‘ಮದುವೆ ಅನ್ನೋದು ಯಾವಾಗಲೂ ಪರ್ಫೆಕ್ಟ್​ ಅಲ್ಲ, ಅದು ಹೊಂದಾಣಿಕೆ’: ರಕ್ಷಿತಾ ಪ್ರೇಮ್

‘ಮದುವೆ ಅನ್ನೋದು ಯಾವಾಗಲೂ ಪರ್ಫೆಕ್ಟ್​ ಅಲ್ಲ, ಅದು ಹೊಂದಾಣಿಕೆ’: ರಕ್ಷಿತಾ ಪ್ರೇಮ್

Malatesh Jaggin
| Updated By: ಮದನ್​ ಕುಮಾರ್​

Updated on: Feb 02, 2025 | 7:19 PM

ನಟಿ ರಕ್ಷಿತಾ ಪ್ರೇಮ್​ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ. ಅವರು ಮದುವೆ ಆಗಿ 18 ವರ್ಷಗಳು ಕಳೆದಿವೆ. ಪ್ರತಿ ವರ್ಷ ಕೂಡ ಪ್ರೇಮಿಗಳ ದಿನಕ್ಕೆ ಪ್ರೇಮ್ ಒಂದು ರೋಸ್ ನೀಡುತ್ತಾರೆ ಎಂದು ರಕ್ಷಿತಾ ಅವರು ಹೇಳಿದ್ದಾರೆ. ರಕ್ಷಿತಾ ಸಹೋದರ ರಾಣಾ ಕೂಡ ಈಗ ವೈವಾಹಿಕ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.

ನಿರ್ದೇಶಕ ಪ್ರೇಮ್ ಅವರನ್ನು ಮದುವೆ ಆದ ಬಳಿಕ ತಮಗೆ ಕೆಲವು ಸವಾಲು ಎದುರಾಗಿತ್ತು ಎಂದು ರಕ್ಷಿತಾ ಅವರು ಹೇಳಿದ್ದಾರೆ. ‘ಮದುವೆ ಆದಾಗ ನನಗೆ 23 ವರ್ಷ. ಮದುವೆ ನಂತರ ನನಗೆ ಚಾಲೆಂಜ್​ ದೊಡ್ಡದಿತ್ತು. ನಾನು ಕುಂದಾಪುರದಿಂದ ಬಂದವಳು. ಪ್ರೇಮ್ ಅವರ ಸಂಪ್ರದಾಯಕ್ಕೆ ಹೊಂದಿಕೊಳ್ಳಲು ನನಗೆ ತುಂಬ ವರ್ಷ ಆಯಿತು. ಮದುವೆ ಅನ್ನೋದು ಯಾವಾಗಲೂ ಪರ್ಫೆಕ್ಟ್​ ಅಲ್ಲ. ಅದು ಹೊಂದಾಣಿಕೆ’ ಎಂದು ರಕ್ಷಿತಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.