Karnataka Assembly Polls: ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ರನ್ನು ಭೇಟಿಯಾದ ಅರುಣ್ ಸೋಮಣ್ಣ
ಟಿಕೆಟ್ ಸಿಗದಿರುವುದಕ್ಕೆ ಬೇರೆಯವರಂತೆ ಪಕ್ಷದ ನಾಯಕರನ್ನು ದೂಷಿಸುವ ಬದಲು ಅರುಣ್, ಬಿಜೆಪಿಯ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರನ್ನು ರಾಜ್ಯ ಬೆಜೆಪಿ ಕಚೇರಿಯಲ್ಲಿ ಭೇಟಿಯಾಗಿದ್ದಾರೆ
ಬೆಂಗಳೂರು: ವಿ ಸೋಮಣ್ಣ (V Somanna) ಗೋವಿಂದರಾಜ ನಗರ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದರೆ ಅವರಿಗೆ ಬೇಡದ ವರುಣಾ ಮತ್ತು ಚಾಮರಾಜನಗರ ಕ್ಷೇತ್ರ ಟಿಕೆಟ್ ಸಿಕ್ಕವು. ಹಾಗೆಯೇ ಅವರ ಮಗ ಅರುಣ್ ಸೋಮಣ್ಣ (Arun Somanna) ಗುಬ್ಬಿ ಕ್ಷೇತ್ರದಿಂದ ಟಿಕೆಟ್ ಯಾಚಿಸಿದ್ದರು. ಆದರೆ ಅವರ ಮನವಿಯನ್ನು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ. ಟಿಕೆಟ್ ಸಿಗದಿರುವುದಕ್ಕೆ ಬೇರೆಯವರಂತೆ ಪಕ್ಷದ ನಾಯಕರನ್ನು ದೂಷಿಸುವ ಬದಲು ಅರುಣ್, ಬಿಜೆಪಿಯ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ (Arun Singh) ಅವರನ್ನು ರಾಜ್ಯ ಬೆಜೆಪಿ ಕಚೇರಿಯಲ್ಲಿ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು. ಇಬ್ಬರು ಅರುಣ್ ಗಳ ನಡುವೆ ಏನು ಮಾತುಕತೆ ನಡೆಯಿತು ಅನ್ನೋದಿನ್ನೂ ಗೊತ್ತಾಗಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 13, 2023 11:40 AM
Latest Videos