ನಿಮ್ಮಲ್ಲಿ 5 ಪೈಸೆ ನಾಣ್ಯವಿದ್ದರೆ ಆಂಧ್ರ ಪ್ರದೇಶದ ಚಿತ್ತೂರಿಗೆ ಹೋಗಿ ಒಂದು ಪ್ಲೇಟ್ ಬಿರಿಯಾನಿ ತಿನ್ನಬಹುದು!
ಚಿತ್ತೂರಿನ ಜನ ಮನೆಗಳಲ್ಲಿದ್ದ ಹಳೆ ಡಬ್ಬ, ಪೆಟ್ಟಿಗೆಗಳನ್ನು ತಡಕಾಡಿ 5 ಪೈಸೆ ನಾಣ್ಯಗಳನ್ನು ಹೆಕ್ಕಿ ಅವುಗಳನ್ನು ಹೋಟೆಲ್ ಮಾಲೀಕನಿಗೆ ಕೊಟ್ಟು ಹೊಟ್ಟೆ ತುಂಬ ಬಿರಿಯಾನಿ ತಿಂದಿದ್ದಾರೆ.
ಚಿತ್ತೂರು, ಆಂಧ್ರ ಪ್ರದೇಶ: ಐದು ಪೈಸೆ ನಾಣ್ಯವನ್ನು (coin) ಹಳೆ ಜಮಾನದ ಜನ ಮಾತ್ರ ನೋಡಿರುತ್ತಾರೆ. ಈಗಿನ ಪೀಳಿಗೆಯವರಿಗೆ ಐದು-ಹತ್ತು-ಇಪ್ಪತ್ತು-ನಾಲ್ಕಾಣೆ ಪೈಸೆ ಮುಖಬೆಲೆಯ (face value) ನಾಣ್ಯಗಳು ಅಸ್ತಿತ್ವದಲ್ಲಿದ್ದವೆಂಬ ಸಂಗತಿಯೂ ಗೊತ್ತಿರಲಾರದು. ಒಂದು-ಎರಡು-ಮೂರು-ಐದು ಪೈಸೆ ಮುಖಬೆಲೆಯ ನಾಣ್ಯಗಳು ಮಾಯವಾಗಿ ಬಹಳ ಸಮಯವಾಯಿತು. ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ (Chittoor) ಒಬ್ಬ ವ್ಯಕ್ತಿ ಬಿರಿಯಾನಿ ಹೋಟೆಲ್ ಆರಂಭಿಸಿ ಅದರ ಉದ್ಘಾಟನೆ ದಿನದಂದು 5 ಪೈಸೆ ನಾಣ್ಯ ತಂದವರಿಗೆ ಉಚಿತವಾಗಿ ಬಿರಿಯಾನಿ ಹಂಚಿದ್ದಾರೆ. ಚಿತ್ತೂರಿನ ಜನ ಮನೆಗಳಲ್ಲಿದ್ದ ಹಳೆ ಡಬ್ಬ, ಪೆಟ್ಟಿಗೆಗಳನ್ನು ತಡಕಾಡಿ 5 ಪೈಸೆ ನಾಣ್ಯಗಳನ್ನು ಹೆಕ್ಕಿ ಅವುಗಳನ್ನು ಹೋಟೆಲ್ ಮಾಲೀಕನಿಗೆ ಕೊಟ್ಟು ಹೊಟ್ಟೆ ತುಂಬ ಬಿರಿಯಾನಿ ತಿಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos