ವಯನಾಡು ‘ಕೈ’ ಕಚೇರಿ ಬಳಿಯೇ ರಾಹುಲ್, ಪ್ರಿಯಾಂಕಾ ವಿರುದ್ಧ ರಾರಾಜಿಸಿದ ಪೋಸ್ಟರ್!
ವಯನಾಡು ಡಿಸಿಸಿ ಕಚೇರಿ ಹೊರಗೆ ರಾಹುಲ್, ಪ್ರಿಯಾಂಕಾ ವಿರುದ್ಧ ಪೋಸ್ಟರ್ ರಾರಾಜಿಸಿವೆ. "ವಯನಾಡ್ ಮರೆಯಿರಿ, ಮತ್ತೆ ಗೆಲ್ಲುವುದಿಲ್ಲ" ಎಂದು ಅದರಲ್ಲಿ ಬರೆದಿದ್ದು, ಸಿಎಂ ಘೋಷಣೆ ವಿಳಂಬದಿಂದ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ಹೆಚ್ಚಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ, ವೇಣುಗೋಪಾಲ್ ಅವರನ್ನು ಉಲ್ಲೇಖಿಸಿ, ರಾಹುಲ್, ಕೆಸಿ ನಿಮ್ಮ ಬ್ಯಾಗ್ ಹೊರುವವರಾಗಿರಬಹುದು. ಆದರೆ ಕೇರಳದ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಲಾಗಿದೆ.
ತಿರುವನಂತಪುರಂ, ಮೇ 13: ವಯನಾಡು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಹೊರಗೆ ಬುಧವಾರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧದ ಸಂದೇಶಗಳಿರುವ ಪೋಸ್ಟರ್‌ಗಳು ರಾರಾಜಿಸಿವೆ. ರಾಹುಲ್ ಮತ್ತು ಪ್ರಿಯಾಂಕಾ, ವಯನಾಡ್‌ನ್ನು ಮರೆತುಬಿಡಿ. ನೀವು ಮತ್ತೆ ಇಲ್ಲಿಂದ ಗೆಲ್ಲುವುದಿಲ್ಲ ಎಂದು ಬರೆದಿದೆ. ಮತ್ತೊಂದು ಪೋಸ್ಟರ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ, ವೇಣುಗೋಪಾಲ್ ಅವರನ್ನು ಉಲ್ಲೇಖಿಸಿ, ರಾಹುಲ್, ಕೆಸಿ ನಿಮ್ಮ ಬ್ಯಾಗ್ ಹೊರುವವರಾಗಿರಬಹುದು. ಆದರೆ ಕೇರಳದ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಬರೆಯಲಾಗಿದೆ. ಮೂರನೇ ಪೋಸ್ಟರ್‌ನಲ್ಲಿ ಇದು ಎಚ್ಚರಿಕೆ ಅಲ್ಲ. ಈ ತಪ್ಪಿಗಾಗಿ ಕೇರಳ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಯುನೈಟೆಡ್ ಡೆಮೋಕ್ರೆಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಗೆಲುವು ಸಾಧಿಸಿದ್ದರೂ, ಕೇರಳ ಮುಖ್ಯಮಂತ್ರಿಯ ಹೆಸರನ್ನು ಘೋಷಿಸುವಲ್ಲಿ ವಿಳಂಬವಾಗಿರುವುದರಿಂದ ಅಸಮಾಧಾನ ಹೆಚ್ಚಾಗಿದೆ. ವರದಿಗಳ ಪ್ರಕಾರ, 140 ಸದಸ್ಯರ ವಿಧಾನಸಭೆಯಲ್ಲಿ UDF 102 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದ ಎಂಟನೇ ದಿನ ಈ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಕುರಿತ ಚರ್ಚೆಯನ್ನು ಮುಂದುವರಿಸಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

