Bangalore: ಹೈಗ್ರೌಂಡ್ಸ್ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ದೂರು ದಾಖಲು
ಕೊರ್ಟ್ ತಡೆಯಾಜ್ಞೆ ಆದೇಶ ಇರುವ ಪ್ರಕರಣದಲ್ಲಿ ತೊಂದರೆ ಮಧ್ಯಪ್ರವೇಶಿಸಿ ತೊಂದರೆ ನೀಡುತ್ತಿರುವ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರು: ಆಸ್ತಿ ವಿಚಾರ ಪ್ರಕರಣಕ್ಕೆ ಕೊರ್ಟ್ ತಡೆಯಾಜ್ಞೆ ಆದೇಶ ಇದ್ದಾಗಲೂ ಪ್ರಕರಣದಲ್ಲಿ ತೊಂದರೆ ನೀಡುತ್ತಿರುವುದಾಗಿ ಆರೋಪಿಸಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಇನ್ಸ್ಪೆಕ್ಟರ್ ಶಿವಸ್ವಾಮಿ ವಿರುದ್ಧ ವಕೀಲ ಸಮದ್ ಖಾನ್ ಎಂಬವರು ಹೈಕೋರ್ಟ್ ಸಿಜೆ ಮತ್ತು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದಾರೆ. ಆಸ್ತಿ ವಿಚಾರ ಪ್ರಕರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಅದಾಗ್ಯೂ ಮೇರಿ ಎಲೆಜಬೆತ್ರನ್ನ ಸಂಜೆ ಮಹಿಳಾ ಸಿಬ್ಬಂದಿ ಇಲ್ಲದೆ ಅಕ್ರಮವಾಗಿ ಬಂಧಿಸಿ ಠಾಣೆಗೆ ಕರೆತಂದಿರುವ ಆರೋಪ ಮಾಡಲಾಗಿದ್ದು, ಪೊಲೀಸರ ನಡೆ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಮೇರಿ ಎಲೆಜಬೆತ್ ಎಂಬುವವರ ಆಸ್ತಿ ವಿಚಾರ ಕೋರ್ಟ್ನಲ್ಲಿದೆ. ಈ ಪ್ರಕರಣಕ್ಕೆ ಕೋರ್ಟ್ ತಡೆಯಾಜ್ಞೆಯೂ ನೀಡಿದೆ. ಅದಾಗ್ಯೂ ಯಾವುದೇ ದೂರು ದಾಖಲಾಗಿಲ್ಲವಾದರೂ ಮೇರಿ ಎಲೆಜಬೆತ್ ಅವರನ್ನ ಯಾವುದೇ ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದೆಯೇ ಸಂಜೆ ವೇಳೆ ಬಂಧಿಸಿ ಠಾಣೆಗೆ ಕರೆತಂದಿರುವ ಆರೋಪ ಇನ್ಸ್ಪೆಕ್ಟರ್ ಶಿವಸ್ವಾಮಿ ವಿರುದ್ಧ ಮಾಡಲಾಗಿದೆ. ಕೋರ್ಟ್ನಿಂದ ತಡೆಯಾಜ್ಞೆ ಇರುವ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಜಮೀನು ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರಿಂಕೊರ್ಟ್ ಗೈಡ್ ಲೈನ್ಸ್ ಇದ್ದರೂ ಪೊಲೀಸರು ಮಧ್ಯಪ್ರವೇಶ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಕೆ.ಆರ್.ಪುರಂ ಠಾಣೆ ಇನ್ಸ್ಪೆಕ್ಟರ್ ಸಸ್ಪೆಂಡ್
ಬೆಂಗಳೂರು: ಕರ್ತವ್ಯ ಲೋಪದಡಿ ನಗರದ ಕೆ.ಆರ್.ಪುರ ಠಾಣೆ ಇನ್ಸ್ಪೆಕ್ಟರ್ ನಂದೀಶ್ ಅವರನ್ನು ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅದೇಶ ಹೊರಡಿಸಿದ್ದಾರೆ. ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ಅವಧಿ ಮೀರಿ ನಡೆಯುತ್ತಿದ್ದ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಪಬ್ನಲ್ಲಿ ಅವಧಿ ಮುಗಿದ ಬಳಿಕವೂ ಮದ್ಯ ಸರಬರಾಜು ಮಾಡಲಾಗುತ್ತಿದ್ದ ಹಿನ್ನೆಲೆ ಕರ್ತವ್ಯ ಲೋಪದಡಿ ಇನ್ಸ್ಪೆಕ್ಟರ್ ನಂದೀಶ್ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:12 am, Fri, 21 October 22