ಕ್ರಿಕೆಟ್ ಲೋಕದ ಇನ್ನೊಂದು ಮುಖ ಅನಾವರಣ ಮಾಡಲಿರುವ ‘ಬ್ರ್ಯಾಟ್’ ಸಿನಿಮಾ
ಖ್ಯಾತ ನಟ ಡಾರ್ಲಿಂಗ್ ಕೃಷ್ಣ ಅವರು ‘ಬ್ರ್ಯಾಟ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಬೇರೆ ರೀತಿಯ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕುರಿತ ಕಹಾನಿ ಇದೆ. ಈ ಬಗ್ಗೆ ‘ಟಿವಿ 9’ ಸಂದರ್ಶನದಲ್ಲಿ ಡೈರೆಕ್ಟರ್ ಶಶಾಂಕ್ ಅವರು ಮಾತನಾಡಿದ್ದಾರೆ.
ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರು ‘ಬ್ರ್ಯಾಟ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅವರು ಬೇರೆ ರೀತಿಯ ಪಾತ್ರವನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಕಹಾನಿ ಇದೆ. ಈ ಬಗ್ಗೆ ‘ಟಿವಿ9’ ಸಂದರ್ಶನದಲ್ಲಿ ನಿರ್ದೇಶಕ ಶಶಾಂಕ್ ಅವರು ಮಾತನಾಡಿದ್ದಾರೆ. ಶಶಾಂಕ್ ಕೂಡ ಕ್ರಿಕೆಟರ್ ಆಗಬೇಕು ಎಂಬ ಆಸೆ ಇಟ್ಟುಕೊಂಡವರು. ಆದರೆ ಅವರು ಸಿನಿಮಾ ನಿರ್ದೇಶಕನಾದರು. ಹಾಗಾಗಿ ಅವರಿಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಇದೆ. ‘ಕ್ರಿಕೆಟ್ ಬಗ್ಗೆ ಒಂದು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಅದು ಬ್ರ್ಯಾಟ್ ಮೂಲಕ ಈಡೇರಿದೆ. ಕ್ರಿಕೆಟ್ನ ಇನ್ನೊಂದು ಮುಖ ಬೆಟ್ಟಿಂಗ್ ಬಗ್ಗೆ ಈ ಚಿತ್ರದಲ್ಲಿ ತೋರಿಸಿದ್ದೇವೆ. ಆಫ್ಲೈನ್ ಬೆಟ್ಟಿಂಗ್ ಬಗ್ಗೆ ನನಗೆ ಮೊದಲಿಂದಲೂ ಕುತೂಹಲ ಇತ್ತು. ಆ ಬಗ್ಗೆ ರಿಸರ್ಚ್ ಮಾಡಿದಾಗ ಈ ಕಥೆಯ ಐಡಿಯಾ ಬಂತು’ ಎಂದು ನಿರ್ದೇಶಕ ಶಶಾಂಕ್ (Director Shashank) ಅವರು ಹೇಳಿದ್ದಾರೆ. ಅಕ್ಟೋಬರ್ 31ರಂದು ‘ಬ್ರ್ಯಾಟ್’ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

