ಪೆನ್ ಡ್ರೈವ್ ಹಂಚಿದ ಐವರ ವಿರುದ್ಧ ಎಫ್ಐಅರ್ ದಾಖಲಾಗಿದ್ದರೂ ಅವರನ್ನು ಯಾಕೆ ಬಂಧಿಸಿಲ್ಲ? ಹೆಚ್ ಡಿ ರೇವಣ್ಣ ವಕೀಲ
ಎಫ್ಐಆರ್ ನಲ್ಲಿ ಇರುವ ಹೆಸರುಗಳು-ಜಿಲ್ಲಾ ಬಿಜೆಪಿ ಮುಖಂಡ ಮತ್ತು ಕ್ವಾಲಿಟಿ ಬಾರ್ ಮಾಲೀಕ ಶರತ್, ಕಾರ್ತೀಕ್, ವಿಡಿಯೋಗಳನ್ನು ಲೀಕ್ ಮಾಡುವ ಹಿಂದಿನ ಕಿಂಗ್ ಪಿನ್ ನವೀನ್ ಗೌಡ, ಪುಟ್ಟರಾಜು, ಮತ್ತು ಚೇತನ್ ಎಂದು ವಕೀಲ ಹೇಳಿದರು. ಇವರನ್ನು ಬಂಧಿಸಿ ವಿಚಾರಣೆಗೊಳಡಿಸದ ಹೊರತು ತನಿಖೆ ಪೂರ್ತಿಯಾಗುವುದಿಲ್ಲ ಎಂದು ಅವರು ಹೇಳಿದರು.
ಬೆಂಗಳೂರು: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡ ನಂತರ ಅವರ ವಕೀಲ (lawyer) ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದರು. ಎಸ್ಐಟಿ ತನಿಖೆ (SIT investigation ) ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಹಾಸನದ ಮಹಿಳೆ ಮಾನ ಹರಾಜಾದರೂ ಅವರ ಬಗ್ಗೆ ತನಿಖಾಧಿಕಾರಿಗಳಿಗೆ ಕಾಳಜಿ ಇಲ್ಲ, ಅವರಿಗೆ ನ್ಯಾಯ ಒದಗಿಸಸುವ ಬದಲು ದೇವೇಗೌಡರ ಕುಟುಂಬದ ತೇಜೋವಧೆಗಾಗಿ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಕೀಲ ಹೇಳಿದರು. ಸುಮಾರು ಒಂದು ಲಕ್ಷದಷ್ಟು ಪೆನ್ ಡ್ರೈವ್ ಗಳನ್ನು ಲೀಕ್ ಮಾಡಿದ ಐವರ ವಿರುದ್ಧ ಹಾಸನದ ಸೈಬರ್ ಪೊಲೀಸ್ ವಿಂಗ್ ನಲ್ಲಿ ಪ್ರಕರಣ ದಾಖಲಾಗಿ 15 ದಿನ ಕಳೆದರೂ ಅವರನ್ನು ಇದುವರೆಗೆ ಬಂಧಿಸಿಲ್ಲ. ಎಫ್ಐಆರ್ ನಲ್ಲಿ ಇರುವ ಹೆಸರುಗಳು-ಜಿಲ್ಲಾ ಬಿಜೆಪಿ ಮುಖಂಡ ಮತ್ತು ಕ್ವಾಲಿಟಿ ಬಾರ್ ಮಾಲೀಕ ಶರತ್, ಕಾರ್ತೀಕ್, ವಿಡಿಯೋಗಳನ್ನು ಲೀಕ್ ಮಾಡುವ ಹಿಂದಿನ ಕಿಂಗ್ ಪಿನ್ ನವೀನ್ ಗೌಡ, ಪುಟ್ಟರಾಜು, ಮತ್ತು ಚೇತನ್ ಎಂದು ವಕೀಲ ಹೇಳಿದರು. ಇವರನ್ನು ಬಂಧಿಸಿ ವಿಚಾರಣೆಗೊಳಡಿಸದ ಹೊರತು ತನಿಖೆ ಪೂರ್ತಿಯಾಗುವುದಿಲ್ಲ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಿನ್ನೆ ಬೆಂಗಳೂರಲ್ಲಿರುವ ಹೆಚ್ ಡಿ ರೇವಣ್ಣ ಮನೆಗೆ ಆಗಮಿಸಿದ್ದ ಭವಾನಿ ರೇವಣ್ಣ ಇಂದು ವಾಪಸ್ಸು ಹೋದರು!