ಸೋತಿದ್ದೇನೆ ಅಂತ ಮನೆಯಲ್ಲಿ ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ: ನಿಖಿಲ್ ಕುಮಾರಸ್ವಾಮಿ
ರಾಜಕಾರಣವನ್ನು ಬದುಕಿನ ಮಾರ್ಗ ಮಾಡಿಕೊಳ್ಳುವ ಇಚ್ಛೆ ಇದ್ದಿದ್ದರೆ ಯಾವತ್ತೋ ಶಾಸಕ ಅಥವಾ ಸಂಸದನಾಗಬಹುದಿತ್ತು, ಚಿತ್ರರಂಗಕ್ಕೆ ಹೋಗುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ, ಆದರೆ ಈಗ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡು ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಹೇಳಿದರು.
ಹಾಸನ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸೋತ ಬಳಿಕ ಕಾಣೆಯಾದಂತಿದ್ದ ನಿಖಿಲ್ ಕುಮಾರಸ್ವಾಮಿ ಒಂದು ವಾರದ ನಂತರ ಅರಕೂಲಗೂಡು ತಾಲ್ಲೂಕಿನ ರಾಮನಾಥಪುರಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡಿದರು. ಸೋತಿದ್ದೇನೆ ಅಂತ ಕೈಕಟ್ಟಿ ಮನೆಯಲ್ಲಿ ಕೂರುವ ಜಾಯಮಾನ ತನ್ನದಲ್ಲ, ದೇವೇಗೌಡರು ಕಟ್ಟಿದ ಜೆಡಿಎಸ್ ಪಕ್ಷ ಇವತ್ತು ರಾಜ್ಯ ವಿಧಾನಸಬೆಯಲ್ಲಿ 18 ಸ್ಥಾನಕ್ಕಿಳಿದಿದೆ, ಪಕ್ಷ ಸಂಕಷ್ಟದಲ್ಲಿದ್ದಾಗ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ, ಪಕ್ಷವನ್ನು ದಡ ಮುಟ್ಟಿಸುವ ಕೆಲಸವನ್ನು ಮಾಡೋದಾಗಿ ನಿಖಿಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇವಲ 15 ದಿನ ಪ್ರಚಾರ ಮಾಡಿಯೂ ನಿಖಿಲ್ ಕುಮಾರಸ್ವಾಮಿ 85,000 ವೋಟು ಪಡೆದಿದ್ದಾನೆ: ಹೆಚ್ ಡಿ ರೇವಣ್ಣ