Loading video

Video: ದೆಹಲಿ: ರಸ್ತೆ ಮಧ್ಯೆ ಪ್ರಪಾತದಂಥಾ ಹೊಂಡ, ಮುಕ್ಕಾಲು ಭಾಗ ಮುಚ್ಚಿಹೋದ ಕಾರು

|

Updated on: Feb 25, 2025 | 10:19 AM

ದೆಹಲಿಯ ದ್ವಾರಕಾ ಸೆಕ್ಟರ್​ 12ರ ಬಳಿ ಸರ್ವೀಸ್​ ಲೇನ್​ನ ಒಂದು ಭಾಗ ಕುಸಿದಿದ್ದು, ಪ್ರವಾಹದಂಥಾ ಹೊಂಡ ನಿರ್ಮಾಣವಾಗಿದ್ದು, ಕಾರೊಂದು ಮುಕ್ಕಾಲು ಭಾಗ ಅದರೊಳಗೆ ಹೊಕ್ಕಿರುವ ಘಟನೆ ನಡೆದಿದೆ. ಸ್ಥಳೀಯರು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.ಎಎಪಿಯ ಮಾಜಿ ಶಾಸಕ ಗುಲಾಬ್ ಸಿಂಗ್ ಯಾದವ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು, ಜನರು ಐದು ವರ್ಷಗಳ ಕಾಲ ಅದನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ದೆಹಲಿಯ ದ್ವಾರಕಾ ಸೆಕ್ಟರ್​ 12ರ ಬಳಿ ಸರ್ವೀಸ್​ ಲೇನ್​ನ ಒಂದು ಭಾಗ ಕುಸಿದಿದ್ದು, ಪ್ರವಾಹದಂಥಾ ಹೊಂಡ ನಿರ್ಮಾಣವಾಗಿde., ಕಾರೊಂದು ಮುಕ್ಕಾಲು ಭಾಗ ಅದರೊಳಗೆ ಹೊಕ್ಕಿರುವ ಘಟನೆ ನಡೆದಿದೆ. ಸ್ಥಳೀಯರು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.ಎಎಪಿಯ ಮಾಜಿ ಶಾಸಕ ಗುಲಾಬ್ ಸಿಂಗ್ ಯಾದವ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು, ಜನರು ಐದು ವರ್ಷಗಳ ಕಾಲ ಅದನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಅವರ ಮಂತ್ರಿ ಮಂಡಳಿಯು ಪಿಡಬ್ಲ್ಯೂಡಿ ಮತ್ತು ದೆಹಲಿ ಜಲ ಮಂಡಳಿ (ಡಿಜೆಬಿ) ಅಧಿಕಾರಿಗಳನ್ನು ಭೇಟಿ ಮಾಡಿ ನಗರದಲ್ಲಿ ರಸ್ತೆಗಳು ಮತ್ತು ನೀರು ಸರಬರಾಜಿನ ಸ್ಥಿತಿಯನ್ನು ಪರಿಶೀಲಿಸಿತು. ದೆಹಲಿ ಜಲ ಮಂಡಳಿ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಯಿತು.

ಜಲ ಮಂಡಳಿಯ ಅಧಿಕಾರಿಗಳೊಂದಿಗೆ ನೀರು ಸಂಬಂಧಿತ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಹಾಳಾದ ರಸ್ತೆಗಳು ಮತ್ತು ಚರಂಡಿಗಳ ಸ್ಥಿತಿಯ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು, ಇದರಲ್ಲಿ ಅಗತ್ಯ ಸುಧಾರಣೆಗಳನ್ನು ಚರ್ಚಿಸಲಾಯಿತು. ದೆಹಲಿ ನಿವಾಸಿಗಳ ಅನುಕೂಲತೆ ಮತ್ತು ಅಭಿವೃದ್ಧಿಗಾಗಿ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 25, 2025 10:19 AM