ಇನ್ನು ನಿಮ್ಮ ವಾಟ್ಸ್ಯಾಪ್ ಮೂಲಕವು ಪೇಂಮೆಂಟ್ ಮಾಡುವ ಅವಕಾಶ, ಪೇಮೆಂಟ್ಸ್​ ಬ್ಯಾಕ್​​ಗ್ರೌಂಡ್ ಫೀಚರ್ ಅದಾಗಲೇ ಲಾಂಚ್ ಆಗಿದೆ!

ನಮ್ಮೆಲ್ಲರ ಅಚ್ಚುಮೆಚ್ಚಿನ ವಾಟ್ಸ್ಯಾಪ್ ಕೂಡ ಡಿಜಿಟಲ್ ಪೇಮೆಂಟ್ ಮಾಡುವ ಸವಲತ್ತನ್ನು ತನ್ನ ಗ್ರಾಹಕರಿಗೆ ಕಲ್ಪಿಸುತ್ತಿದೆ. ಅಸಲಿಗೆ ಈ ಫೀಚರ್ ಅದಾಗಲೇ ಪೇಮೆಂಟ್ಸ್ ಪಂಕ್ಷನ್ನಾಗಿ ಲಾಂಚ್ ಆಗಿಬಿಟ್ಟಿದೆ.

ಡಿಜಿಟಲೀಕರಣಗೊಂಡಿರುವ ಭಾರತದಲ್ಲಿ ಹಣ ಪಾವತಿಸಲು ನೂರೆಂಟು ವಿಧಗಳು ಮಾರಾಯ್ರೇ. ಸ್ಟಾಲ್ ಒಂದರಲ್ಲಿ ಟೀ ಕುಡಿದು ಅಥವಾ ಹೊಟೆಲ್ನಲ್ಲಿ ತಿಂಡಿ ತಿಂದ ಮೇಲೆ ಇಲ್ಲವೇ ಅಂಗಡಿಯೊಂದರಲ್ಲಿ ಮನೆಗೆ ಬೇಕಾಗುವ ಸಾಮಾನು ಖರೀದಿಸಿದ ನಂತರ ನಿಮ್ಮ ವ್ಯಾಲೆಟ್ ತೆಗೆದು ಅದರಲ್ಲಿರುವ ಹಣ ಎಣಿಸಿಕೊಡುವ ಜಮಾನಾ ಹಿಂದಕ್ಕೋಯ್ತು ಮಾರಾಯ್ರೇ. ಈಗೇನಿದ್ರೂ ಡಿಜಿಟಲ್ ಪೇಮೆಂಟ್. ಹಾಗೆ ಹಣ ಪಾವತಿಸಲು ಹತ್ತಾರು ಆಪ್ ಗಳಿವೆ. ನಮ್ಮೆಲ್ಲರ ಅಚ್ಚುಮೆಚ್ಚಿನ ವಾಟ್ಸ್ಯಾಪ್ ಕೂಡ ಡಿಜಿಟಲ್ ಪೇಮೆಂಟ್ ಮಾಡುವ ಸವಲತ್ತನ್ನು ತನ್ನ ಗ್ರಾಹಕರಿಗೆ ಕಲ್ಪಿಸುತ್ತಿದೆ. ಅಸಲಿಗೆ ಈ ಫೀಚರ್ ಅದಾಗಲೇ ಪೇಮೆಂಟ್ಸ್ ಪಂಕ್ಷನ್ನಾಗಿ ಲಾಂಚ್ ಆಗಿಬಿಟ್ಟಿದೆ.

ವಾಟ್ಸ್ಯಾಪ್ ನ ಭಾರತೀಯ ಬಳಕೆದಾರರಿಗಾಗಿ ಪೇಂಮೆಂಟ್ಸ್ ಬ್ಯಾಕ್ಗ್ರೌಂಡ್ ಫೀಚರ್ ಅನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ದೇಶದಲ್ಲಿರುವ ವಾಟ್ಸ್ಯಾಪ್ ಬಳಕೆದಾರರು ಬರ್ತ್ಡೇಗಳಿಗೆ, ರಜೆಗಳಿಗೆ ಇಲ್ಲವೇ ಉಡುಗೊರೆ ಮತ್ತು ಪ್ರಯಾಣಗಳಿಗಾಗಿ ಬ್ಯಾಕ್ ಗ್ರೌಂಡ್ಗಳನ್ನು ಬಳಸಿ ಕಾಂಪ್ಲಿಮೆಂಟ್ ಮಾಡಬಹುದಾಗಿದೆ.

ಪೇಮೆಂಟ್ಸ್ ಬ್ಯಾಕ್ ಗ್ರೌಂಡ್ ಫೀಚರ್ ಹಿಂದಿನ ಪ್ರಮುಖ ಐಡಿಯಾ ಹಣ ಕಳಿಸುವ ಮತ್ತು ಸ್ವೀಕರಿಸುವ ವ್ಯಕ್ತಿಗಳ ನಡುವೆ ನಡೆಯುವ ವ್ಯವಹಾರಕ್ಕೆ ಅಭಿವ್ಯಕ್ತಿಗೊಳಿಸುವ ಅಂಶವನ್ನು ಹೆಚ್ಚಿನ ವ್ಯಕ್ತಿಗತ ಅನುಭವ ಸೃಷ್ಟಿಸುವುದಕ್ಕಾಗಿದೆ ಎಂದು ವಾಟ್ಸ್ಯಾಪ್ ಹೇಳಿದೆ.

‘ಜನ ತಮ್ಮ ಕುಟುಂಬ ಮತ್ತು ಸ್ನೇಹಿತರ ತಮ್ಮ ಅಭಿಪ್ರಾಯ ಮತ್ತು ಅನುಭವಗಳನ್ನು ಹಂಚಿಕೊಳ್ಳಲು ವಾಟ್ಸ್ಯಾಪ್ ಒಂದು ಸುರಕ್ಷಿತ ಸ್ಥಳವಾಗಿದೆ. ಪೇಮೆಂಟ್ಸ್ ಬ್ಯಾಕ್ ಗ್ರೌಂಡ್ ಅನ್ನು ಪರಿಚಯಿಸಿರುವುದರಿಂದ ವಾಟ್ಸ್ಯಾಪ್ ಮೂಲಕ ನಡೆಯುವ ಪ್ರತಿದಿನದ ಹಣಕಾಸಿನ ವ್ಯವಹಾರಗಳಿಗೆ ಒಂದು ಭಾವನಾತ್ಮಕ ಮತ್ತು ಅಷ್ಟೇ ರೋಮಾಂಚಕ ಲೇಪವನ್ನು ಒದಗಿಸುತ್ತದೆ,’ ಎಂದು ವಾಟ್ಸ್ಯಾಪ್ ಪೇಮೆಂಟ್ಸ್ ನಿರ್ದೇಶಕ ಮನೀಶ್ ಮಹಾತ್ಮೆ ಹೇಳಿದ್ದಾರೆ.

ಇದನ್ನೂ ಓದಿ:  Ind vs Aus: ನಾಟ್​ಔಟ್ ಎಂದ ಅಂಪೈರ್​; ನಾನು ಔಟೆಂದು ಮೈದಾನದಿಂದ ಹೊರನಡೆದ ಪೂನಂ ರಾವುತ್! ವಿಡಿಯೋ

Click on your DTH Provider to Add TV9 Kannada