ರಸ್ತೆ ಬದಿಯ ಎಳನೀರು ಕದ್ದ ಖದೀಮರು ಅರೆಸ್ಟ್, ಸುಳಿವೇ ಇಲ್ಲದ ಕೇಸ್ ಅನ್ನು ಪೊಲೀಸರು ಬೇಧಿಸಿದ್ದೇ ರೋಚಕ

ರಸ್ತೆ ಬದಿಯ ಎಳನೀರು ಕದ್ದ ಖದೀಮರು ಅರೆಸ್ಟ್, ಸುಳಿವೇ ಇಲ್ಲದ ಕೇಸ್ ಅನ್ನು ಪೊಲೀಸರು ಬೇಧಿಸಿದ್ದೇ ರೋಚಕ

ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Aug 17, 2023 | 1:16 PM

ವಾಹನದ ನಂಬರ್ ಪ್ಲೇಟ್​ಗೆ ಮಸಿ ಬಳಿದು ಖದೀಮರು ಕ್ಯಾಂಟರ್​ನಲ್ಲಿ ಬಂದು 1500 ಎಳನೀರು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಘಟನೆ ಸಂಬಂಧ ಎಳನೀರು ಅಂಗಡಿ ಮಾಲೀಕ ಸಲೀಂ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು, ಆ.17: ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಖದೀಮರು ರಸ್ತೆ ಬದಿಯ ಎಳನೀರನ್ನೂ ಬಿಟ್ಟಿಲ್ಲ. ಆಗಸ್ಟ್ 7 ರಂದು ಮುಂಜಾನೆ ಜಯನಗರ ರಾಷ್ಟ್ರೀಯ ವಿದ್ಯಾಲಯ ಮೆಟ್ರೊ ನಿಲ್ದಾಣ ಬಳಿ ರಾತ್ರೋರಾತ್ರಿ ಟಾಟಾ ಏಸ್​ನಲ್ಲಿ ಬಂದು ಖದೀಮರು ಎಳನೀರು(Tender Coconut) ಕದ್ದು ಎಸ್ಕೇಪ್ ಆಗಿದ್ದರು. ಸದ್ಯ ಪೊಲೀಸರು(Jayanagar Police) ಕಳ್ಳರನ್ನು ಬಂಧಿಸಿದ್ದಾರೆ. ಗೌತಮ್, ರಘು, ಮಣಿಕಂಠ ಸೇರಿ ಮೂವರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಸುಳಿವೇ ಇಲ್ಲದ ಕೇಸ್ ಅನ್ನು ಪೊಲೀಸರು ಬೇಧಿಸಿದ್ದೇ ರೋಚಕ.

ವಾಹನದ ನಂಬರ್ ಪ್ಲೇಟ್​ಗೆ ಮಸಿ ಬಳಿದು ಖದೀಮರು ಕ್ಯಾಂಟರ್​ನಲ್ಲಿ ಬಂದು 1500 ಎಳನೀರು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಘಟನೆ ಸಂಬಂಧ ಎಳನೀರು ಅಂಗಡಿ ಮಾಲೀಕ ಸಲೀಂ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮೂವರ ಮೇಲೆ ಈ ಹಿಂದೆ ಕೂಡ ಹಲವಾರು ಕೇಸ್ ಗಳಿವೆ. ರಘು ಮೇಲೆ ಕೊಲೆಯತ್ನ ಪ್ರಕರಣ ಕೂಡ ದಾಖಲಾಗಿದೆ.

ಸುಳಿವೇ ಇಲ್ಲದ ಕೇಸ್ ಅನ್ನು ಪೊಲೀಸರು ಬೇಧಿಸಿದ್ದೇ ರೋಚಕ

ಘಟನಾ ಸ್ಥಳದಲ್ಲಿ ಆರೋಪಿಗಳ ಯಾವುದೇ ಸುಳಿವು ಇರಲಿಲ್ಲ. ಸಿಸಿಟಿವಿ ಬೆನ್ನು ಬಿದ್ದ ಪೊಲೀಸರಿಗೆ ಸಿಕ್ಕಿತ್ತು ಗೂಗಲ್ ಪೇ ಕ್ಲೂ. ಹೌದು ಟಾಟಾ ಏಸ್ ವಾಹನ ದಾರಿಯನ್ನೇ ಬೆನ್ನುಬಿದ್ದ ಪೊಲೀಸರು 60 ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದರು. ಖದೀಮರು ಮುಂಜಾನೆ ಉತ್ತರಹಳ್ಳಿ ಬಳಿ ಟೀ ಕುಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಟೀ ಕುಡಿದು ಗೂಗಲ್ ಪೇ ನಲ್ಲಿ ಹಣ ಪಾವತಿಸಿದ್ರು. ಅದೇ ಜಾಗದಲ್ಲಿ ಗೂಗಲ್‌ಪೇ ನಂಬರ್ ಪಡೆದುಕೊಂಡ ಪೊಲೀಸರು ಯಾವ ಬ್ಯಾಂಕ್ ಖಾತೆಯಿಂದ ಹಣ ಸಂದಾಯ ಆಗಿದೆ ಎಂದು ಪರಿಶೀಲನೆ ನಡೆದಿ ಅದೇ ಕ್ಲೂ ಆಧಾರದ ಮೇಲೆ‌ ಆರೋಪಿಗಳನ್ನು ಬಂಧಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ