ರಾಜಾಜಿನಗರ ESI ನಲ್ಲಿ ಸೋಂಕಿತರ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿರುವುದು ಏಕೆ?

[lazy-load-videos-and-sticky-control id=”WyXhsWTAFjQ”] ಬೆಂಗಳೂರು: ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ರಾಜಾಜಿನಗರದ ESI ಆಸ್ಪತ್ರೆಯ ವೈದ್ಯರ ವಿರುದ್ಧ ಆರೋಪ ಕೇಳಿಬಂದಿದೆ. ಆಸ್ಪತ್ರೆಗೆ ಬರುವ ಸೋಂಕಿತ ರೋಗಿಗಳಲ್ಲಿ ಬಡವರೇ ಹೆಚ್ಚಾಗಿ ಇರುವುದರಿಂದ ಅವರ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಬಡವರು ಮೃತಪಟ್ಟರೆ ಯಾರೂ ಕೇಳಲ್ಲವೆಂದು ನಿರ್ಲಕ್ಷ್ಯ ತೋರಾಲಾಗುತ್ತಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರಿಗೂ ದೂರು ನೀಡಿದ್ರೂ ಏನು ಪ್ರಯೋಜನವಾಗಿಲ್ಲವಂತೆ. ಹೀಗಾಗಿ, ಆಸ್ಪತ್ರೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಏರಿಕೆ ಕಂಡಿದೆ ಎಂದು ಹೇಳಲಾಗ್ತಿದೆ. ಇದಕ್ಕೆ […]

ರಾಜಾಜಿನಗರ ESI ನಲ್ಲಿ ಸೋಂಕಿತರ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿರುವುದು ಏಕೆ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Aug 10, 2020 | 7:18 PM

[lazy-load-videos-and-sticky-control id=”WyXhsWTAFjQ”]

ಬೆಂಗಳೂರು: ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ರಾಜಾಜಿನಗರದ ESI ಆಸ್ಪತ್ರೆಯ ವೈದ್ಯರ ವಿರುದ್ಧ ಆರೋಪ ಕೇಳಿಬಂದಿದೆ. ಆಸ್ಪತ್ರೆಗೆ ಬರುವ ಸೋಂಕಿತ ರೋಗಿಗಳಲ್ಲಿ ಬಡವರೇ ಹೆಚ್ಚಾಗಿ ಇರುವುದರಿಂದ ಅವರ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಬಡವರು ಮೃತಪಟ್ಟರೆ ಯಾರೂ ಕೇಳಲ್ಲವೆಂದು ನಿರ್ಲಕ್ಷ್ಯ ತೋರಾಲಾಗುತ್ತಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರಿಗೂ ದೂರು ನೀಡಿದ್ರೂ ಏನು ಪ್ರಯೋಜನವಾಗಿಲ್ಲವಂತೆ.

ಹೀಗಾಗಿ, ಆಸ್ಪತ್ರೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಏರಿಕೆ ಕಂಡಿದೆ ಎಂದು ಹೇಳಲಾಗ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ 600 ರೋಗಿಗಳ ಪೈಕಿ 50ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಟಿವಿ9ಗೆ ಆಸ್ಪತ್ರೆಯ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ. ಹಾಗಾಗಿ, ಈ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಡೆತ್ ರೇಷಿಯೋ ಹೆಚ್ಚಾಗಿದೆ.

ಜೊತೆಗೆ, ವೈದ್ಯರು ಸೂಕ್ತ ಚಿಕಿತ್ಸೆ ಕೊಡೋಕೆ ಹಿಂದೇಟು ಹಾಕ್ತಿರೋದೇ ಸಾವಿಗೆ ಕಾರಣವಾಗುತ್ತಿದೆಯಂತೆ. ಸೀನಿಯರ್ ಡಾಕ್ಟರ್ಸ್, ಸ್ಪೆಷಲ್ ಫಿಷಿಸಿಯನ್ಸ್, ಪ್ರೊಫೆಸರ್ಸ್ ಬಂದು ರೋಗಿಗಳನ್ನ ನೋಡುವುದಿಲ್ಲವಂತೆ. ICUನಲ್ಲಿರೋ ಸೋಂಕಿತರಿಗೆ PG ವೈದ್ಯ ವಿದ್ಯಾರ್ಥಿಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ವೈದ್ಯ ವಿದ್ಯಾರ್ಥಿಗಳು ಸರಿಯಾಗಿ ಚಿಕಿತ್ಸೆ ನೀಡದ್ದಕ್ಕೆ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಈ ಆರೋಪವನ್ನ ಆಸ್ಪತ್ರೆಯ ಡೀನ್‌ ಡಾ.ಜಿತೇಂದ್ರಕುಮಾರ್ ತಳ್ಳಿ ಹಾಕಿದ್ದಾರೆ. ಹಲವು ರೋಗಿಗಳು ಸೋಂಕಿನ ಅಂತಿಮ ಹಂತದಲ್ಲಿ ಬರುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ESI ಆಸ್ಪತ್ರೆಯಲ್ಲಿ ರಿಕವರಿ ರೇಟ್ ಸಹ ಚೆನ್ನಾಗಿದೆ. ಜೊತೆಗೆ, ಸೀನಿಯರ್‌ ಡಾಕ್ಟರ್ಸ್‌ ಸಹ ಚಿಕಿತ್ಸೆ ನೀಡ್ತಾರೆಂದು ಸ್ಪಷ್ಟನೆ ನೀಡಿದ್ದಾರೆ.

Published On - 11:33 am, Mon, 10 August 20

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಯತ್ನಾಳ್ ಹೆಸರೇಳದೆ ನಾಯಿ-ಕುರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಕಾಶಪ್ಪನವರ್
ಯತ್ನಾಳ್ ಹೆಸರೇಳದೆ ನಾಯಿ-ಕುರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಕಾಶಪ್ಪನವರ್
ಅವಿವಾಹಿತ ಜಯಣ್ಣ ನಾಳೆ ಗೃಹಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು!
ಅವಿವಾಹಿತ ಜಯಣ್ಣ ನಾಳೆ ಗೃಹಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು!
ರಾಜ್ ಕುಮಾರ್, ಅಂಬರೀಶ್ ಅಂತ್ಯಕ್ರಿಯೆಗೂ ಶ್ರೀಗಂಧದ ಕಟ್ಟಿಗೆ ಬಳಸಲಾಗಿತ್ತು
ರಾಜ್ ಕುಮಾರ್, ಅಂಬರೀಶ್ ಅಂತ್ಯಕ್ರಿಯೆಗೂ ಶ್ರೀಗಂಧದ ಕಟ್ಟಿಗೆ ಬಳಸಲಾಗಿತ್ತು