ಬೆಂಗಳೂರು: ಗಾಳಿ-ಮಳೆಯಿರಲಿ, ಕೊರೆಯುವ ಚಳಿಯಿರಲಿ; ಜನರಿಗೆ ಕೆಲಸಕ್ಕೆ ಹೋಗುವುದು ಮಾತ್ರ ತಪ್ಪದು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 12, 2022 | 2:12 PM

ಕೊಡೆಗಳನ್ನು ಹಿಡಿದು, ಜರ್ಕಿನ್ ಮತ್ತು ಪುಲ್ ಓವರ್ ಗಳನ್ನು ತೊಟ್ಟು ಜನ ಕೆಲಸಗಳಿಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಬೆಂಗಳೂರು:  ತಮಿಳುನಾಡು ತೀರಕ್ಕೆ ಅಪ್ಪಳಿಸಿರುವ ಮಾಂಡೂಸ್ ಚಂಡಮಾರುತ (Mandous Cyclone) ಕರ್ನಾಟಕದ ಹಲವಾರು ಭಾಗಗಳ ಮೇಲೂ ತನ್ನ ಪ್ರಭಾವ ಬೀರಿದೆ. ಬೆಂಗಳೂರು ಮಹಾನಗರದಲ್ಲಿ (Bengaluru City) 3-4 ದಿನಗಳಿಂದ ಮೋಡ ಕವಿದ ವಾತಾವರಣ (overcast) ಮತ್ತು ಒಂದೇ ಸಮ ಮಳೆಯಾಗುತ್ತಿದೆ. ಹಾಗಂತ ಕೆಲಸಕ್ಕೆ ಹೋಗುವವರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರು ಮನೆಯಲ್ಲಿ ಕೂರೋದಿಕ್ಕಾಗುತ್ತಾ? ಕೊಡೆಗಳನ್ನು ಹಿಡಿದು, ಜರ್ಕಿನ್ ಮತ್ತು ಪುಲ್ ಓವರ್ ಗಳನ್ನು ತೊಟ್ಟು ಜನ ಕೆಲಸಗಳಿಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ