ಜಗಪತಿಬಾಬು ಲೆಜೆಂಡರಿ ನಟನಾದರೂ ಸರಳ ವ್ಯಕ್ತಿ, ಅವರ ಜೊತೆ ನಟಿಸಿದ್ದು ಒಂದು ಅಪೂರ್ವ ಅನುಭವ: ಗರುಡ ರಾಮ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 04, 2021 | 9:48 PM

‘ಮದಗಜ’ ಚಿತ್ರದಲ್ಲಿ ತಮ್ಮ ಲುಕ್ಸ್ ಮತ್ತು ಕಾಸ್ಟ್ಯೂಮ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ, ಅದರ ಶ್ರೇಯಸ್ಸು ಸಂಪೂರ್ಣವಾಗಿ ಚಿತ್ರದ ನಿರ್ದೇಶಕ ಮಹೇಶ್ ಮತ್ತು ನಿರ್ಮಾಪಕ ಉಮಾಪತಿ ಅವರಿಗೆ ಸಲ್ಲಬೇಕು. ಅವರಿಬ್ಬರಿಗೂ ತಾನು ಅಭಿನಂದನೆಗಳನ್ನು ಸಲ್ಲಿಸುವುದಾಗಿ ರಾಮ್ ಹೇಳಿದರು.

‘ಮದಗಜ’ ಸಿನಿಮಾಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಮಾಸ್ ಹೀರೋ ಅನಿಸಿಕೊಂಡು ಬಿಟ್ಟಿರುವ ಮುರಳಿ ಅಭಿನಯದ ಸಿನಿಮಾಗಳು ಒಂದು ಬಗೆಯ ವೈಶಿಷ್ಟ್ಯತೆಯನ್ನು ಹೊಂದಿರುತ್ತವೆ. ಆದರೆ, ಟಿವಿ9 ಡಿಜಿಟಲ್ ವರದಿಗಾರ್ತಿ ಮಂಜುಳ ಅವರಿಗೆ ಶನಿವಾರ ಥೇಟರ್ ಬಳಿ ಮಾತಿಗೆ ಸಿಕ್ಕಿದ್ದು ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ‘ಕೆಜಿಎಫ್’ ಚಿತ್ರದಲ್ಲಿ ಖಳನಟನಾಗಿ ಮಿಂಚಿ ಈಗ ಮನೆ ಮಾತಾಗಿರುವ ಗರುಡ ರಾಮ್ ಅವರು. ‘ಮದಗಜ’ ಚಿತ್ರದಲ್ಲೂ ರಾಮ್ ಅವರಿಗೆ ವಿಭಿನ್ನ ಗೆಟಪ್ ನೀಡಲಾಗಿದೆ. ಅವರೇ ಹೇಳುವಂತೆ ಜನ ಅದನ್ನು ಇಷ್ಟಪಟ್ಟಿದ್ದಾರೆ ಮತ್ತು ಅವರಿಗೂ ಬಹಳ ಸಂತೋಷವಾಗಿದೆ. ಆಡಿಯನ್ಸ್ ನಡುವೆ ಕೂತು ಸಿನಿಮಾ ನೋಡುವುದು ಮತ್ತು ಅವರಿಂದ ಭೇಷ್ ಅನಿಸಿಕೊಳ್ಳುವುದು ಬಹಳ ಸಂತೋಷವನ್ನುಂಟು ಮಾಡುತ್ತದೆ ಅಂತ ರಾಮ್ ಹೇಳಿದರು.

‘ಮದಗಜ’ ಚಿತ್ರದಲ್ಲಿ ತಮ್ಮ ಲುಕ್ಸ್ ಮತ್ತು ಕಾಸ್ಟ್ಯೂಮ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ, ಅದರ ಶ್ರೇಯಸ್ಸು ಸಂಪೂರ್ಣವಾಗಿ ಚಿತ್ರದ ನಿರ್ದೇಶಕ ಮಹೇಶ್ ಮತ್ತು ನಿರ್ಮಾಪಕ ಉಮಾಪತಿ ಅವರಿಗೆ ಸಲ್ಲಬೇಕು. ಅವರಿಬ್ಬರಿಗೂ ತಾನು ಅಭಿನಂದನೆಗಳನ್ನು ಸಲ್ಲಿಸುವುದಾಗಿ ರಾಮ್ ಹೇಳಿದರು.

ಈ ಸಿನಿಮಾನಲ್ಲಿ ನಟಿಸಿರುವ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಅವರ ಜೊತೆ ಕೆಲಸ ಮಾಡಿದ್ದು ಬಹಳ ಸಂತೋಷ ಮತ್ತು ತೃಪ್ತಿ ನೀಡಿದೆ ಎಂದು ಗರುಡ ರಾಮ್ ಹೇಳಿದರು. ಜಗಪತಿ ಬಾಬು ಅಷ್ಟು ದೊಡ್ಡ ನಟರಾದರೂ ಬಹಳ ಸರಳ ವ್ಯಕ್ತಿ ಮತ್ತು ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಡೌನ್ ಟು ಅರ್ಥ್ ಸ್ಭಭಾವದವರು. ಸಿನಿಮಾ ಕ್ಷೇತ್ರದಲ್ಲಿ ಒಬ್ಬ ಲೆಜೆಂಡ್ ಆಗಿದ್ದರೂ ತಮ್ಮೊಂದಿಗೆ ‘ಕೆಜಿಎಫ್’ ಚಿತ್ರದಲ್ಲಿ ನಟಿಸುವಾಗ ಆಧ ಅನುಭವಗಳ ಬಗ್ಗೆ ವಿಚಾರಿಸಿದರು ಎಂದು ರಾಮ್ ಹೇಳಿದರು.

‘ಕೆಜಿಎಫ್’ ಚಿತ್ರದಲ್ಲಿನ ನಟನೆಗೆ ಮೆಚ್ಚುಗೆ ವ್ಯಕ್ತವಾದ ನಂತರ ಜನರ ನಿರೀಕ್ಷೆಯೂ ಹೆಚ್ಚಾಗಿದ್ದು ತನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಬಂದಿದೆ ಎಂದು ರಾಮ್ ಹೇಳಿದರು. ಅಭಿಮಾನಿಗಳ ನಿರೀಕ್ಷೆ ಹುಸಿಹೋಗಬಾರದು ಮತ್ತು ಅವರು ನಿರಾಶರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತನ್ನ ಮೇಲಿದೆ ಅಂತ ಅವರು ಹೇಳಿದರು

ಅಂತಿಮವಾಗಿ ಅವರು ಚಿತ್ರದಲ್ಲಿ ಮುರಳಿ ಅವರ ಫೈಟ್ಸ್ ಮತ್ತು ಮದರ್ ಸೆಂಟಿಮೆಂಟ್ಸ್ ಬಹಳ ಚೆನ್ನಾಗಿ ಮೂಡಿಬಂದಿವೆ, ಕನ್ನಡಿಗರೆಲ್ಲ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಬೇಕೆಂದು ವಿನಂತಿಸಿಕೊಂಡರು.

ಇದನ್ನೂ ಓದಿ:  Viral Video: ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು; ವೈರಲ್ ಆದ ಈ ವಿಡಿಯೋ ನೋಡಿ