ನಟ ಸೃಜನ್ ಲೋಕೇಶ್ ಗ್ಯಾಂಗ್ ಹಾಗೂ ಸಚಿವ ಸೋಮಣ್ಣ ಪುತ್ರನ ನಡುವೆ ಕಿರಿಕ್ ಆಯ್ತಾ? ಅರುಣ್ ಸೋಮಣ್ಣ ಹೇಳಿದ್ದೇನು?
ಮಾತಿಗೆ ಮಾತು ಬೆಳೆದು 2 ಗುಂಪುಗಳ ನಡುವೆ ಹೊಡೆದಾಟವಾಗಿದೆ. ಆದ್ರೆ ಘಟನೆ ಬಗ್ಗೆ ಗುಂಪುಗಳು, ಕ್ಲಬ್ ಆಡಳಿತ ಮಂಡಳಿ ದೂರು ನೀಡಿಲ್ಲ. ಗಲಾಟೆ ವೇಳೆ ನಟ ಸೃಜನ್ ಲೋಕೇಶ್ ಕಿಂಗ್ಸ್ ಕ್ಲಬ್ನಲ್ಲಿ ಇರಲಿಲ್ಲ.
ಬೆಂಗಳೂರು: ನಟ ಸೃಜನ್ ಲೋಕೇಶ್ ಟೀಂ(Srujan Lokesh) ಹಾಗೂ ವಸತಿ ಇಲಾಖೆ ಸಚಿವ ವಿ.ಸೋಮಣ್ಣ(V Somanna) ಪುತ್ರ ಅರುಣ್ ಸೋಮಣ್ಣ ನಡುವೆ ಗಲಾಟೆ ನಡೆದಿದೆ. ಅ.31ರಂದು ಬೆಂಗಳೂರಿನ ಮುದ್ದಿನಪಾಳ್ಯದ ಕಿಂಗ್ಸ್ ಕ್ಲಬ್ನಲ್ಲಿ ಸೃಜನ್ ಲೋಕೇಶ್ ತಂಡದ ಜೊತೆ ಅರುಣ್ ಸೋಮಣ್ಣ ಗಲಾಟೆ ನಡೆದಿದೆ ಎಂಬ ಮಾಹಿತಿ ತಡವಾಗಿ ಬಹಿರಂಗವಾಗಿದೆ.
ಅಪ್ಪು ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್ಗೆ ಪ್ರಾಕ್ಟೀಸ್ ವೇಳೆ ಜಗಳ ನಡೆದಿದೆ. ಟೂರ್ನಮೆಂಟ್ಗೆ ಸೃಜನ್ ಲೋಕೇಶ್ ಟೀಂ ಪ್ರಾಕ್ಟೀಸ್ ಮಾಡಿ ನಂತರ ಪಾರ್ಟಿ ಮಾಡಿದ್ದಾರೆ. ಈ ವೇಳೆ ಯಾಕೆ ಜೋರಾಗಿ ಕಿರುಚಾಡುತ್ತಿದ್ದೀರಾ ಎಂದು ಅರುಣ್ ಪ್ರಶ್ನಿಸಿದ್ದಾರೆ. ಈ ಸಮಯ ಅರುಣ್, ಸೃಜನ್ ಲೋಕೇಶ್ ಟೀಂ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು 2 ಗುಂಪುಗಳ ನಡುವೆ ಹೊಡೆದಾಟವಾಗಿದೆ. ಆದ್ರೆ ಘಟನೆ ಬಗ್ಗೆ ಗುಂಪುಗಳು, ಕ್ಲಬ್ ಆಡಳಿತ ಮಂಡಳಿ ದೂರು ನೀಡಿಲ್ಲ. ಗಲಾಟೆ ವೇಳೆ ನಟ ಸೃಜನ್ ಲೋಕೇಶ್ ಕಿಂಗ್ಸ್ ಕ್ಲಬ್ನಲ್ಲಿ ಇರಲಿಲ್ಲ. ವಿಕಾಸ್ ಮತ್ತು ಅರುಣ್ ಸೋಮಣ್ಣ ನಡುವೆ ಘಟನೆ ನಡೆದಿದೆ ಎನ್ನಲಾಗಿದೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಪಿಂಚಣಿದಾರು ಆನ್ಲೈನ್ನಲ್ಲಿ ಜೀವನ ಪ್ರಮಾಣಪತ್ರ ಪುರಾವೆ ಸಲ್ಲಿಸಲು ಇಲ್ಲಿದೆ 5 ಸುಲಭ ವಿಧಾನ
ಚುನಾವಣೆ ಸಮೀಪಿಸುತ್ತಿದೆ. ನಮ್ಮ ತಂದೆಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ವಿರೋಧಿಗಳನ್ನು ಕಂಗೆಡಿಸಿವೆ. ಇದರಿಂದ ಹತಾಷೆಗೊಂಡಿರುವ ರಾಜಕೀಯ ವಿರೋಧಿಗಳು ಕುಂತಂತ್ರದ ಮೂಲಕ ತಂದೆಯವರಿಗೆ ಕೆಟ್ಟ ಹೆಸರು ತರಲು ಈ ರೀತಿಯ ಪ್ರಯತ್ನ ನಡೆಯುತ್ತಿರಬಹುದು.
— Arun Somanna (@arunsomanna) November 2, 2022
ಇನ್ನು ಘಟನೆ ಸಂಬಂಧ ಟಿವಿ9ಗೆ ವಸತಿ ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನಟ ಸೃಜನ್ ಲೋಕೇಶ್ರನ್ನು ನೇರವಾಗಿ ನೋಡಿಯೇ ಇಲ್ಲ. ನಟ ಸೃಜನ್ ಲೋಕೇಶ್ ಜೊತೆ ನಮಗೆ ಯಾವುದೇ ಸಂಬಂಧವಿಲ್ಲ. ಜೀವನದಲ್ಲಿ ಎಂದೂ ನಟ ಸೃಜನ್ ಲೋಕೇಶ್ ಭೇಟಿಯಾಗಿಲ್ಲ. ಯಾವುದೇ ರಾಜಿಸಂಧಾನ ಕೂಡ ಆಗಿಲ್ಲ. ಕಿಂಗ್ಸ್ ಕ್ಲಬ್ನಲ್ಲಿ ನಾವು ಯಾರ ಜೊತೆಗೂ ಗಲಾಟೆ ಮಾಡಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಇಂತಹ ಆರೋಪ ಮಾಡುತ್ತಿದ್ದಾರೆ ಎಂದರು.
Published On - 4:01 pm, Wed, 2 November 22