ಶೆಟ್ಟರ್ ತೆಗೆದುಕೊಂಡ ನಿರ್ಣಯ ಅವರ ಘನತೆಗೆ ಶೋಭೆ ನೀಡುವಂಥದಲ್ಲ: ಎಂಬಿ ಪಾಟೀಲ್, ಸಚಿವ
ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ತರುವಲ್ಲಿ ತಾನು ದೊಡ್ಡ ಪಾತ್ರ ನಿರ್ವಹಿಸಿದ್ದೆ ಎಂದು ಹೇಳಿದ ಸಚಿವ, ಶೆಟ್ಟರ್ ಕಾಂಗ್ರೆಸ್ ಸೇರುವ ಬಗ್ಗೆ ಮಾಧ್ಯಮ ವರದಿಗಳನ್ನು ತಾನು ನಂಬಿರಲಿಲ್ಲ ಮತ್ತು ಬಿಜೆಪಿ ಸೇರುವ ನಿರ್ಣಯ ತೆಗೆದುಕೊಳ್ಳುವ ಮೊದಲು ಅವರು ತನ್ನನ್ನು ಸಂಪರ್ಕಿಸಲಿಲ್ಲ ಎಂದರು.
ಬೆಂಗಳೂರು: ಜಗದೀಶ್ ಶೆಟ್ಟರ್ (Jagadish Shettar) ಅವರು ಬಿಜೆಪಿ ನಾಯಕರು ಒಡ್ಡಿದ ಆಮಿಷಗಳಿಗೆ ಈಡಾಗಿ ಕಾಂಗ್ರೆಸ್ ತೊರೆದಿದ್ದರೆ ಅದು ಅವರು ಬೆಳದಿರುವ ಮಟ್ಟಕ್ಕೆ ಮತ್ತು ತಮ್ಮ ಘನತೆಗೆ ಶೋಭೆ ನೀಡುವಂಥದಲ್ಲ, ಅವರ ನಿರ್ಣಯ ನಿಜಕ್ಕೂ ದುರದೃಷ್ಟಕರ ಎಂದು ಬೃಹತ್ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ (MB Patil) ಹೇಳಿದರು. ನಗರದಲ್ಲಿ ಇಂದು ಮಾಧ್ಯಮ ಗೋಷ್ಟಿಯಲ್ಲಿ ಮಾತಾಡಿದ ಸಚಿವ, ಶೆಟ್ಟರ್ ಕಾಂಗ್ರೆಸ್ ಬಿಟ್ಟರುವುದಕ್ಕೆ ಏನು ಕಾರಣ ನೀಡುತ್ತಾರೆನ್ನುವ ಬಗ್ಗೆ ಖಂಡಿತ ಕುತೂಹಲವಿದೆ, ಯಾಕೆಂದರೆ ಚುನಾವಣೆಯಲ್ಲಿ ಟಿಕೆಟ್ ನೀಡಿದ ಬಳಿಕ ಸೋತರೂ ಅವರನ್ನು ಎಂಎಲ್ ಸಿ (MLC) ಮಾಡಲಾಗಿತ್ತು, ಅವರು ಪಕ್ಷ ತ್ಯಜಿಸಲು ಯಾವುದೇ ಕಾರಣವಿರಲಿಲ್ಲ ಎಂದು ಪಾಟೀಲ್ ಹೇಳಿದರು. ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ತರುವಲ್ಲಿ ತಾನು ದೊಡ್ಡ ಪಾತ್ರ ನಿರ್ವಹಿಸಿದ್ದೆ ಎಂದು ಹೇಳಿದ ಸಚಿವ, ಶೆಟ್ಟರ್ ಕಾಂಗ್ರೆಸ್ ಸೇರುವ ಬಗ್ಗೆ ಮಾಧ್ಯಮ ವರದಿಗಳನ್ನು ತಾನು ನಂಬಿರಲಿಲ್ಲ ಮತ್ತು ಬಿಜೆಪಿ ಸೇರುವ ನಿರ್ಣಯ ತೆಗೆದುಕೊಳ್ಳುವ ಮೊದಲು ಅವರು ತನ್ನನ್ನು ಸಂಪರ್ಕಿಸಲಿಲ್ಲ ಎಂದರು. ಒಟ್ಟಿನಲ್ಲಿ ಇದೊಂದು ಆತುರದ ನಿರ್ಧಾರ, ಅವರರು ದೊಡ್ಡಮಟ್ಟದ ನಾಯಕನಾಗಿರುವುದರಿಂದ ಅವರ ನಡತೆಯ ಬಗ್ಗೆ ಪ್ರಶ್ನೆಗಳೇಳುತ್ತವೆ, ಅವರ ಬಗ್ಗೆ ಜನರಲ್ಲಿ ಬೇರೆ ಬೇರೆ ಅಭಿಪ್ರಾಯಗಳು ಮೂಡುತ್ತವೆ ಎಂದು ಸಚಿವ ಪಾಟೀಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ