ಲಿಂಗಾಯತ ಸಮುದಾಯದ ಒಳಪಂಗಡಗಳು ಒಂದುಗೂಡುವುದರಲ್ಲಿ ತಪ್ಪೇನಿದೆ? ಎಂಬಿ ಪಾಟೀಲ್, ಬೃಹತ್ ಕೈಗಾರಿಕೆಗಳ ಸಚಿವ
ಲಿಂಗಾಯತ ಮುಖ್ಯಮಂತ್ರಿಯ ಪ್ರಶ್ನೆ ಬಂದಾಗ ಪಾಟೀಲ್, ಎಂಬಿ ಪಾಟೀಲ್ ತಾನು ಮುಖ್ಯಮಂತ್ರಿ ಅಂದುಕೊಂಡಾಕ್ಷಣ ಮುಖ್ಯಮಂತ್ರಿಯಾಗಲಾರ, ಅದಕ್ಕೊಂದು ದೀರ್ಘ ಪ್ರತಿಕ್ರಿಯೆ ನಡೆಯುತ್ತದೆ, ಚುನಾವಣೆಯಲ್ಲಿ ಪಕ್ಷಕ್ಕೆ ಅಧಿಕಾರಕ್ಕೆ ಬರುವಷ್ಟು ಬಹುಮತ ಬರಬೇಕು, ನಂತರ ಮುಖ್ಯಮಂತ್ರಿ ಯಾರೆನ್ನುವುದನ್ನು ಮಲ್ಲಿಕಾರ್ಜುನ ಖರ್ಗೆ, ಸೋನಿಯ ಗಾಂಧಿ ಮತ್ತು ರಾಹುಲ್ ಗಾಂಧಿಯವರು ನಿರ್ಧರಿಸುತ್ತಾರೆ ಎಂದು ಪಾಟೀಲ್ ಹೇಳಿದರು.
ರಾಯಚೂರು: ಜಿಲ್ಲೆಯ ಲಿಂಗಸುಗೂರಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ (Srimad Rambhapuri Jagadguru) ಸಮ್ಮುಖದಲ್ಲಿ ಜರುಗುತ್ತಿರುವ ದಸರಾ ಧರ್ಮ ಸಮ್ಮೇಳನಲ್ಲಿ ಭಾಗವಹಿಸಿದ್ದ ಬೃಹತ್ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ (MB Patil) ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಲಿಂಗಾಯತ ಸಮುದಾಯದ ಒಳಪಂಗಡಗಳು (sub-sects of Lingayat community) ಒಂದಾಗುವುದರಲ್ಲಿ ತಪ್ಪೇನಿದೆ, ವೀರ ಮಹಾಸಭಾ ಜನ್ಮತಳೆದಿದ್ದು ಇದೇ ಹಿನ್ನೆಲೆಯಲ್ಲಿ ಎಂದು ಹೇಳಿದರು. ಲಿಂಗಾಯತ ಮುಖ್ಯಮಂತ್ರಿಯ ಪ್ರಶ್ನೆ ಬಂದಾಗ ಪಾಟೀಲ್, ಎಂಬಿ ಪಾಟೀಲ್ ತಾನು ಮುಖ್ಯಮಂತ್ರಿ ಅಂದುಕೊಂಡಾಕ್ಷಣ ಮುಖ್ಯಮಂತ್ರಿಯಾಗಲಾರ, ಅದಕ್ಕೊಂದು ದೀರ್ಘ ಪ್ರತಿಕ್ರಿಯೆ ನಡೆಯುತ್ತದೆ, ಚುನಾವಣೆಯಲ್ಲಿ ಪಕ್ಷಕ್ಕೆ ಅಧಿಕಾರಕ್ಕೆ ಬರುವಷ್ಟು ಬಹುಮತ ಬರಬೇಕು, ಗೆದ್ದ ಶಾಸಕರು ಶಾಸಕಾಂಗ ಪಕ್ಷದ ನಾಯಕನ್ನು ಆರಿಸುತ್ತಾರೆ, ಅವರ ಅಯ್ಕೆಯನ್ನು ದೆಹಲಿಯಲ್ಲಿರುವ ಪಕ್ಷದ ಹೈಕಮಾಂಡ್ ಕಳಿಸಲಾಗುತ್ತದೆ. ಮುಖ್ಯಮಂತ್ರಿ ಯಾರೆನ್ನುವುದನ್ನು ಮಲ್ಲಿಕಾರ್ಜುನ ಖರ್ಗೆ, ಸೋನಿಯ ಗಾಂಧಿ ಮತ್ತು ರಾಹುಲ್ ಗಾಂಧಿಯವರು ನಿರ್ಧರಿಸುತ್ತಾರೆ ಎಂದು ಪಾಟೀಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ