ಅವರೇ ಕಾಳು ಮೇಳದಲ್ಲಿ ಅವರೇ ಕಾಳಿನ ದೋಸೆಯನ್ನು ಅವರೇ ಕಾಳಿನ ಪಲ್ಯದೊಂದಿಗೆ ಸವಿದ ಡಿಕೆ ಶಿವಕುಮಾರ್

|

Updated on: Dec 30, 2024 | 7:45 PM

ತಿಂಡಿಪೋತರಿಗಾಗಿ ಬೆಂಗಳೂರಲ್ಲಿ ಆಹಾರ ಮೇಳಗಳು ನಡೆಯುತ್ತಿರುತ್ತವೆ, ಅವುಗಳ ಕೊರತೆಯೇನೂ ಇಲ್ಲ. ಕಡಲೆಕಾಯಿ ಪರಿಷೆ ನಿಮಗೆ ಗೊತ್ತಲ್ಲ? ಆ ಮೇಳದಲ್ಲೂ ಬಗೆಬಗೆಯ ತಿನಿಸುಗಳು ತಿಂಡಿಪ್ರಿಯರಿಗೆ ಸಿಗುತ್ತವೆ. ಆವರೇ ಮೇಳದಲ್ಲಿ ದೋಸೆಯಲ್ಲದೆ, ಅವರೇ ಮಂಚೂರಿಯನ್, ಅವರೇ ಕಾಳಿನ ಐಸ್ ಕ್ರೀಂ, ಅವರೇ ಕಾಳಿನ ಪಾಯಸ, ಅವರೇ ಕಾಳಿನ ಪಫ್ ಮೊದಲಾದ ತಿಂಡಿಗಳು ಸಿಗುತ್ತಿವೆ.

ಬೆಂಗಳೂರು: ನಗರದ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅವರೇ ಕಾಳು ಮೇಳ ನಡೆಯುತ್ತಿದೆ ಮತ್ತು ಈ ಬಾರಿಯೂ ವಾಸವಿ ಫುಡ್ಸ್​ನವರು ಮೇಳವನ್ನು ಆಯೋಜಿಸುತ್ತಿದ್ದಾರೆ. ಅಂದಹಾಗೆ, ಇದು 25ನೇ ವರ್ಷದ ಅವರೇ ಮೇಳ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇಳದಲ್ಲಿ ಭಾಗವಹಿಸಿದರು ಮತ್ತು ಅವರೇ ಕಾಳಿನ ದೋಸೆಯನ್ನು ಸವಿದರು. ಆವರೇ ಕಾಳಿನಿಂದ ಮಾಡಿದ ವಿವಿಧ ಬಗೆಯ ತಿಂಡಿ ತಿನಿಸುಗಳು ಲಭ್ಯವಿವೆ. ಶಿವಕುಮಾರ್ ದೋಸೆ ತಿನ್ನುವುದರ ಜೊತೆಗೆ ಅವರೇ ಕಾಳನ್ನೂ ಖರೀದಿಸಿದರು ಎಂದು ನಮ್ಮ ಬೆಂಗಳೂರು ವರದಿಗಾರ ಮಾಹಿತಿ ನೀಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೋಂಡ, ಒಡೆ, ದೋಸೆಗೂ ಸೈ ಜಿಲೇಬಿ, ಒಬ್ಬಟ್ಟು, ಲಡ್ಡು, ಸ್ವೀಟ್​ಗೂ ಸೈ; ಬೆಂಗಳೂರಿನಲ್ಲಿ ನಡೆಯುತ್ತಿದೆ ಅವರೆಕಾಯಿ ಮೇಳ