ಚಾಮುಂಡಿ ಬೆಟ್ಟ ಸರ್ಕಾರದ ಆಸ್ತಿ ಅಂತ ಮತ್ತೊಮ್ಮೆ ಹೇಳಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅನ್ಯರು ಯಾರೂ ಚಾಮುಂಡಿ ಬೆಟ್ಟಕ್ಕೆ ಬರಬಾರದು, ಬೇರೆಯವರನ್ನು ಬೆಟ್ಟ ಹತ್ತಲು ಬಿಡಬಾರದು ಅನ್ನುತ್ತಾರೆ, ಅವರು ಹೇಳಿದಂತೆ ನಡೆಯುವುದು ಸಾಧ್ಯವೇ ಎಂದ ಡಿಸಿಎಂ ಶಿವಕುಮಾರ್, ಇವತ್ತು ವಿನಾಯಕ ಚತುರ್ಥಿಯಾಗಿರುವುದರಿಂದ ನಮ್ಮೂರಲ್ಲಿ ನಮ್ಮ ಗುರು ಹಿರಿಯರಿಗೆ ಮತ್ತು ಪೂರ್ವಿಕರಿಗೆ ಪೂಜೆಯನ್ನು ಇಟ್ಟುಕೊಂಡಿದ್ದೇವೆ ಅದೇ ನಿಮಿತ್ತವಾಗಿ ಊರಿಗೆ ಹೋಗುತ್ತಿದ್ದೇನೆ ಎಂದರು.
ಬೆಂಗಳೂರು, ಆಗಸ್ಟ್ 27: ಚಾಮುಂಡಿಬೆಟ್ಟ ಸರ್ಕಾರದ ಆಸ್ತಿ ಅಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುನರುಚ್ಛರಿಸಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು ದಸರಾ ಹಬ್ಬವನ್ನು ನಾಡಹಬ್ಬವೆಂದು ಆಚರಿಸುತ್ತೇವೆ, ಹಿಂದಿನ ಮಹಾರಾಜರು ಮತ್ತು ಸರ್ಕಾರ ಜೊತೆಗೂಡಿ ತೆಗೆದುಕೊಂಡ ನಿರ್ಣಯ ಅದು, ಚಾಮುಂಡಿ ತಾಯಿ (goddess Chamundeshwari) ನಾಡಿನ ಎಲ್ಲ ಜನರನ್ನು ಆಶೀರ್ವದಿಸುತ್ತಾಳೆ, ದಸರಾ ಉತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು, ಧಾರ್ಮಿಕ ಆಚರಣೆಗಳು ಅವರವರ ನಂಬಿಕೆ, ಶ್ರದ್ಧೆಗಳಿಗೆ ಬಿಟ್ಟ ವಿಚಾರ ಎಂದು ಶಿವಕುಮಾರ್ ಹೇಳಿದರು. ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ವಿದೇಶಿಯರು ಕೂಡ ಬರುತ್ತಾರೆ, ಅವರೆಲ್ಲ ಯಾವ ಧರ್ಮದವರು? ಎಂದು ಶಿವಕುಮಾರ್ ಪ್ರಶ್ನಿಸುತ್ತಾರೆ.
ಇದನ್ನೂ ಓದಿ: ಶಿವಕುಮಾರ್ಗೆ ಒಬ್ಬ ಕಾಂಗ್ರೆಸ್ಸಿಗನಾಗಿ ತಮ್ಮ ತಪ್ಪಿನ ಅರಿವಾಗಿದ್ದರೆ ಬಹಳ ಸಂತೋಷ: ಬಿಕೆ ಹರಿಪ್ರಸಾದ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
