ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಮಳೆ, ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ

ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಮಳೆ, ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 04, 2024 | 8:43 PM

ಸ್ಥಳೀಯ ಮಹಿಳೆಯೊಬ್ಬರು ನಮ್ಮ ವರದಿಗಾನೊಂದಿಗೆ ಮಾತಾಡಿದ್ದು, ಪ್ರತಿ ಮಳೆಗಾಲದಲ್ಲಿ ಈ ಪ್ರದೇಶಗಳಲ್ಲಿ ಇಂಥ ಪರಿಸ್ಥಿತಿ ತಲೆದೋರುತ್ತಂತೆ. ಅದರೆ ಅಧಿಕಾರಿಗಳು ಕೂಡಲೇ ಜನರ ನೆರವಿಗೆ ಧಾವಿಸಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಅವರು ಹೇಳುತ್ತಾರೆ. ಸ್ಥಳೀಯ ಶಾಸಕ ಯಶ್ಪಾಲ್ ಸುವರ್ಣ ಸಹ ಪರಿಶೀಲನೆಗೆ ಬರುತ್ತಾರೆ ನೆರವು ಒದಗಿಸುತ್ತಾರೆ ಅಂತ ಮಹಿಳೆ ಹೇಳುತ್ತಾರೆ.

ಉಡುಪಿ: ಬಿಟ್ಟೆನೆಂದರೂ ಬಿಡದೀ ಮಾಯೆ, ಉಡುಪಿ ಜಿಲ್ಲೆಯಲ್ಲಿ ಮಳೆಯ ಅವಾಂತರ ಈ ಮಾತನ್ನು ನೆನಪಿಸುತ್ತದೆ. ನಮ್ಮ ಉಡುಪಿ ವರದಿಗಾರ ಬ್ರಹ್ಮಾವರ ತಾಲ್ಲುಕಿನ ಅರೂರು ಮತ್ತು ಬೆಳ್ಳಾರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಮುಳುಗಿ ಹೋಗಿರುವ ಸ್ಥಳದಲ್ಲಿ ನಿಂತು ಅಲ್ಲಿ ಮಳೆಯಿಂದ ಆಗಿರುವ ಅವಾಂತರದ ಚಿತ್ರಣ ನೀಡುತ್ತಿದ್ದಾರೆ. ಇಲ್ಲಿರುವ ಮಡಿಸಾಲು ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ಹರಿದು ಅವು ಜಲಾವೃತಗೊಂಡಿವೆ. ಬೈಂದೂರು ಮತ್ತು ಕುಂದಾಪುರ ತಾಲ್ಲೂಕುಗಳಲ್ಲಿ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಸದ್ಯಕ್ಕೆ ಮಳೆ ಸುರಿಯುವುದು ನಿಂತಿದೆ ಆದರೆ ಇನ್ನೂ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಗ್ಗುಪ್ರದೇಶಗಳಲ್ಲಿರುವ ಜನರನ್ನು ಮುಂಜಾಗ್ರತೆಯ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸ ಶುರುವಾಗಿದೆ ಎಂದು ವರದಿಗಾರ ಹೇಳುತ್ತಾರೆ. ಈ ಪ್ರದೇಶಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸುತ್ತಿರೋದು ಸಮಾಧಾನಕರ ಸಂಗತಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯದಲ್ಲಿ ಮಳೆಯಿಂದಾಗಿ ಭಾರೀ ಅವಾಂತರ; ಮನೆ, ಠಾಣೆಗಳಿಗೆ ನುಗ್ಗಿದ ನೀರು, ಜಲ ಮೂಲಗಳಿಗೆ ಜೀವ ಕಳೆ