ಮುಖ್ಯಮಂತ್ರಿ ಸ್ಪಷ್ಟನೆ ನೀಡಿದರೂ ರೈತರಿಗೆ ನೀಡಿದ ನೋಟೀಸ್​ಗಳ ಬಗ್ಗೆ ಯಾಕೆ ಗೊಂದಲ? ಲಕ್ಷ್ಮಿ ಹೆಬ್ಬಾಳ್ಕರ್

|

Updated on: Nov 01, 2024 | 5:48 PM

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹರಿಹಾಯ್ದ ಲಕ್ಷ್ಮಿ ಹೆಬ್ಬಾಳ್ಕರ್, ಅವರಿಗೆ ಹಿಂದೂ-ಮುಸ್ಲಿಂ ರಾಜಕಾರಣ ಬಿಟ್ಟರೆ ಬೇರೇನೂ ಗೊತ್ತಿಲ್ಲ ಆದರೆ ಕಾಂಗ್ರೆಸ್ ಮಹಾತ್ಮಾ ಗಾಂಧಿ, ಡಾ ಬಿಅರ್ ಅಂಬೇಡ್ಕರ್ ಅವರು ನೀಡಿದ ಸರ್ವಧರ್ಮ, ಸಮಬಾಳು, ಸಮಪಾಲು ತತ್ವವನ್ನು ಅನಸರಿಸಿಕೊಂಡು ಬಂದಿದೆ ಎಂದರು.

ಉಡುಪಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಮೀನುಗಳ ಅತಿಕ್ರಮಣವಾಗಿದ್ದರೆ ರೈತರಿಗೆ ಕಂದಾಯ ಇಲಾಖೆ ನೋಟೀಸ್​ಗಳನ್ನು ನೀಡೋದು ನಿರಂತರವಾಗಿ ನಡೆದುಕೊಂಡು ಬಂದಿರುವ ಪ್ರಕ್ರಿಯೆ, ಆದರೆ ರೈತರಿಂದ ಒಂದು ಇಂಚು ಜಮೀನನ್ನೂ ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ, ಎಂಬಿ ಪಾಟೀಲ್ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ, ಈ ಬಗ್ಗೆ ಗೊಂದಲ ಸೃಷ್ಟಿಸುವುದು ಬೇಡ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ವಿರೋಧಿ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್