀಲನ ಬದಲು ಯಾವುದಾದರೂ ನಟ ಇಲ್ಲವೇ ತಮ್ಮ ಕಚೇರಿಯ ಸಿಬ್ಬಂದಿಯ ಜೊತೆ ಜೈಲಿಗೆ ಬಂದಿರುತ್ತಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಟ್ಟುನಿಟ್ಟಿನ ಮನುಷ್ಯ ದರ್ಶನ್ ದುಡ್ಡಿನ ವಿಷಯದಲ್ಲಿ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು, ನಿರ್ಮಾಪಕ