ಕೋಮಕಿ ಇಲೆಕ್ಟ್ರಿಕ್ ವೆಹಿಕಲ್ಸ್ ಎಕ್ಸ್ ಜಿ ಟಿ-ಎಕ್ಸ್1 ಇಲೆಕ್ಟ್ರಿಕ್ ಸ್ಕೂಟರ್ ರೂ. 45,000 ಗಳಿಗೆ ಮಾರಲು ನಿರ್ಧರಿಸಿದೆ
ಕೋಮಕಿ XGT-X1 ಎಲೆಕ್ಟ್ರಿಕ್ ಸ್ಕೂಟರ್ ಹೊಸ ಲಿಥಿಯಂ ಟೈಟನೇಟ್ ಬ್ಯಾಟರಿಯೊಂದಿಗೆ ಬರುತ್ತದೆ, ಇದು ಇಕೋ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 100 ಕಿಮೀ ನಿಂದ 120 ಕಿಮೀ ಅಂತರವನ್ನು ಕ್ರಮಿತ್ತದೆ.
ಲೀಥಿಯಂ-ಐಯಾನ್ ಬ್ಯಾಟರಿಯುಕ್ತ ಕೊಮಕಿ ಎಕ್ಸ್ ಜಿ ಟಿ-ಎಕ್ಸ್1 ಇಲೆಕ್ಟ್ರಿಕ್ ಸ್ಕೂಟರ್ಗಳನ್ನು ರೂ 60,000 ಬೆಲೆಗೆ 25,000 ಸ್ಕೂಟರ್ಗಳನ್ನು ಮಾರಾಟ ಮಾಡಿದ ಬಳಿಕ ಕೊಮಕಿ ಇಲೆಕ್ಟ್ರಿಕ್ ವೆಹಿಕಲ್ಸ್ ಕಡಿಮೆ ಬೆಲೆಯ ಆದರೆ ಲೆಡ್-ಆಸಿಡ್ ಬ್ಯಾಟರಿಯುಳ್ಳ ಮಾಡೆಲ್ ಸ್ಕೂಟರ್ಗಳನ್ನು ರೂ. 45,000 ಗಳಿಗೆ ಮಾರುತ್ತಿದೆ. ಇಲ್ಲಿ ತಿಳಿಸಿರೋದು ಭಾರತದಲ್ಲಿನ ಎಕ್ಸ್ ಶೋರೂಮ್ ಬೆಲೆಗಳು. ಕೊಮಕಿ ಎಕ್ ಜಿ ಟಿ-ಎಕ್ಸ್1 ಜೂನಲ್ಲಿ ಬಿಡುಗಡೆ ಮಾಡಿತ್ತು. ಇದಲ್ಲದೆ 12 ಪರವಾನಿಗೆ ಹೊಂದಿದ ಮತ್ತು 3 ಹೈ ಸ್ಪೀಡ್ ರಿಜಿಸ್ಟ್ರೇಶನ್ ಮಾಡೆಲ್ಗಳು ಕೊಮಕಿ ಕಂಪನಿಯೊಂದಿಗಿವೆ.
‘ಹಲವಾರು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ನಂತರ ಈ ಮಾಡೆಲ್ ಸೃಷ್ಟಿಸಲಾಗಿದೆ. ನಮ್ಮ ಅಪಾರ ಪರಿಶ್ರಮದ ಪ್ರಾಡಕ್ಟ್ ಅನ್ನು ಮಾರ್ಕೆಟ್ ಗೆ ಬಿಡುಗಡೆ ಮಾಡಲು ನಮಗೆ ಆತೀವ ಆನಂದವಾಗುತ್ತಿದೆ. ಎಂದಿನಂತೆ ಕೇವಲ ಕೊಮಕಿ ಇಲೆಕ್ಟ್ರಿಕ್ ವೆಹಿಕಲ್ಗಳಲ್ಲಿ ಮಾತ್ರ ಸಿಗುವ ವಿಶೇಷತೆ ಮತ್ತು ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಯಲ್ಲಿ ನಮ್ಮ ಇಲೆಕ್ಟ್ರಿಕ್ ಸ್ಕೂಟರ್ಗಳು ಗ್ರಾಹಕರಿಗೆ ಲಭ್ಯವಾಗುತ್ತಿವೆ,’ ಎಂದು ಕೊಮಕಿ ಎಲೆಕ್ಟ್ರಿಕ್ ವಿಭಾಗದ ನಿರ್ದೇಶಕ ಗುಂಜನ್ ಮಲ್ಹೋತ್ರಾ ಹೇಳಿದ್ದಾರೆ.
ಕೋಮಕಿ XGT-X1 ಎಲೆಕ್ಟ್ರಿಕ್ ಸ್ಕೂಟರ್ ಹೊಸ ಲಿಥಿಯಂ ಟೈಟನೇಟ್ ಬ್ಯಾಟರಿಯೊಂದಿಗೆ ಬರುತ್ತದೆ, ಇದು ಇಕೋ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 100 ಕಿಮೀ ನಿಂದ 120 ಕಿಮೀ ಅಂತರವನ್ನು ಕ್ರಮಿತ್ತದೆ. ಇದು ಟೆಲಿಸ್ಕೋಪಿಕ್ ಶಾಕರ್ಸ್, ಕಳುವು ಮಾಡಲಾಗದಂಥ ಲಾಕ್ ವ್ಯವಸ್ಥೆ, ರಿಮೋಟ್ ಲಾಕ್ ಮತ್ತು ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಇದು ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಮ್ ಮತ್ತು ಗಾತ್ರದ ಬಿಐಎಸ್ ಚಕ್ರಗಳೊಂದಿಗೆ ಸಜ್ಜಾಗಿದೆ. ಕೋಮಕಿ ಎಕ್ಸ್ ಜಿಟಿ- ಎಕ್ಸ್1 ಅನ್ನು 2+1 (1 ವರ್ಷದ ಸೇವಾ ಖಾತರಿ) ವರ್ಷಗಳ ವಾರಂಟಿಯನ್ನು ಲಿಥಿಯಂ-ಐಯಾನ್ ಬ್ಯಾಟರಿಗಳಿಗೆ ಮತ್ತು 1 ವರ್ಷ ಲೀಡ್-ಆಸಿಡ್ ಬ್ಯಾಟರಿ ಪ್ಯಾಕ್‌ಗೆ ನೀಡಲಾಗುತ್ತದೆ.
ಇದನ್ನೂ ಓದಿ: Ind vs Aus: ನಾಟ್ಔಟ್ ಎಂದ ಅಂಪೈರ್; ನಾನು ಔಟೆಂದು ಮೈದಾನದಿಂದ ಹೊರನಡೆದ ಪೂನಂ ರಾವುತ್! ವಿಡಿಯೋ