ವಿಜಯೇಂದ್ರ ಮೃದು ಧೋರಣೆ ಪ್ರದರ್ಶಿಸುತ್ತಿದ್ದರೂ ಮತ್ತೊಮ್ಮೆ ಸಭೆ ಸೇರಿದ ಬಸನಗೌಡ ಯತ್ನಾಳ್ ತಂಡ
ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾದಾಗಿನಿಂದ ಬಸನಗೌಡ ಯತ್ನಾಳ್ ಎಡೆಬಿಡದೆ ಟೀಕಿಸುತ್ತಿರುವುದು ಎಲ್ಲರಿಗೂ ಗೊತ್ತು, ವಿಜಯಪುರ ಶಾಸಕನ ಬಗ್ಗೆ ಕೇಳಿದ ಪ್ರಶ್ನೆಗೆ ವಿಜಯೇಂದ್ರ ಅಸಡ್ಡೆಯಿಂದ ಉತ್ತರಿಸುತ್ತಿದ್ದಿದ್ದೂ ಕನ್ನಡಿಗರಿಗೆ ಗೊತ್ತು. ಆದರೆ ಕಳೆದ ವಾರ ದೆಹಲಿಯಿಂದ ವಾಪಸ್ಸು ಬಂದ ಮೇಲೆ ಯತ್ನಾಳ್ ವಿಷಯದಲ್ಲಿ ವಿಜಯೇಂದ್ರ ಬಹಳ ಸಾಫ್ಟ್ ಆಗಿ ಮಾತಾಡುತ್ತಿದ್ದಾರೆ. ಅತ್ತ ಯತ್ನಾಳ್ ತಮಗೆ ಶಿಸ್ತು ಸಮಿತಿ ನೀಡಿದ ನೋಟೀಸ್ಗೆ ಉತ್ತರ ನೀಡಿದ್ದಾರೆ.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇವತ್ತು ಸುದ್ದಿಗೋಷ್ಠಿಯೊಂದನ್ನು ನಡೆಸಿ ಬಹಳಷ್ಟು ವಿಷಯಗಳನ್ನು ಮಾತಾಡುವುದಾಗಿ ಹೇಳಿದ್ದಾರೆ. ಆದರೆ, ಬಿಜೆಪಿಯಲ್ಲಿ ಮತ್ತೊಂದು ಬಣವಾಗಿ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ಇಂದು ಮಾಜಿ ಶಾಸಕ ಕುಮಾರ ಬಂಗಾರಪ್ಪ ಮನೆಯಲ್ಲಿ ಪುನಃ ಸಭೆ ಸೇರಿತು. ಸಭೆಯ ಅಜೆಂಡಾ ಏನು ಅನ್ನೋದು ಗೊತ್ತಾಗಿಲ್ಲ. ಯತ್ನಾಳ್, ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಮೊದಲಾದವರೆಲ್ಲ ಒಬ್ಬೊಬ್ಬರಾಗಿ ಕಾರಿಂದ ಇಳಿದು ಕುಮಾರ ಬಂಗಾರಪ್ಪ ಮನೆಯೊಳಗೆ ಹೋಗುವುದನ್ನು ನೋಡಬಹುದು. ಅತಿಥೇಯ ಮನೆ ಗೇಟ್ ವರೆಗೆ ಬಂದು ಬಿಜೆಪಿ ನಾಯಕರನ್ನು ಸ್ವಾಗತಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಸನಗೌಡ ಯತ್ನಾಳ್ ಪಕ್ಷದ ಹಿರಿಯರು, ಅವರು ಸಭೆ ನಡೆಸಿದರೆ ತಪ್ಪೇನು ಬಂತು? ಬಿವೈ ವಿಜಯೇಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
