ಕಂದಾಯ ಇಲಾಖೆ ಸಿಬ್ಬಂದಿಗೆ ಶಾಸಕ ರಮೇಶ್ ಕುಮಾರ್ ನಿಂದನೆ; ವಿಡಿಯೋ ವೈರಲ್
ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಸಲುವಾಗಿ ಚರ್ಚಿಸಲು ನಡೆದ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ, ರೈತರಿಗೆ ಡಿಸಿಸಿ ಬ್ಯಾಂಕ್ ವಿತರಿಸುವ ಸಾಲಕ್ಕೆ ದಾಖಲೆ ಕೊಡಲು ಕಂದಾಯ ಇಲಾಖೆ ವಿಳಂಬ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕಂದಾಯ ಇಲಾಖೆ ನೌಕರರ ನಡವಳಿಕೆಯಿಂದ ರೈತರ ಪರದಾಟಕ್ಕೆ ಕೋಪ ವ್ಯಕ್ತಪಡಿಸಿದ್ದಾರೆ.
ಕೋಲಾರ: ಸಿಬ್ಬಂದಿಗೆ ಸರ್ಕಾರಿ ಸಂಬಳ ಬೇಕು, ಬಂದೋಬಸ್ತ್ ಬೇಕು. ಅನುಕೂಲ ಬೇಕು, ರೈತರ ಕಷ್ಟ ಬಗೆಹರಿಸುವುದು ಬೇಕಿಲ್ವಾ? ಎಂದು ಕಂದಾಯ ಇಲಾಖೆ ಸಿಬ್ಬಂದಿಗೆ ಶಾಸಕ ರಮೇಶ್ ಕುಮಾರ್ ನಿಂದಿಸಿದ್ದಾರೆ. ಅಲ್ಲದೇ ರೈತರನ್ನು ಕರೆತಂದು ನಿಮ್ಮನ್ನು ಸುಟ್ಟು ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸಪುರ ಪಟ್ಟಣದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಸಮ್ಮುಖದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ರಮೇಶ್ ಕುಮಾರ್, ಕಂದಾಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸದ್ಯ ರಮೇಶ್ ಕುಮಾರ್ ಅವರು ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಸಲುವಾಗಿ ಚರ್ಚಿಸಲು ನಡೆದ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ, ರೈತರಿಗೆ ಡಿಸಿಸಿ ಬ್ಯಾಂಕ್ ವಿತರಿಸುವ ಸಾಲಕ್ಕೆ ದಾಖಲೆ ಕೊಡಲು ಕಂದಾಯ ಇಲಾಖೆ ವಿಳಂಬ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕಂದಾಯ ಇಲಾಖೆ ನೌಕರರ ನಡವಳಿಕೆಯಿಂದ ರೈತರ ಪರದಾಟಕ್ಕೆ ಕೋಪ ವ್ಯಕ್ತಪಡಿಸಿದ್ದಾರೆ. ನೌಕರರು ಮನುಷ್ಯತ್ವ ಕಳೆದುಕೊಂಡಿದ್ದಾರೆ. ಕೆಲಸ ಮಾಡದ ನೌಕಕರನ್ನು ಬಾರಿಸಲು ಶುರು ಮಾಡ್ತೀನಿ. ಅವರ (ನೌಕರರ) ಸಂಘ ಬಂದು ಪ್ರತಿಭಟನೆ ಮಾಡಲೀ ನೋಡ್ತೀನಿ ಎಂದು ಶಾಸಕ ರಮೇಶ್ ಕುಮಾರ್ ಹೇಳಿದ್ದಾರೆ. ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:
ಜೆಡಿಎಸ್ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ: ಶಾಸಕ ಶ್ರೀನಿವಾಸಗೌಡ ವ್ಯಂಗ್ಯ
ಚಿತ್ರದುರ್ಗ: ಮತಾಂತರ ಆರೋಪ; ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ದೂರಿದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್