ಮಾಲೂರು ಕ್ಷೇತ್ರದ ಮರು ಮತ ಎಣಿಕೆ: ಪರಾಜಿತ ಅಭ್ಯರ್ಥಿಯಿಂದ ಚುನಾವಣೆ ಆಯೋಗಕ್ಕೆ ಮಹತ್ವದ ಪತ್ರ

Updated By: ರಮೇಶ್ ಬಿ. ಜವಳಗೇರಾ

Updated on: Nov 03, 2025 | 3:08 PM

ಮಾಲೂರು ವಿಧಾನಸಭೆ ಕ್ಷೇತ್ರದ ಮರು ಮತ ಎಣಿಕೆಗೆ ಸುಪ್ರೀಂಕೋರ್ಟ್ ಸಹ ಸೂಚಿಸಿದೆ. ಇದರ ಬೆನ್ನಲ್ಲೇ ಪರಾಜಿತ ಅಭ್ಯರ್ಥಿ, ದೂರುದಾರ ಮಂಜುನಾಥ್ ಗೌಡ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ತಹಶೀಲ್ದಾರ್ ಕೆಲ ಚುನಾವಣಾ ಸಾಮಗ್ರಿಗಳ ಅಕ್ರಮವಾಗಿ ವಶಕ್ಕೆ ಪಡೆದಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಈಗಾಗಲೇ ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮರು ಮತ ಎಣಿಕೆ ಗೆ ಆದೇಶ ನೀಡಿದೆ. ಭಾರತ ಚುನಾವಣಾ ಆಯೋಗದ ಕಡ್ಡಾಯ ಕಾರ್ಯ ವಿಧಾನದ ಪ್ರಕಾರ(ಪ್ರೊಸಿಡಿಂಗ್ಸ್) ಮತದಾನ ಮತ್ತು ಎಣಿಕೆಯ ನಂತರ ಚುನಾವಣಾ ಸಾಮಾಗ್ರಿಗಳನ್ನು ಮಹಜರು ಮಾಡಬೇಕು. ಬಳಿಕ ಕೋಲಾರದ ಸ್ಟ್ರಾಂಗ್ ರೂಂ ನಲ್ಲಿಡಬೇಕು.

ಕೋಲಾರ, (ನವೆಂಬರ್ 03): ಮಾಲೂರು ವಿಧಾನಸಭೆ ಕ್ಷೇತ್ರದ ಮರು ಮತ ಎಣಿಕೆಗೆ ಸುಪ್ರೀಂಕೋರ್ಟ್ ಸಹ ಸೂಚಿಸಿದೆ. ಇದರ ಬೆನ್ನಲ್ಲೇ ಪರಾಜಿತ ಅಭ್ಯರ್ಥಿ, ದೂರುದಾರ ಮಂಜುನಾಥ್ ಗೌಡ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ತಹಶೀಲ್ದಾರ್ ಕೆಲ ಚುನಾವಣಾ ಸಾಮಗ್ರಿಗಳ ಅಕ್ರಮವಾಗಿ ವಶಕ್ಕೆ ಪಡೆದಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಈಗಾಗಲೇ ಹೈ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮರು ಮತ ಎಣಿಕೆ ಗೆ ಆದೇಶ ನೀಡಿದೆ. ಭಾರತ ಚುನಾವಣಾ ಆಯೋಗದ ಕಡ್ಡಾಯ ಕಾರ್ಯ ವಿಧಾನದ ಪ್ರಕಾರ(ಪ್ರೊಸಿಡಿಂಗ್ಸ್) ಮತದಾನ ಮತ್ತು ಎಣಿಕೆಯ ನಂತರ ಚುನಾವಣಾ ಸಾಮಾಗ್ರಿಗಳನ್ನು ಮಹಜರು ಮಾಡಬೇಕು. ಬಳಿಕ ಕೋಲಾರದ ಸ್ಟ್ರಾಂಗ್ ರೂಂ ನಲ್ಲಿಡಬೇಕು. ಆದ್ರೆ ಕೆಲ ಸಾಮಗ್ರಿಗಳು, ಪತ್ರಿಕೆಗಳು ಮಾಲೂರು ತಹಶೀಲ್ದಾರ್ ಅವರ ಬಳಿ ಇದೆ. ಇದು ಕಾನೂನು ಬಾಹಿರ ಹಾಗೂ ಚುನಾವಣಾ ಪ್ರೋಸಿಡಿಂಗ್ಸ್ ಗೆ ವಿರುದ್ದವಾಗಿದೆ. ಹೀಗಾಗಿ ಪಾರದರ್ಶಕವಾಗಿರಬೇಕಾದ್ರೆ ತಕ್ಷಣವೆ ವಶಕ್ಕೆ ಪಡೆದು ಅರ್ಜಿದಾರರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗೆ ಮರಳಿ ತರಬೇಕು. ನ್ಯಾಯಯುತವಾಗಿ ಮರು ಮತ ಎಣಿಕೆ ಆಗಬೇಕಾದ್ರೆ ತುರ್ತು ಮತ್ತು ಅಗತ್ಯ ಪ್ರಕ್ರಿಯೆ ನಡೆಸುವಂತೆ ಮನವಿ ಮಾಡಿದ್ದಾರೆ.