‘ಬ್ರ್ಯಾಟ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಇಮೇಜ್ ಡ್ಯಾಮೇಜ್ ಆಯ್ತಾ?
ಡೈರೆಕ್ಟರ್ ಶಶಾಂಕ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ನಲ್ಲಿ ‘ಬ್ರ್ಯಾಟ್’ ಸಿನಿಮಾ ಸಿದ್ಧವಾಗಿದೆ. ಅ.31ರಂದು ಈ ಚಿತ್ರ ರಿಲೀಸ್ ಆಗಲಿದೆ. ಸಿನಿಮಾದ ಬಗ್ಗೆ ಟಿವಿ9 ಸಂದರ್ಶನದಲ್ಲಿ ಡಾರ್ಲಿಂಗ್ ಕೃಷ್ಣ, ಶಶಾಂಕ್ ಹಾಗೂ ನಟಿ ಮನಿಷಾ ಕಂದಕೂರ್ ಅವರು ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ನಿರ್ದೇಶಕ ಶಶಾಂಕ್ ಮತ್ತು ನಟ ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್ನಲ್ಲಿ ‘ಬ್ರ್ಯಾಟ್’ ಸಿನಿಮಾ (Brat Movie) ಸಿದ್ಧವಾಗಿದೆ. ಅಕ್ಟೋಬರ್ 31ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಟಿವಿ9 ಸಂದರ್ಶನದಲ್ಲಿ ಶಶಾಂಕ್, ಕೃಷ್ಣ ಮತ್ತು ನಟಿ ಮನಿಷಾ ಕಂದಕೂರ್ ಅವರು ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಅವರ ಇಮೇಜ್ ಬದಲಾಗಿದೆ. ಆ ಕುರಿತು ನಿರ್ದೇಶಕ ಶಶಾಂಕ್ (Director Shashank) ತಿಳಿಸಿದ್ದಾರೆ. ‘ಕೃಷ್ಣ ಒಳ್ಳೆಯ ಹುಡುಗ ಎಂಬ ಇಮೇಜ್ ಇತ್ತು. ಅದನ್ನು ಹೇಗಾದ್ರೂ ಮಾಡಿ ಡ್ಯಾಮೇಜ್ ಮಾಡಬೇಕು ಎಂಬ ಆಸೆ ಇತ್ತು. ರಿಯಲ್ ಲೈಫ್ನಲ್ಲಿ ಕೃಷ್ಣ ಅವರನ್ನು ನೋಡಿದರೆ ತುಂಬಾ ಒಳ್ಳೆಯ ಹುಡುಗನ ರೀತಿ ಕಾಣಿಸಲ್ಲ. ಅವರ ಲುಕ್ಗೆ ಹೊಂದಿಕೆ ಆಗುವ ರೀತಿಯಲ್ಲಿ ಬ್ರ್ಯಾಟ್ ಸಿನಿಮಾ ಮಾಡಿದ್ದೇವೆ. ನನಗೆ ಕೃಷ್ಣ ಎಂದಿಗೂ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಲ್ಲ’ ಎಂದು ಶಶಾಂಕ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

