ಕರ್ನಾಟಕ-ತಮಿಳುನಾಡು ಮಧ್ಯೆ ಜಲವಿವಾದಕ್ಕೆ ಅವಕಾಶ ನೀಡದ ವರುಣ: ನಿಗದಿಕ್ಕಿಂತ ನಾಲ್ಕೂವರೆ ಪಟ್ಟು ಹರಿದ ಕಾವೇರಿ ನೀರು
ಮೇಕೆದಾಟು ಯೋಜನೆಗೆ ಅತ್ತ ತಮಿಳುನಾಡು ಸರ್ಕಾರ ತಕರಾರು ತೆಗೆಯುತ್ತಲೇ ಇದೆ. ಆದ್ರೆ, ಇತ್ತ ಕಾವೇರಿಯಿಂದ ತಮಿಳುನಾಡಿಗೆ ಬಿಡಬೇಕಾದ ನೀರು ನಿಗದಿಗಿಂತ ಹೆಚ್ಚು ಹರಿದು ಹೋಗಿದೆ.
ಚಾಮರಾಜನಗರ: ಕಾವೇರಿ ನದಿ ನೀರಿನ (Cauvery Water) ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಹಾಗೂ ಕರ್ನಾಟಕ(Karnataka And Tamil Nadu) ನಡುವೆ ಪದೇ ಪದೆ ಕಚ್ಚಾಟ, ಕಿರಿಕ್ ನಡೆಯುತ್ತಿರುತ್ತೆ. ಈ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ವಾದ-ವಿವಾದಗಳು ಸಹ ನಡೆದಿದೆ. ಆದ್ರೆ, ಈ ವರ್ಷ ವರುಣ ಉಭಯ ರಾಜ್ಯಗಳ ನಡುವೆ ಜಲವಿವಾದಕ್ಕೆ ಅವಕಾಶ ನೀಡಿಲ್ಲ.
ಹೌದು… ಕಳೆದ ಹಲವು ದಿನಗಳಿಂದ ಕರ್ನಾಟಕದಲ್ಲಿ (karnataka) ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕೆರೆ-ಹಳ್ಳ ನದಿಗಳು ಉಕ್ಕಿಹರಿಯುತ್ತಿವೆ. ಅದರಲ್ಲೂ ಕಾವೇರಿ ಕಣಿವೆಯಲ್ಲಿ ಭರ್ಜರಿ ಮಳೆಯಾದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನಿಗಧಿತ ಪ್ರಮಾಣಕ್ಕಿಂತ ನಾಲ್ಕುವರೆ ಪಟ್ಟು ಅಧಿಕ ನೀರು ಬಿಡುಗಡೆ ಮಾಡಲಾಗಿದೆ.
Bengaluru Rains: ಬೆಂಗಳೂರಿನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಬೈಕ್ಗಳು, ಇನ್ನೂ ಮೂರು ದಿನಕ್ಕೆ ಯೆಲ್ಲೊ ಅಲರ್ಟ್
ಸುಪ್ರೀಂ ಕೋರ್ಟ್ (supreme court) ಆದೇಶದ ಪ್ರಕಾರ ಪ್ರಸಕ್ತ ಜಲವರ್ಷದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ 101 ಟಿಎಂಸಿ ಬಿಡುಗಡೆ ಮಾಡಬೇಕಿತ್ತು. ಆದರೆ ಈ ಅವಧಿಯಲ್ಲಿ 452.5 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. 1974ರ ನಂತರ ಇದೇ ಮೊದಲ ಬಾರಿಗೆ ಅತ್ಯಧಿಕ ಪ್ರಮಾಣದಲ್ಲಿ ತಮಿಳುನಾಡಿಗೆ ಹರಿದ ನೀರು ಹರಿದಿದೆ.
ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ನೀರಿನ ಪ್ರಮಾಣ ದಾಖಲಾಗಿದ್ದು, ಜೂನ್ 16.46 ಟಿಎಂಸಿ, ಜುಲೈ 106.93, ಆಗಸ್ಟ್ 223.57 ಹಾಗು ಸೆಪ್ಟೆಂಬರ್ 105.52 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದಲು ತಮಿಳುನಾಡಿಗೆ ನಿಗಧಿಗಿಂತ ಅಧಿಕ ಪ್ರಮಾಣದ ನೀರು ಹರಿದು ಹೋಗುತ್ತಿದೆ. 2018-19 ರ ಜಲವರ್ಷದಲ್ಲಿ ನಿಗಧಿತ ಪ್ರಮಾಣಕ್ಕಿಂತ 228 ಟಿಎಂಸಿ, 2019-20ರಲ್ಲಿ 97 ಟಿಎಂಸಿ, 2020-21ರಲ್ಲಿ 34 ಟಿಎಂಸಿ, 2021-22 ರಲ್ಲಿ 103 ಟಿಎಂಸಿ ಅಧಿಕ ನೀರು ಹರಿದಿದೆ.
ಮೆಟ್ಟೂರು ಜಲಾಶಯದಿಂದಲು ನದಿ ಮೂಲಕ ವ್ಯರ್ಥ ವಾಗಿ ಸಮುದ್ರ ಸೇರುತ್ತಿದೆ. ಹೆಚ್ಚುವರಿ ನೀರನ್ನು ಸಂಗ್ರಹಿಸಲು ಮೇಕೆದಾಟು ಯೋಜನೆ ಸಹಕಾರಿಯಾಗಿದ್ದು, ಮೇಕೆದಾಟು ಯೋಜನೆ ಜಾರಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.
Published On - 4:36 pm, Thu, 20 October 22