Bengaluru Power Cut: ಬೆಂಗಳೂರಿನ ಶಿವಾಜಿನಗರ, ವೈಟ್​ಫೀಲ್ಡ್​ ಸೇರಿ ಹಲವೆಡೆ ಇಂದು ಸಂಜೆಯವರೆಗೆ ಪವರ್ ಕಟ್

Bangalore News: ಇಂದು (ಅ. 21) ಬೆಂಗಳೂರಿನ ವೈಟ್‌ಫೀಲ್ಡ್, ಶಿವಾಜಿನಗರ ವಿಭಾಗ ಮತ್ತು ರಾಮನಗರ, ತಿಪಟೂರು ವಿಭಾಗಗಳಲ್ಲಿ ಪವರ್ ಕಟ್ ಇರಲಿದೆ.

Bengaluru Power Cut: ಬೆಂಗಳೂರಿನ ಶಿವಾಜಿನಗರ, ವೈಟ್​ಫೀಲ್ಡ್​ ಸೇರಿ ಹಲವೆಡೆ ಇಂದು ಸಂಜೆಯವರೆಗೆ ಪವರ್ ಕಟ್
ಪವರ್ ಕಟ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 21, 2022 | 6:49 AM

ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಮತ್ತು ನಾಳೆ ಪವರ್ ಕಟ್ (Power Cut in Bangalore) ಇರಲಿದೆ. ಬೆಂಗಳೂರಿನ ವಿದ್ಯುಚ್ಛಕ್ತಿ ಮಂಡಳಿ, ಬೆಸ್ಕಾಂ (BESCOM) ಮತ್ತು ಕೆಪಿಟಿಸಿಎಲ್ (KPTCL) ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಿರುವುದರಿಂದ ಇಂದು (ಶುಕ್ರವಾರ) ಮತ್ತು ನಾಳೆ (ಶನಿವಾರ) ಸಿಲಿಕಾನ್ ಸಿಟಿಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನಲ್ಲಿ ಪವರ್ ಕಟ್ ಇರಲಿದೆ.

ಇಂದು (ಅ. 21) ರಾಮನಗರ, ವೈಟ್‌ಫೀಲ್ಡ್, ಶಿವಾಜಿನಗರ ವಿಭಾಗ ಮತ್ತು ತಿಪಟೂರು ವಿಭಾಗಗಳಲ್ಲಿ ಪವರ್ ಕಟ್ ಇರಲಿದೆ. ಕೆಐಎಡಿಬಿ 1ನೇ ಹಂತದ ಕೈಗಾರಿಕಾ ಪ್ರದೇಶ, ಬಿಲ್ಲೆಕೆಂಪನಹಳ್ಳಿ, ಮಾರುತಿನಗರ, ಬೀಮೇನಹಳ್ಳಿ, ನಿಂಗಯ್ಯನದೊಡ್ಡಿ, ರಂಗೇಗೌಡನದೊಡ್ಡಿ, ಲಕ್ಷ್ಮೀಸಾಗರ, ಬೇವೂರ್‌ನ 66/11 ಕೆವಿ ಲೈನ್‌ಗಳು, ಸೋಲಾರ್ ಪವರ್ ಪ್ಲಾಂಟ್, ದಶಾವರ, ಸಂಕಲಗೆರೆ, ಸೌರವಿದ್ಯುತ್ ಸ್ಥಾವರ, ಹೆಣ್ಣೂರು ಬಂಡೆ, ಸಾಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರೈಸ್ಟ್ ಜಯಂತಿ ಕಾಲೇಜು, ಬಿಲಿಶಿವಾಲೆ, ಆಶಾ ಟೌನ್‌ಶಿಪ್, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್, ಕೆ ನಾರಾಯಣಪುರ ಕ್ರಾಸ್, ಕೊತ್ತನೂರು, ಬೈರತಿ ಕ್ರಾಸ್, ಆಂದ್ರ ಕಾಲೋನಿ, ಮಂಜುನಾಥ ನಗರ, ಹೊರಮಾವು, ಅಗರ ಗ್ರಾಮ, ದೇವನಾಯಕನಹಳ್ಳಿ, ಅತ್ತಿಗೆರೆ ಮುಂತಾದೆಡೆ ಕರೆಂಟ್ ಇರುವುದಿಲ್ಲ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು, ನಾಳೆ ಪವರ್ ಕಟ್

ನಾಳೆ (ಅಕ್ಟೋಬರ್ 22) ರಾಮನಗರ, ಮಲ್ಲೇಶ್ವರಂ, ಹೆಬ್ಬಾಳ, ಜಾಲಹಳ್ಳಿ ಮತ್ತು ಚಂದಾಪುರದಲ್ಲಿ ಪವರ್ ಕಟ್ ಇರಲಿದೆ. ಕೆಐಎಡಿಬಿ 1ನೇ ಹಂತದ ಕೈಗಾರಿಕಾ ಪ್ರದೇಶ, ಆರ್ ಟಿ ನಗರ, ಗಂಗಾ ನಗರ, ಚೋಳನಗರ, ಹೊರ ವರ್ತುಲ ರಸ್ತೆ, ಕರಿಯಪ್ಪ ಲೇಔಟ್, ಆಶಾರಾಮ್ ರಸ್ತೆ, 1ನೇ ಬ್ಲಾಕ್ ಆನಂದ ನಗರ, ಗುಡಪ್ಪ ರೆಡ್ಡಿ ಲೇಔಟ್, ಹೆಬ್ಬಾಳ, ಜಯಮಹಲ್ 1ನೇ ಬ್ಲಾಕ್ ನಂದಿದುರ್ಗ, ಮಾರಪ್ಪ ಗಾರ್ಡನ್, ಜೆಸಿ ನಗರ, ಮಿಲ್ಲರ್ಸ್ ರಸ್ತೆ, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ನಾಗಶೆಟ್ಟಿಹಳ್ಳಿ, ನ್ಯೂ ಬೆಲ್ ರಸ್ತೆ, ದೇವಿನಗರ, ಎಂಎಸ್ ಆರ್ ಇಂಡಸ್ಟ್ರಿಯಲ್ ಎಸ್ಟೇಟ್, ಸಂಜಯನಗರ, ಚಿಕ್ಕಮಾರನಹಳ್ಳಿ, ಹಳೇ ಚಂದಾಪುರ, ನೇರಲೂರು, ಕೀರ್ತಿ ಲೇಔಟ್, ಮುತ್ತಾನಲ್ಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ