ಕೊಲೆಯಾದವನ ಬಳಿ ಇದ್ದವು 15ಕ್ಕೂ ಹೆಚ್ಚು ಖಾಸಗಿ ವಿಡಿಯೋ: ಒಂದೊಂದು ವಿಡಿಯೋದಲ್ಲೂ ಒಬ್ಬೊಬ್ಬ ಮಹಿಳೆಯರು

Updated on: Oct 28, 2025 | 8:07 PM

ಯುಪಿಎಸ್‌ಸಿ ಆಕಾಂಕ್ಷಿಯಾಗಿದ್ದ 32 ವರ್ಷದ ರಾಮಕೇಶ್ ಮೀನಾ ಕೊಲೆ ಕೇಸ್ ಆಳಕ್ಕಿಳಿದಂತೆಲ್ಲಾ ಹೊಸ ಹೊಸ ಸಂಗತಿಗಳು ತೆರೆದುಕೊಳ್ಳುತ್ತಿವೆ. ಮೃತ ರಾಮಕೇಶ್ ನಿವಾಸದಿಂದ ವಶಪಡಿಸಿಕೊಂಡ ಹಾರ್ಡ್ ಡಿಸ್ಕ್‌ನಲ್ಲಿ ರಾಮ್ ಲಿವ್-ಇನ್ ಪಾರ್ಟ್‌ನರ್ ಅಮೃತಾ ಸೇರಿದಂತೆ 15ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವೀಡಿಯೊಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ವಿಡಿಯೋಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ನವದೆಹಲಿ, (ಅಕ್ಟೋಬರ್ 28): ದೆಹಲಿಯ ಗಾಂಧಿ ವಿಹಾರ್ ನಲ್ಲಿ ಯುಪಿಎಸ್‌ಸಿ ಆಕಾಂಕ್ಷಿಯಾಗಿದ್ದ 32 ವರ್ಷದ ರಾಮಕೇಶ್ ಮೀನಾ ಕೊಲೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಲಿವಿಂಗ್ ಟುಗೆದರ್ ನಲ್ಲಿದ್ದ ಅಮೃತಾ ಚೌಹಾಣ್ ತನ್ನ ಮಾಜಿ ಪ್ರಿಯಕರನ ಜೊತೆ ಸೇರಿಕೊಂಡು ಪ್ರಿಯಕರ ರಾಮಕೇಶನನ್ನು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ತನ್ನ ಖಾಸಗಿ ವಿಡಿಯೋ ಡಿಲೀಟ್ ಮಾಡಲಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿ ಬಳಿಕ ಬೆಂಕಿ ಹಚ್ಚಿದ್ದರು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಯುಪಿಎಸ್‌ಸಿ ಆಕಾಂಕ್ಷಿಯಾಗಿದ್ದ 32 ವರ್ಷದ ರಾಮಕೇಶ್ ಮೀನಾ ಕೊಲೆ ಕೇಸ್ ಆಳಕ್ಕಿಳಿದಂತೆಲ್ಲಾ ಹೊಸ ಹೊಸ ಸಂಗತಿಗಳು ತೆರೆದುಕೊಳ್ಳುತ್ತಿವೆ. ಮೃತ ರಾಮಕೇಶ್ ನಿವಾಸದಿಂದ ವಶಪಡಿಸಿಕೊಂಡ ಹಾರ್ಡ್ ಡಿಸ್ಕ್‌ನಲ್ಲಿ ರಾಮ್ ಲಿವ್-ಇನ್ ಪಾರ್ಟ್‌ನರ್ ಅಮೃತಾ ಸೇರಿದಂತೆ 15ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವೀಡಿಯೊಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ವಿಡಿಯೋಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಇದನ್ನೂ ನೋಡಿ:: UPSC ಆಕಾಂಕ್ಷಿಯಾಗಿದ್ದ ಪ್ರಿಯಕರನ ಕಥೆ ಮುಗಿಸಿದ ಪ್ರಿಯತಮೆ: ರಾಸಲೀಲೆ ವಿಡಿಯೋಕ್ಕಾಗಿ ನಡೆಯಿತು ಕೊಲೆ