ರಾಜ್ಯದಲ್ಲಿ ತೀವ್ರ ಸ್ವರೂಪದ ನೀರಿನ ಅಭಾವವಿದ್ದರೂ ತಮಿಳುನಾಡಿಗೆ ಕಾವೇರಿ ನದಿನೀರು ಹರಿಬಿಡುತ್ತಿರುವ ರಾಜ್ಯ ಸರ್ಕಾರ

|

Updated on: Aug 17, 2023 | 12:26 PM

ಲಭ್ಯವಿರುವ ಮಾಹಿತಿ ಪ್ರಕಾರ ಕೃಷ್ಣರಾಜ ಸಾಗರ ಡ್ಯಾಂನಿಂದ 12,781 ಕ್ಯೂಸೆಕ್ಸ್ ನೀರನ್ಮು ಕಾವೇರಿ ನದಿಗೆ ಬಿಡುಗಡೆ ಮಾಡಿ ಅದನ್ನು ತಮಿಳುನಾಡಿಗೆ ಹರಿಸಲಾಗಿದೆ. ಕೆಅರ್ ಅಸ್ ಜಲಾಶಯಯದ ಗರಿಷ್ಟ ಮಟ್ಟ 124.80 ಅಡಿ, ಇವತ್ತು ಅದರಲ್ಲಿ 110.04 ಅಡಿಗಳಷ್ಟು ಮಾತ್ರ ನೀರಿದೆ.

ಮಂಡ್ಯ: ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ, ಕಾವೇರಿ ಜಲವಿವಾದ (Cauvery water dispute) ವಿಷಯಕ್ಕೆ ಬಂದರೆ ವಿಫಲಗೊಂಡು ರಾಜ್ಯದ ಜನತೆ ಅದರಲ್ಲೂ ವಿಶೇಷವಾಗಿ ರೈತ ಅಶೋತ್ತರಗಳಿಗೆ ಎಳ್ಳು-ನೀರು ಬಿಡುತ್ತವೆ. ಪಕ್ಕದ ರಾಜ್ಯ ತಮಿಳುನಾಡು (Tamil Nadu) ಕೇಂದ್ರ ಸರ್ಕಾರದ (Central Government) ಮೇಲೆ ಒತ್ತಡ ಹೇರಿ ತನಗೆ ಬೇಕಾಗುವಷ್ಟು ಕಾವೇರಿ ನದಿ ನೀರನ್ನು ಪಡೆದುಕೊಳ್ಳುತ್ತದೆ. ಈ ಬಾರಿ ಮಳೆಯ ಅಭಾವದಿಂದ ನದಿಯಲ್ಲಿ ನೀರು ಬಹಳ ಕಮ್ಮಿಯಿದೆ. ಆದರೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡಲು ಕೆಆರ್ ಎಸ್ ಜಲಾಶಯದಿಂದ (KRS Reservoir) ಕಾವೇರಿ ನದಿಗೆ ನೀರು ಹರಿಸಿದೆ. ಲಭ್ಯವಿರುವ ಮಾಹಿತಿ ಪ್ರಕಾರ ಕೃಷ್ಣರಾಜ ಸಾಗರ ಡ್ಯಾಂನಿಂದ 12,781 ಕ್ಯೂಸೆಕ್ಸ್ ನೀರನ್ಮು ಕಾವೇರಿ ನದಿಗೆ ಬಿಡುಗಡೆ ಮಾಡಿ ಅದನ್ನು ತಮಿಳುನಾಡಿಗೆ ಹರಿಸಲಾಗಿದೆ. ಕೆಅರ್ ಅಸ್ ಜಲಾಶಯಯದ ಗರಿಷ್ಟ ಮಟ್ಟ 124.80 ಅಡಿ, ಇವತ್ತು ಅದರಲ್ಲಿ 110.04 ಅಡಿಗಳಷ್ಟು ಮಾತ್ರ ನೀರಿದೆ. ಪುನಃ ಮಳೆಯಾಗದಿದ್ದರೆ ರಾಜ್ಯದ ಜನತೆ ತೀವ್ರ ಸಮಸ್ಯೆ ಅನುಭವಿಸಬೇಕಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ