ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ಕೋಟ್ಯಾಂತರ ಭಾರತೀಯರ ಆಸೆಯಂತೆ ಹದಿಮೂರು ವರ್ಷಗಳ ಬಳಿಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿದೆ. ಅದರಂತೆ ಇಂದು(ಗುರುವಾರ) ತಾಯ್ನಾಡಿಗೆ ಆಗಮಿಸಿದ ಆಟಗಾರರಿಗೆ ವಿಜಯೋತ್ಸವದ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ರಾತ್ರಿ ಆದರೂ ಜನಸಾಗರ ಕಂಡು, ರೋಹಿತ್, ಕೊಹ್ಲಿ ಕೈ ಎತ್ತಿ ಮುಗಿದಿದ್ದಾರೆ.
ಮುಂಬೈ, ಜು.04: ಕೋಟ್ಯಾಂತರ ಭಾರತೀಯರ ಆಸೆಯಂತೆ ಹದಿಮೂರು ವರ್ಷಗಳ ಬಳಿಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿದೆ. ಅದರಂತೆ ಇಂದು(ಗುರುವಾರ) ತಾಯ್ನಾಡಿಗೆ ಆಗಮಿಸಿದ ಆಟಗಾರರನನ್ನು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಅಲ್ಲಿಂದ ಮುಂಬೈಗೆ ಆಗಮಿಸಿದ ಆಟಗಾರರನ್ನು ಏಪೋರ್ಟ್ನಲ್ಲಿಯೇ ಭರ್ಜರಿ ಸ್ವಾಗತ ಮಾಡಿ, ವಾಟರ್ ಸೆಲ್ಯೂಟ್ ಕೂಡ ಮಾಡಲಾಯಿತು. ಇದಾದ ಬಳಿಕ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 125 ಕೋಟಿ ರೂ. ನಗದು ಬಹುಮಾನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಇದ್ದು, ಆಟಗಾರರಿಗೆ ವಿಜಯೋತ್ಸವದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ರಾತ್ರಿ ಆದರೂ ಜನಸಾಗರ ಕಂಡು, ರೋಹಿತ್, ಕೊಹ್ಲಿ ಕೈ ಎತ್ತಿ ಮುಗಿದಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 04, 2024 10:04 PM