ನಿಮ್ಮ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಬೇಕಾದರೆ ಮನೆಯಲ್ಲಿ ಇವನ್ನೆಲ್ಲ ಮಾಡಲೇಬೇಡಿ

ತಂದೆ ತಾಯಿಗಳ ಹಿಂಸಾ ಪ್ರವೃತ್ತಿ ಮಕ್ಕಳಲ್ಲೂ ಹಿಂಸೆಯ ಮನೋಭಾವವನ್ನು ಬೆಳಸುತ್ತದೆ. ಅವರು ಸಮಾಜಕ್ಕೆ ಕಂಟಕರಾಗಿ ಬೆಳೆಯುವ ಸಾಧ್ಯತೆಯಿರುತ್ತದೆ.

ಪೋಷಕರು ಬಡವರಾಗಿರಲಿ ಇಲ್ಲವೇ ಶ್ರೀಮಂತರು. ತಮ್ಮ ಮಕ್ಕಳ ವ್ಯಕ್ತಿತ್ವದ ಮೇಲೆ ಮೊದಲ ಇಂಪ್ಯಾಕ್ಟ್ ಮಾಡುವವರು ಅವರೇ. ಅವರು ಬೀರಿದ ಇಂಪ್ಯಾಕ್ಟ್ ಉತ್ತಮ ಮತ್ತು ಸಕಾರಾತ್ಮಕವಾಗಿದ್ದರೆ ಅದು ಮಕ್ಕಳು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಬಹುದೊಡ್ಡ ಕಾಣಿಕೆ ನೀಡುತ್ತದೆ. ಆಫ್ ಕೋರ್ಸ್ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಶಾಲೆ ಮತ್ತು ಶಿಕ್ಷಕರು ಸಹ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಅದು ಬೇರೆ ವಿಷಯ. ಮಕ್ಕಳ ಬೆಳವಣಿಗೆಯ ಹಂತದಲ್ಲಿ ಕೆಲವು ತಪ್ಪುಗಳನ್ನು ತಂದೆ-ತಾಯಿಗಳು ಯಾವ ಕಾರಣಕ್ಕೂ ಮಾಡಬಾರದು. ಯಾಕೆಂದರೆ ಅವು ಬೆಳೆಯುವ ಮಕ್ಕಳ ಮೇಲೆ ಘೋರ ಪರಿಣಾಮ ಬೀರುವಂಥ ತಪ್ಪು ವರ್ತನೆಗಳು.

ಗಂಡ-ಹೆಂಡಿರ ಮಧ್ಯೆ ಜಗಳಗಳು ಸಾಮಾನ್ಯ. ಹಾಗಂತ ಅವರು ಯಾವತ್ತೂ ಮಕ್ಕಳೆದಿರು ಜಗಳವಾಡಬಾರದು. ಇದು ಬಹಳ ಕೆಟ್ಟ ಬಿಹೇವಿಯರ್ ಎನಿಸಿಕೊಂಡಿದೆ. ಪರಸ್ಪರ ಬೈದಾಡುವುದು, ಜೋರಾಗಿ ಕಿರುಚುವುದು, ಒಬ್ಬರನ್ನೊಬ್ಬರು ದೂಷಿಸುವುದು-ಇವನ್ನೆಲ್ಲ ಮಾಡಲೇಕೂಡದು. ಇನ್ನು ಮಕ್ಕಳೆದಿರು ಕೈ ಕೈ ಮಿಲಾಯಿಸಿ ಹೊಡೆದಾಡುವುದು ಪಾಪವಷ್ಟೇ ಅಲ್ಲ ಅಪರಾಧವೂ ಹೌದು.

ತಂದೆ ತಾಯಿಗಳ ಹಿಂಸಾ ಪ್ರವೃತ್ತಿ ಮಕ್ಕಳಲ್ಲೂ ಹಿಂಸೆಯ ಮನೋಭಾವವನ್ನು ಬೆಳಸುತ್ತದೆ. ಅವರು ಸಮಾಜಕ್ಕೆ ಕಂಟಕರಾಗಿ ಬೆಳೆಯುವ ಸಾಧ್ಯತೆಯಿರುತ್ತದೆ. ಮನಶಾಸ್ತ್ರಜ್ಞರ ಪ್ರಕಾರ ಮನೆಯಲ್ಲಿ ಆಹ್ಲಾದಕರ ಬದಲು ಜಗಳ-ತಂಟೆ-ಹಿಂಸೆಯಂಥ ವಾತಾವರಣವಿದ್ದರೆ ಮಕ್ಕಳು ಡ್ರಗ್ಸ್ ಗೆ ದಾಸರಾಗುವ ಸಾಧ್ಯತೆ ಇರುತ್ತದೆಯಂತೆ. ಹಾಗಾಗಿ, ತಂದೆ-ತಾಯಿಗಳು ಬಹಳ ಎಚ್ಚರದಿಂದ ವರ್ತಿಸಬೇಕು.

ಹಾಗಂತ ಮಕ್ಕಳನ್ನು ಅತಿಯಾದ ಶಿಸ್ತಿನಲ್ಲಿ ಬೆಳಸುವುದು ಕೂಡ ಸರಿಯಲ್ಲ. ಅತಿಯಾದರೆ ಅಮೃತವೂ ವಿಷವೆಂದು ದೊಡ್ಡವರು ಹೇಳುತ್ತಾರೆ. ಹಾಗಾಗಿ ಮಕ್ಕಳಿಗೆ ಮನೆಯಲ್ಲಿ ಸೌಹಾರ್ದಯುತ ವಾತಾವರಣ ಕಲ್ಪಿಸಬೇಕು. ಗೆರೆಯೊಂದನ್ನು ಎಳೆದು ಇದನ್ನು ದಾಟಕೂಡದು ಎಂಬಂಥ ಶಿಸ್ತು ಮಕ್ಕಳಿಗೆ ಅಸಹನೀಯವೆನಿಸುತ್ತದೆ.

ಹಾಗೆಯೇ ಮಕ್ಕಳೆದಿರು ತಂದೆ-ತಾಯಿಗಳ ಮಾತುಕತೆ, ಸಂಭಾಷಣೆಯಲ್ಲಿ ಬಿರುಸುತನ, ಸಮಾಜ ವಿರೋಧಿ ಛಾಯೆ ಇರಕೂಡದು. ಯಾರನ್ನೋ ಹೀಯಾಳಿಸುವಂಥ, ಅವರ ಬಗ್ಗೆ ಕೀಳಾಗಿ ಮಾತಾಡುವಂಥದ್ದು ನಡೆಯಬಾರದು. ಅದು ಮಕ್ಕಳ ವ್ಯಕ್ತಿತ್ವದ ಮೇಲೆ ಅಡ್ಡಪರಿಣಾಮ ಬೀರುತ್ತದೆ.

ಕೊರೊನಾ ಸೃಷ್ಟಿಸಿರುವ ಅವಾಂತರದಿಂದಾಗಿ ಪ್ರತಿಯೊಬ್ಬರು ಒತ್ತಡದಲ್ಲಿದ್ದಾರೆ. ಪೋಷಕರು ತಾವು ಖುದ್ದು ಸಮರ್ಥವಾಗಿ ಒತ್ತಡವನ್ನು ನಿಭಾಯಿಸಿ ಆ ಕಲೆಯನ್ನು ಮಕ್ಕಳಿಗೂ ಕಲಿಸಬೇಕು. ತಂದೆ-ತಾಯಿಗಳಿಗೆ ತಾಳ್ಮೆ ಬಹು ಮುಖ್ಯ ಎನ್ನುವುದನ್ನು ಮರೆಯಬಾರದು.

ಇದನ್ನೂ ಓದಿ:  Viral Video: ದೆಹಲಿ ಏರ್​ಪೋರ್ಟ್​ನೊಳಗೆ ನುಗ್ಗಿ ಜ್ಯೂಸ್​ ಕುಡಿದು, ಬಾರ್​ನಲ್ಲಿ ಕುಳಿತ ಕೋತಿ; ವಿಡಿಯೋ ಇಲ್ಲಿದೆ

Click on your DTH Provider to Add TV9 Kannada