ಇವರೇ ಅಲ್ವಾ ‘ಬೆಸ್ಟ್ ಬಾಸ್’ ಅಂದ್ರೆ!: ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ

Updated on: Apr 03, 2026 | 4:00 PM

ದೆಹಲಿಯ ಒಂದು ಏಜೆನ್ಸಿಯ ಮುಖ್ಯಸ್ಥರು, ಕಂಪನಿಯ ಯಶಸ್ಸಿಗೆ ಮೆಚ್ಚಿ, ತಮ್ಮ ಎಲ್ಲಾ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸವನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಣಕಾಸು ವರ್ಷದ ಅದ್ಭುತ ಸಾಧನೆಗಾಗಿ ಈ ನಿರ್ಧಾರ ಕೈಗೊಂಡಿದ್ದು, ಉದ್ಯೋಗಿಗಳನ್ನು ಖುಷಿಪಡಿಸಿದೆ. ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ಇಂತಹ ಬಾಸ್ ಎಲ್ಲರಿಗೂ ಸಿಗಲಿ" ಎಂದು ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ.

ದೆಹಲಿ, ಏಪ್ರಿಲ್ 03: ಸಾಮಾನ್ಯವಾಗಿ ಹಣಕಾಸು ವರ್ಷದ ಅಂತ್ಯ ಎಂದರೆ ಉದ್ಯೋಗಿಗಳಿಗೆ ಟಾರ್ಗೆಟ್ ಮುಗಿಸುವ ಒತ್ತಡವಿರುತ್ತದೆ. ಆದರೆ ದೆಹಲಿಯ ಈ ಏಜೆನ್ಸಿ ಬಾಸ್ ಮಾತ್ರ ತನ್ನ ಉದ್ಯೋಗಿಗಳಿಗೆ ಅಚ್ಚರಿಯ ಮತ್ತು ಖುಷಿಯ ಸುದ್ದಿಯೊಂದನ್ನು ನೀಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯು ಅದ್ಭುತ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ, ಎಲ್ಲಾ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸವನ್ನು ಉಡುಗೊರೆಯಾಗಿ ಘೋಷಿಸಿದ್ದಾರೆ. “ಕಳೆದ ಹಣಕಾಸು ವರ್ಷ ನಮಗೆ ಅದ್ಭುತವಾಗಿತ್ತು. ನಮ್ಮ ತಂಡದ ಕಠಿಣ ಪರಿಶ್ರಮಕ್ಕೆ ಪ್ರತಿಫಲವಾಗಿ ಎಲ್ಲರಿಗೂ 4 ದಿನಗಳ ಗೋವಾ ಪ್ರವಾಸವನ್ನು ಆಯೋಜಿಸಲಾಗಿದೆ. ಅಲ್ಲಿ ಎಲ್ಲರೂ ರಿಲ್ಯಾಕ್ಸ್ ಆಗಿ, ಮನಸ್ಸನ್ನು ರಿಸೆಟ್ ಮಾಡಿಕೊಂಡು ಮತ್ತೆ ಹೊಸ ಹುರುಪಿನಿಂದ ಕೆಲಸ ಮುಂದುವರಿಸೋಣ” ಎಂದು ಏಜೆನ್ಸಿ ಮುಖ್ಯಸ್ಥರು ಘೋಷಿಸಿದ್ದಾರೆ. ಕಂಪನಿಯ ಈ ನಿರ್ಧಾರಕ್ಕೆ ಉದ್ಯೋಗಿಗಳು ಫಿದಾ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಈಗ ಭಾರಿ ವೈರಲ್ ಆಗುತ್ತಿದೆ. “ಇಂತಹ ಬಾಸ್ ಎಲ್ಲರಿಗೂ ಸಿಗಲಿ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 03, 2026 04:00 PM
Follow Us