ಹಾಸನದ ಅನ್ನಭಾಗ್ಯ ಸ್ಕೀಮ್ ಫಲಾನುಭವಿಗಳಿಗೆ 10 ಕೇಜಿ ಅಕ್ಕಿ ಸಿಗುತ್ತಿದೆ, ಕೆಲವೆಡೆ ಅಕ್ಕಿಯ ಕೊರತೆ
ಟಿವಿ9ನೊಂದಿಗೆ ಮಾತಾಡಿರುವ ಫಲಾನುಭವಿಗಳು ಹಣದ ಬದಲು ಅಕ್ಕಿ ನೀಡುವುದೇ ಬೆಟರ್ ಎಂದು ಹೇಳುತ್ತಾರೆ. ಅಕ್ಕಿಯ ಕೊರತೆ ಎದುರಾಗುತ್ತಿರುವ ಬಗ್ಗೆ ಒಬ್ಬ ಮಹಿಳೆಯ ಮಾತಿನಿಂದ ಖಚಿತವಾಗುತ್ತದೆ. ಅವರಿಗೆ 60ಕೇಜಿ ಅಕ್ಕಿ ಸಿಗಬೇಕಿತ್ತು ಅದರೆ ಮೊನ್ನೆ 50 ಕೇಜಿ ಮಾತ್ರ ಕೊಟ್ಟಿದ್ದಕ್ಕೆ ಉಳಿದ 10 ಕೇಜಿ ಅಕ್ಕಿ ಪಡೆಯಲು ಅವರು ಸಾಲಲ್ಲಿ ನಿಂತಿದ್ದಾರೆ.
ಹಾಸನ, ಮಾರ್ಚ್ 18: ಕಳೆದ ತಿಂಗಳು ಆಹಾರ ಮತ್ತು ನಾಗರಿಕಕ ಪೂರೈಕೆ ಖಾತೆ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಅನ್ನಭಾಗ್ಯ ಸ್ಕೀಮಿನಡಿ ಎಲ್ಲರಿಗೂ ಹತ್ತತ್ತು ಕೇಜಿ ಸಿಗುತ್ತದೆ, ಕೇಂದ್ರ ಸರ್ಕಾರ ಅಕ್ಕಿ ಕೊಡಲು ತಯಾರಾಗಿದೆ ಅಂತ ಹೇಳಿದ್ದರು. ವಾಸ್ತವದಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಹತ್ತು ಕೇಜಿ ಅಕ್ಕಿ ಸಿಗುತ್ತಿದೆಯಾ ಅಂತ ನಮ್ಮ ಹಾಸನ ವರದಿಗಾರ ರಿಯಾಲಿಟಿ ಚೆಕ್ ಮಾಡಿದ್ದಾರೆ. ಅವರೊಂದಿಗೆ ಮಾತಾಡಿರುವ ಫಲಾನುಭವಿಗಳು, ಹತ್ತತ್ತು ಕೇಜಿ ಅಕ್ಕಿ ಸಿಗುತ್ತಿದೆ, ಕಳೆದ ತಿಂಗಳಿನ 5 ಕೇಜಿ ಸೇರಿ ಮಾರ್ಚ್ನಲ್ಲಿ 15 ಕೇಜಿ ಅಕ್ಕಿ ಕೊಡುತ್ತಿದ್ದಾರೆ ಅಂತ ಹೇಳುತ್ತಾರೆ, ಅಂದರೆ ಕುಟುಂಬವೊಂದರಲ್ಲಿ 4 ಸದಸ್ಯರಿದ್ದರೆ 60 ಕೇಜಿ ಅಕ್ಕಿ ಸಿಗುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅನ್ನಭಾಗ್ಯ ಯೋಜನೆ: ಕಲಬುರಗಿ ಮಹಿಳೆ ಹೇಳುವುದನ್ನು ಕೇಳಿದರೆ ಸಚಿವ ಮುನಿಯಪ್ಪ ಹೇಳಿದ್ದು ಸುಳ್ಳು ಅನಿಸುತ್ತದೆ!