ರಾಜ್ಯದ ಉಪ ಮುಖ್ಯಮಂತ್ರಿಯ ಧ್ಯಾನವೆಲ್ಲ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಮೇಲಿರುವಂತಿದೆ!

|

Updated on: Aug 15, 2024 | 2:49 PM

ಚನ್ನಪಟ್ಟಣ ತಾಲೂಕು ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹150 ಕೋಟಿ ಬಿಡುಗಡೆ ಮಾಡಿದ್ದಾರೆ, ಬಡವರಿಗಾಗಿ 5,000 ಮನೆಗಳನ್ನು ಕಟ್ಟುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು, ಇದಕ್ಕಾಗಿ 100 ಎಕರೆ ಜಮೀನು ಈಗಾಗಲೇ ಗುರುತಿಸಲಾಗಿದೆ ಮತ್ತು ಇನ್ನೂ 100 ಎಕರೆ ಜಮೀನು ಖರೀದಿಸಬೇಕಿದೆ ಎಂದು ಶಿವಕುಮಾರ್ ಹೇಳಿದರು.

ರಾಮನಗರ: ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ಪಣ ತೊಟ್ಟಿರುವಂತಿದೆ ಡಿಸಿಎಂ ಡಿಕೆ ಶಿವಕುಮಾರ್. 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಚನ್ನಪಟ್ಟಣದಲ್ಲಿ ಧ್ವಜಾರೋಹಣ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಚನ್ನಪಟ್ಟಣ ತಮಗೆ ಹತ್ತಿರವಾದದ್ದು ಮತ್ತು ಪ್ರಿಯವಾದದ್ದು ಮತ್ತು ಇಲ್ಲಿನ ಜನ ಬಹಳ ಒಳ್ಳೆಯವರು, ಆದರೆ ಕನಕಪುರಕ್ಕೆ ಹೋಲಿಸಿದರೆ ಚನ್ನಪಟ್ಟಣ ಅಭಿವೃದ್ಧಿ ವಿಷಯದಲ್ಲಿ ಸೊರಗಿರುವುದರಿಂದ ಜನರ ಆಸೆ ಅಶೋತ್ತರಗಳಿಗೆ ಸ್ಪಂದಿಸಬೇಕಿದೆ ಎಂದು ಹೇಳಿದರು. ಶಿವಕುಮಾರ್ ಚನ್ನಪಟ್ಟಣದ ಬಗ್ಗೆ ಮಾತಾಡುವಾಗ ಅಲ್ಲಿನ ಮಾಜಿ ಶಾಸಕ ಹೆಚ್ ಡಿ ಕುಮಾರಸ್ವಾಮಿಯನ್ನು ಟೀಕಿಸದಿದ್ದರೆ ಆವರ ಮಾತು ಅಪೂರ್ಣ. ಸ್ವಾತಂತ್ರ್ಯೋತ್ಸವ ದಿನಾಚರಣೆ, ರಾಜ್ಯೋತ್ಸವ ಮತ್ತು ಇಂಥ ಬೇರೆ ಸಂದರ್ಭಗಳಲ್ಲಿ ಕುಮಾರಸ್ವಾಮಿ ಅವರು ಭಾಗಿಯಾಗದಿರುವುದು ಅಧಿಕಾರಿಗಳ ಮೂಲಕ ತಿಳಿದುಕೊಂಡೆ, ಈ ದಿನಗಳ ಮಹತ್ವ ಅವರಿಗೇನು ಗೊತ್ತು? ತಾನು ಪ್ರತಿನಿಧಿಸುವ ಪಕ್ಷಕ್ಕಾದರೋ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇತಿಹಾಸವಿದೆ ಎಂದು ಶಿವಕುಮಾರ್ ಕೇಂದ್ರ ಸಚಿವನನ್ನು ತಿವಿದರು. ಮುಂದುವರಿದು ಮಾತಾಡಿದ ಅವರು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಾಡುವ ವಿಚಾರ ಸರ್ಕಾರದ ಮುಂದೆ ಸದಕ್ಕಂತೂ ಇಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Independence Day 2024: ಇದು ಪ್ರಧಾನಿ ನರೇಂದ್ರ ಮೋದಿಯವರ ಸುದೀರ್ಘ ಭಾಷಣ; ಇದಕ್ಕಿಂತ ಮುಂಚೆ ಎಷ್ಟು ಅವಧಿಯದ್ದಾಗಿತ್ತು?