AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day 2024: ಇದು ಪ್ರಧಾನಿ ನರೇಂದ್ರ ಮೋದಿಯವರ ಸುದೀರ್ಘ ಭಾಷಣ; ಇದಕ್ಕಿಂತ ಮುಂಚೆ ಎಷ್ಟು ಅವಧಿಯದ್ದಾಗಿತ್ತು?

ತಮ್ಮ 98 ನಿಮಿಷಗಳ ಸುದೀರ್ಘ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಆಚರಣೆಗಳ ಥೀಮ್ – ವಿಕಸಿತ್ ಭಾರತ್ 2047 ಬಗ್ಗೆ ಮಾತನಾಡಿದ್ದಾರೆ. ವಿಕಸಿತ್ ಭಾರತ್ 2047 ಗಾಗಿ, ನಾವು ದೇಶವಾಸಿಗಳಿಂದ ಸಲಹೆಗಳನ್ನು ಆಹ್ವಾನಿಸಿದ್ದೇವೆ. ನಾವು ಸ್ವೀಕರಿಸಿದ ಅನೇಕ ಸಲಹೆಗಳು ನಮ್ಮ ನಾಗರಿಕರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ.

Independence Day 2024: ಇದು ಪ್ರಧಾನಿ ನರೇಂದ್ರ ಮೋದಿಯವರ ಸುದೀರ್ಘ ಭಾಷಣ; ಇದಕ್ಕಿಂತ ಮುಂಚೆ ಎಷ್ಟು ಅವಧಿಯದ್ದಾಗಿತ್ತು?
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on: Aug 15, 2024 | 1:13 PM

Share

ದೆಹಲಿ ಆಗಸ್ಟ್ 15: ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಗುರುವಾರ) ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರ ಮಾಡಿರುವ ಸತತ 11 ನೇ ಭಾಷಣದಲ್ಲಿ ಸುದೀರ್ಘ ಭಾಷಣ ಇದಾಗಿದೆ. 98 ನಿಮಿಷಗಳ ಈ  ಭಾಷಣವು 2016 ರ ಭಾಷಣದಲ್ಲಿ ಅವರ ಹಿಂದಿನ 96 ನಿಮಿಷಗಳ ದಾಖಲೆಯನ್ನು ಮೀರಿಸಿದೆ. 2017 ರಲ್ಲಿ ಅವರು ಮಾಡಿದ ಚಿಕ್ಕ ಭಾಷಣ 56 ನಿಮಿಷಗಳ ಅವಧಿಯದ್ದಾಗಿತ್ತು. ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣಗಳು ಸರಾಸರಿ 82 ನಿಮಿಷಗಳು. ಅಂದಹಾಗೆ ಇದು ಭಾರತದ ಇತಿಹಾಸದಲ್ಲಿ ಯಾವುದೇ ಇತರ ಪ್ರಧಾನ ಮಂತ್ರಿಗಳು ಮಾಡಿದ ಭಾಷಣದ ಅವಧಿಗಿಂತ ಹೆಚ್ಚು.

ಮೋದಿಯವರಿಗಿಂತ ಮೊದಲು ಜವಾಹರಲಾಲ್ ನೆಹರು ಅವರು 72 ನಿಮಿಷಗಳ ಸುದೀರ್ಘ ಭಾಷಣವನ್ನು ಮಾಡಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ ಅವರು 1954 ಮತ್ತು 1966 ರಲ್ಲಿ ಕ್ರಮವಾಗಿ 14 ನಿಮಿಷಗಳಲ್ಲಿ ಅತಿ ಕಡಿಮೆ ಅವಧಿಯ ಭಾಷಣ ಮಾಡಿದರು.

ತಮ್ಮ 98 ನಿಮಿಷಗಳ ಸುದೀರ್ಘ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಆಚರಣೆಗಳ ಥೀಮ್ – ವಿಕಸಿತ್ ಭಾರತ್ 2047 ಬಗ್ಗೆ ಮಾತನಾಡಿದ್ದಾರೆ. ವಿಕಸಿತ್ ಭಾರತ್ 2047 ಗಾಗಿ, ನಾವು ದೇಶವಾಸಿಗಳಿಂದ ಸಲಹೆಗಳನ್ನು ಆಹ್ವಾನಿಸಿದ್ದೇವೆ. ನಾವು ಸ್ವೀಕರಿಸಿದ ಅನೇಕ ಸಲಹೆಗಳು ನಮ್ಮ ನಾಗರಿಕರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ರಾಷ್ಟ್ರದ ಜನರು ಅಂತಹ ದೊಡ್ಡ ಕನಸುಗಳನ್ನು ಹೊಂದಿರುವಾಗ, ಅದು ನಮ್ಮ ಆತ್ಮವಿಶ್ವಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ನಾವು ಹೆಚ್ಚು ದೃಢನಿಶ್ಚಯವನ್ನು ಹೊಂದಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಯ ವಿಷಯದ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದಾರೆ. ದೇಶ, ಸಮಾಜ, ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ವಿರುದ್ಧದ ಅಪರಾಧಗಳ ತ್ವರಿತ ತನಿಖೆ, ಅಪರಾಧವೆಸಗುವವರಿಗೆ ಶೀಘ್ರವಾಗಿ ಕಠಿಣ ಶಿಕ್ಷೆಯನ್ನು ನೀಡಬೇಕು. ಇದು ಸಮಾಜದಲ್ಲಿ ಆತ್ಮವಿಶ್ವಾಸವನ್ನು ತುಂಬಲು ಮುಖ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದು ದೇಶದ ಸುವರ್ಣ ಯುಗ ಎಂದು ಘೋಷಿಸಿದ ಪ್ರಧಾನಮಂತ್ರಿಯವರು, ಕ್ಷೇತ್ರಗಳಾದ್ಯಂತ ಅಭಿವೃದ್ಧಿ, ಆರ್ಥಿಕ ಸುಧಾರಣೆಗಳು ಮತ್ತು ದೇಶದ ಯುವಜನರಿಗೆ ಭರವಸೆಗಳನ್ನು ನೀಡುವ ಹಲವಾರು ಯೋಜನೆಗಳನ್ನು ವಿವರಿಸಿದರು. ಪ್ರಾಕೃತಿಕ ವಿಕೋಪಗಳನ್ನು ನಿಭಾಯಿಸುವುದರಿಂದ ಹಿಡಿದು ಜಾತ್ಯತೀತ ನಾಗರಿಕ ಸಂಹಿತೆಯವರೆಗೆ ಉದ್ಯೋಗಸ್ಥ ಮಹಿಳೆಯರಿಗೆ ಹೆರಿಗೆ ರಜೆಯವರೆಗೆ, ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.

ಇದನ್ನೂ ಓದಿ: ಪದೇ ಪದೇ ನಡೆಯುವ ಚುನಾವಣೆಗಳು ದೇಶದ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸುತ್ತವೆ: ಮೋದಿ

ನಾವು ನಿರ್ಣಯದೊಂದಿಗೆ ಮುಂದುವರಿಯುತ್ತಿದ್ದೇವೆ ಆದರೆ ಕೆಲವು ಜನರು ಪ್ರಗತಿಯನ್ನು ಕಾಣುವುದಿಲ್ಲ ಅಥವಾ ಅವರಿಗೆ ಪ್ರಯೋಜನವಾಗದ ಹೊರತು ಭಾರತದ ಒಳಿತನ್ನು ಯೋಚಿಸುವುದಿಲ್ಲ.ದೇಶವು ಈ ಬೆರಳೆಣಿಕೆಯ ನಿರಾಶಾವಾದಿ ಜನರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಮೋದಿ ವಿಪಕ್ಷ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು