AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು

ಅಯೋಧ್ಯೆಯ ಸರಯೂ ನದಿ ದಡದಲ್ಲಿ ಪ್ರಜ್ವಲಿಸಿದ ಲಕ್ಷಾಂತರ ದೀಪಗಳು

ಸುಷ್ಮಾ ಚಕ್ರೆ
|

Updated on:Oct 30, 2024 | 7:24 PM

Share

ಅಯೋಧ್ಯೆಯಲ್ಲಿ ಈ ಬಾರಿಯ ದೀಪೋತ್ಸವ ಬಹಳ ವಿಶೇಷತೆಯಿಂದ ಕೂಡಿದೆ. ರಾಮ ಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿ ಇಲ್ಲಿನ ಸರಯೂ ನದಿ ದಡದಲ್ಲಿ ದೀಪೋತ್ಸವ ಆಯೋಜಿಸಲಾಗಿದೆ. ಇಂದು ಸಂಜೆಯಿಂದ ಲಕ್ಷಾಂತರ ಜನರು ಇಲ್ಲಿ ದೀಪಗಳು ಹಚ್ಚಿ ದೀಪಾವಳಿ ಆಚರಿಸಿದರು.

ಅಯೋಧ್ಯೆ: ಇಂದು ಅಯೋಧ್ಯೆ ನಗರವನ್ನು 28 ಲಕ್ಷ ಮಣ್ಣಿನ ಹಣತೆಗಳಿಂದ ದೀಪ ಬೆಳಗಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲಾಗುವುದು. ಈ ಹಿನ್ನೆಲೆಯಲ್ಲಿ ಸಂಜೆಯಿಂದಲೇ ಸರಯೂ ನದಿ ದಡದಲ್ಲಿ ಲಕ್ಷಾಂತರ ಜನರು ಹಣತೆಗಳನ್ನು ಹಚ್ಚಿ ದೀಪಗಳನ್ನು ಬೆಳಗುವ ಮೂಲಕ ದೀಪೋತ್ಸವ ಆಚರಿಸಿದರು. ಇದು ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ನಡೆಯುತ್ತಿರುವ ಮೊದಲ ದೀಪೋತ್ಸವವಾಗಿದೆ. ಉತ್ತರಾಖಂಡದ ರಾಮ್ ಲೀಲಾ ಪ್ರಸ್ತುತಿ ಕೂಡ ಇಂದು ರಾತ್ರಿ ನಡೆಯಲಿದೆ. ಈ ವರ್ಷದ ಜನವರಿಯಲ್ಲಿ ಉದ್ಘಾಟನೆಗೊಂಡ ರಾಮಮಂದಿರವು ಅದ್ಧೂರಿ ಪ್ರದರ್ಶನಕ್ಕೆ ಅಲಂಕೃತವಾಗಿದ್ದು, ಇಂದು ಸಂಜೆ ದೀಪೋತ್ಸವದಲ್ಲಿ 25 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಇದು ಹೊಸ ವಿಶ್ವ ದಾಖಲೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 30, 2024 07:23 PM