ವೈದ್ಯರ ಸಕಲ ಪ್ರಯತ್ನಗಳ ಹೊರತಾಗಿಯೂ ಅಪ್ಪನನ್ನು ಉಳಿಸಿಕೊಳ್ಳಲಾಗಲಿಲ್ಲ: ವಿ ಶ್ರೀನಿವಾಸ್ ಪ್ರಸಾದ್ ಪುತ್ರಿ
ಮೃತರ ಮೈಸೂರು ನಗರದಲ್ಲಿರುವ ಮನೆಯಲ್ಲಿ ಪಾರ್ಥೀ ಶರೀರವನ್ನು ಜನರ ಅಂತಿಮ ದರ್ಶನಕ್ಕೆ ಇಡಲಾಗುವುದೆಂದು ಹೇಳಿದ ಅವರು ಅಂತಿಮ ಸಂಸ್ಕಾರ ಎಲ್ಲಿ ನಡೆಸಬೇಕೆನ್ನುವುದು ಇನ್ನೂ ನಿರ್ಧರಿಸಿಲ್ಲ ಎಂದರು. ಎರಡು ವಾರಗಳಷ್ಟು ಹಿಂದೆ ತಮ್ಮ ನಡುವಿನ ಮುನಿಸು ಮರೆತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ್ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು.
ಬೆಂಗಳೂರು: ನಾವು ಈಗಾಗಲೇ ವರದಿ ಮಾಡಿರುವ ಹಾಗೆ ರಾಜ್ಯದ ಹಿರಿಯ ರಾಜಕಾರಣಿ ಮತ್ತು ಚಾಮರಾಜನಗರದ ಹಾಲಿ ಶಾಸಕ ವಿ ಶ್ರೀನಿವಾಸ ಪ್ರಸಾದ್ (V Srinivas Prasad) ಕೊನೆಯುಸಿರೆಳೆದಿದ್ದಾರೆ. ಹಲವಾರು ತಿಂಗಲುಗಳಿಂದ ಅವರು ಆನಾರೋಗ್ಯದಲ್ಲಿದ್ದರು. ಪ್ರಸಾದ್ ಇವತ್ತು ಬೆಳಗಿನ ಜಾವ ನಿಧನ (wee hours) ಹೊಂದಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರ ಮಗಳು, ನಗರದ ಖ್ಯಾತ ಆಸ್ಪತ್ರೆಯೊಂದರ ಪ್ರಮುಖ ವೈದ್ಯರ (team of doctors) ತಂಡದ ಭಗೀರಥ ಪ್ರಯತ್ನದ ಹೊರಾತಾಗಿಯೂ ತಮ್ಮ ತಂದೆಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದಿದ್ದಾರೆ. ಕೆಲ ದಿನಗಳ ಹಿಂದೆಯೂ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಚಿಕಿತ್ಸೆಯ ಬಳಿಕ ಮನೆಗೆ ಕರೆದೊಯ್ಯಲಾಗಿತ್ತು ಎಂದು ಅವರು ಹೇಳಿದರು. ಮೃತರ ಮೈಸೂರು ನಗರದಲ್ಲಿರುವ ಮನೆಯಲ್ಲಿ ಪಾರ್ಥೀ ಶರೀರವನ್ನು ಜನರ ಅಂತಿಮ ದರ್ಶನಕ್ಕೆ ಇಡಲಾಗುವುದೆಂದು ಹೇಳಿದ ಅವರು ಅಂತಿಮ ಸಂಸ್ಕಾರ ಎಲ್ಲಿ ನಡೆಸಬೇಕೆನ್ನುವುದು ಇನ್ನೂ ನಿರ್ಧರಿಸಿಲ್ಲ ಎಂದರು. ಎರಡು ವಾರಗಳಷ್ಟು ಹಿಂದೆ ತಮ್ಮ ನಡುವಿನ ಮುನಿಸು ಮರೆತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ್ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಚಾಮರಾಜನಗರ ಕ್ಷೇತ್ರದಿಂದ ಅಳಿಯನನ್ನು ಕಣಕ್ಕಿಳಿಸುವ ಪ್ರಯತ್ನದಲ್ಲಿ ಸಂಸದ ವಿ ಶ್ರೀನಿವಾಸ್ ಪ್ರಸಾದ್!