Temple Tour: ಭಾರತಾಂಬೆಗೊಂದು ಭವ್ಯ ಮಂದಿರ ಇರೋದೆಲ್ಲಿ ಗೊತ್ತಾ?

| Updated By: preethi shettigar

Updated on: Oct 02, 2021 | 8:53 AM

ದೇವರಿಗೆ ಗುಡಿ ಕಟ್ಟೋದು ಮಾಮೂಲು. ಆದರೆ ಮಂಡ್ಯದ ಹಳ್ಳಿಯೊಂದರಲ್ಲಿ ಭಾರತಾಂಬೆಗೂ ಮಂದಿರ ಕಟ್ಟಿದ್ದಾರೆ.

ಜನನಿ ಜನ್ಮಭೂಮಿ ಅನ್ನೋದೇ ಪುಣ್ಯಕ್ಷೇತ್ರಕ್ಕೆ ಸಮ. ಕುಲ ದೇವರಿಗೆ, ಮನೆ ದೇವರಿಗೆ ಆಲಯ ಕಟ್ಟೋಕೆ ಜನರು ಹರಕೆ ಹೊರ್ತಾರೆ. ಆದರೆ ಇಲ್ಲೊಂದು ಗ್ರಾಮ ಭಾರತಾಂಬೆಗೂ ಮಂದಿರ ಕಟ್ಟಿ ದೇಶಪ್ರೇಮ ಮೆರೆದಿದ್ದಾರೆ. ದೇವರಿಗೆ ಗುಡಿ ಕಟ್ಟೋದು ಮಾಮೂಲು. ಆದರೆ ಮಂಡ್ಯದ ಹಳ್ಳಿಯೊಂದರಲ್ಲಿ ಭಾರತಾಂಬೆಗೂ ಮಂದಿರ ಕಟ್ಟಿದ್ದಾರೆ. ತಾಯಿ ಭಾರತಿಗೆ ಒಂದು ಗುಡಿ ಕಟ್ಟಿ ಅಲ್ಲಿ ಜನ್ಮಭೂಮಿಗೆ ಅಪಾರ ಕೊಡುಗೆ ಕೊಟ್ಟವರನ್ನ ದೇವರಾಗಿ ಪೂಜಿಸುತ್ತಿರುವ ಆಲಯ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಉಪ್ಪಿನಕೆರೆ ಗ್ರಾಮದಲ್ಲಿದೆ. ಉಪ್ಪಿನಕೆರೆ ಗ್ರಾಮದಲ್ಲಿ ಎಲ್ಲಾ ದೇವರುಗಳ ಮಂದಿರವಿದೆ. ಅದರ ಜತೆಗೆ ಭಾರತಾಂಬೆಯ ಆಲಯವೂ ಇದೆ. ಗ್ರಾಮಸ್ಥರೇ ಸೇರಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಭಾರತಾಂಬೆಯ ಮಂದಿರ ನಿರ್ಮಾಣ ಮಾಡಿದ್ದಾರೆ.