ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವ ಸರ್ಕಾರೀ ನೌಕರರ ಮನೆಗಳ ಮೇಲೆ ಲೋಕಾಯುಕ್ತ ದಾಳಿ, ಬೀದರ್ ಕಾನ್ ಸ್ಟೇಬಲ್ ಕೂಡ ಕುಬೇರ!
ಬೀದರ್ ನಗರದ ಒಬ್ಬ ಕಾನ್ಸ್ಟೇಬಲ್ ಕೂಡ ಆದಾಯಕ್ಕಿಂತ ಹೆಚ್ಚಿ ಆಸ್ತಿ ಸಂಪಾದಿಸಿದ್ದಾನೆ ಅಂದರೆ ನಂಬಿತ್ತೀರಾ? ದಾವಣಗೆರೆಯ ಹೊಳಲ್ಕೆರೆಯಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನೀಯರ್ ಆಗಿರುವ ಕೆ ಮಹೇಶ್ ಮತ್ತು ಬಿಬಿಎಂಪಿಯಲ್ಲಿ ಸಹಾಯಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿರುವ ಅವರ ಪತ್ನಿ ಹೆಚ್ ಭಾರತಿ ಮನೆ ಮೇಲೆ ದಾಳಿ ನಡೆದಿದೆ.
ಬೆಂಗಳೂರು/ಧಾರವಾಡ: ಆದಾಯಕ್ಕೂ ಮೀರಿದ ಮೀರಿದ ಸಂಪತ್ತಿನ (disproportionate Assets) ಒಡೆಯರಾಗಿರುವ ಕೆಲ ಆಧಿಕಾರಿಗಳ ಬೆನ್ನಹುರಿಯಲ್ಲಿ ನಡುಕ ಹುಟ್ಟಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು (Lokayukta Sleuths) ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿ ಅಕ್ರಮವಾಗಿ ಆಸ್ತಿ ಮಾಡಿಕೊಂಡಿರುವ ಸರ್ಕಾರೀ ನೌಕರರ ಆಸ್ತಿ ವಿವರ (property details) ಪಡೆಯುತ್ತಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ ಬೀದರ್, ಕೊಡಗು, ಚಿತ್ರದುರ್ಗ ಮತ್ತು ದಾವಣಗೆರೆ ಮೊದಲಾದ ಜಿಲ್ಲೆಗಳಲ್ಲಿ ದಾಳಿ ನಡೆದಿದೆ. ಬೀದರ್ ನಗರದ ಒಬ್ಬ ಕಾನ್ಸ್ಟೇಬಲ್ ಕೂಡ ಆದಾಯಕ್ಕಿಂತ ಹೆಚ್ಚಿ ಆಸ್ತಿ ಸಂಪಾದಿಸಿದ್ದಾನೆ ಅಂದರೆ ನಂಬಿತ್ತೀರಾ? ದಾವಣಗೆರೆಯ ಹೊಳಲ್ಕೆರೆಯಲ್ಲಿ ಸಣ್ಣ ನೀರಾವರಿ ಇಲಾಖೆ ಇಂಜಿನೀಯರ್ ಆಗಿರುವ ಕೆ ಮಹೇಶ್ ಮತ್ತು ಬಿಬಿಎಂಪಿಯಲ್ಲಿ ಸಹಾಯಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿರುವ ಅವರ ಪತ್ನಿ ಹೆಚ್ ಭಾರತಿ ಮನೆ ಮೇಲೆ ದಾಳಿ ನಡೆದಿದೆ. ಧಾರವಾಡದಲ್ಲಿ ಸುಜಾತಾ ಮತ್ತು ಸಂತೋಷ್ ಅನಿಶೆಟ್ಟರ್ ದಂಪತಿಗೆ ಸೇರಿದ ಮನೆ ನೋಡಿ. ಇಬ್ಬರಲ್ಲಿ ಯಾರು ಸರ್ಕಾರೀ ನೌಕರರು ಅಂತ ಗೊತ್ತಿಲ್ಲ, ಆದರೆ ಅರಮನೆಯಂಥ ಮನೆ ಕಟ್ಟಿಸಿಕೊಂಡಿದ್ದಾರೆ. ವಿವರಗಳನ್ನು ಎದುರು ನೋಡಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ